ತುಮಕೂರು (ಆ.13) : ಕಾಂಗ್ರೆಸ್‌ ಪಕ್ಷದ ಮಹತ್ವಾಕಾಂಕ್ಷಿ ‘ಆರೋಗ್ಯ ಹಸ್ತ’ ಕಾರ್ಯಕ್ರಮದ ಅನುಷ್ಠಾನದ ಬಗ್ಗೆ ತುಮಕೂರು ಕಾಂಗ್ರೆಸ್‌ ಕೊರೋನಾ ವಾರಿಯರ್‌ಗಳೊಂದಿಗೆ ಚರ್ಚಿಸಿ, ಸಿದ್ಧತೆಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಚಾಲನೆ ನೀಡಿದರು.

ರಾಜ್ಯಾದ್ಯಂತ 6,025 ಗ್ರಾಮ ಪಂಚಾಯ್ತಿಗಳಲ್ಲೂ ಪ್ರತಿ ಗ್ರಾಮ ಪಂಚಾಯ್ತಿಗೆ ಇಬ್ಬರು ಕೊರೋನಾ ವಾರಿಯರ್ಸ್‌ ನೇಮಕ ಮಾಡಿ ಪ್ರತಿ ಮನೆಗೆ ತೆರಳಿ ಆರೋಗ್ಯ ಸಮೀಕ್ಷೆ ನಡೆಸುವಂತಹ ಕಾರ್ಯಕ್ರಮವನ್ನು ಕಾಂಗ್ರೆಸ್‌ ಹಮ್ಮಿಕೊಂಡಿದೆ.

ಬೆಂಗಳೂರು ,ಗಲಭೆ: ಅಖಂಡ ಶ್ರೀನಿವಾಸ ಮೂರ್ತಿ–ಡಿಕೆ ಶಿವಕುಮಾರ್ ಭೇಟಿ.

ಇದರ ಅಂಗವಾಗಿ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳಿಧರ ಹಾಲಪ್ಪ, ತುಮಕೂರಿನಲ್ಲಿ ಸ್ವಯಂಪ್ರೇರಿತವಾಗಿ ಸೇವೆ ಮಾಡಲು ಮುಂದೆ ಬಂದ ಸವಿತಾ ಸಮಾಜ, ವಿಶ್ವಕರ್ಮ ಸಮಾಜ, ಮಡಿವಾಳ ಜನಾಂಗದ ಸದಸ್ಯರು ಹಾಗೂ ರೈತರು, ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ವಾಹನ ಚಾಲಕರು, ವಿವಿಧ ವೃತ್ತಿಪರರು ಹಾಗೂ ಶ್ರಮಿಕ ವರ್ಗದವರನ್ನು ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಕರೆ ತಂದು ಡಿ.ಕೆ.ಶಿವಕುಮಾರ್‌ ಅವರಿಂದ ನೇಮಕ ಪ್ರಮಾಣಪತ್ರ ಕೊಡಿಸಿದರು.

ಉರಿವ ಬೆಂಕಿಗೆ ಬಿಜೆಪಿಯಿಂದ ತುಪ್ಪ: ಡಿಕೆಶಿ ಕಿಡಿ..

ಇದೇ ವೇಳೆ ತುಮಕೂರಿಗೆ ಸೇರಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್‌.ರೇವಣ್ಣ ಅವರು ದೇಣಿಗೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದರು.

ಡಿಕೆಶಿ ಕನಸು:

ಬಳಿಕ ಮಾತನಾಡಿದ ಮುರಳಿಧರ ಹಾಲಪ್ಪ, ಡಿ.ಕೆ.ಶಿವಕುಮಾರ್‌ ಅವರ ಕನಸಿನ ಯೋಜನೆಗೆ ಸಿದ್ಧತೆ ಪ್ರಾರಂಭವಾಗಿದೆ. ಆ.16ರಂದು ತಾಲೂಕುವಾರು ವಾರಿಯರ್ಸ್‌ಗೆ ವೈದ್ಯರು ತರಬೇತಿ ನೀಡಲಿದ್ದಾರೆ. ಈಗಾಗಲೇ ಪ್ರತಿಯೊಬ್ಬರಿಗೂ ತಲಾ 10 ಸುರಕ್ಷತಾ ಕಿಟ್‌ ವಿತರಿಸಿದ್ದು ಅವರು ಮನೆ-ಮನೆಗೆ ತೆರಳಿ ಆರೋಗ್ಯ ಸಮೀಕ್ಷೆ ನಡೆಸಲಿದ್ದಾರೆ. ಆರೋಗ್ಯ ಸಮಸ್ಯೆಯಿದ್ದರೆ ಹತ್ತಿರದ ಆಸ್ಪತ್ರೆಗೆ ಶಿಫಾರಸು ಮಾಡುತ್ತಾರೆ ಎಂದರು.