ಮುಂಡಗೋಡ(ಫೆ.17): ಗೂಂಡಾಗಿರಿ ನಡೆಸುವ ಮೂಲಕ ಬಡವರ ಮೇಲೆ ದಬ್ಬಾಳಿಕೆ ಮಾಡುವ ಕೆಲಸ ಉತ್ತರ ಕನ್ನಡ ಜಿಲ್ಲೆಯ ರಾಜಕಾರಣದಲ್ಲಿ ಮೊದಲ ಬಾರಿಗೆ ನೋಡುತ್ತಿದ್ದು ಇದು ಬಹಳ ದಿನ ನಡೆಯುವುದಿಲ್ಲ ಎಂದು ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ಹೇಳಿದ್ದಾರೆ. 

ಪಟ್ಟ​ಣ​ದಲ್ಲಿ ನಡೆದ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ಕಾಂಗ್ರೆಸ್‌ ಸರ್ಕಾ​ರ​ವಿ​ದ್ದಾಗ ಪೆಟ್ರೋಲ್‌ ಬೆಲೆ 60 ಇದ್ದಾಗ ಬಿಜೆಪಿ ದೇಶಾ​ದ್ಯಂತ ಪ್ರತಿ​ಭ​ಟನೆ ಮಾಡಿತು. ಇದೀಗ ಅವರೇ ಅಧಿ​ಕಾ​ರ​ದ​ಲ್ಲಿದ್ದು ಪೆಟ್ರೋಲ್‌ ಬೆಲೆ 100 ಗಡಿಗೆ ಬಂದಿದೆ. ಹೀಗೇಕೆ ಪ್ರತಿ​ಭ​ಟನೆ ಮಾಡು​ತ್ತಿಲ್ಲ ಎಂದು ಪ್ರಶ್ನಿ​ಸಿದ ಅವರು, ನಾವು ಪ್ರತಿ​ಭ​ಟನೆ ಮಾಡು​ತ್ತೇವೆ ಎಂದು ಸವಾಲು ಹಾಕಿ​ದ​ರು.

ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ದಿನದಿಂದ ದಿನಕ್ಕೆ ಏರು​ತ್ತಿದೆ. ಕಚ್ಚಾ ತೈಲ ಬೆಲೆ ಕಡಿಮೆಯಿದ್ದರೂ ಸಹ ಸರ್ಕಾರ ಬೆಲೆ ಏರಿ​ಸಿದೆ. ಇದರಿಂದ ಬಡ ಜನರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ನಿಮ್ಮದೇ ಸರ್ಕಾ​ರ​ವಿದ್ದು ಪ್ರತಿ​ಭ​ಟನೆ ನಡೆಸುವ ಮೂಲಕ ಬೆಲೆ ಏರಿಕೆ ಕಡಿಮೆ ಮಾಡಿ ಬಡ ಜನರಿಗೆ ಅನುಕೂಲ ಮಾಡಿ​ಕೊಡಿ. ಫೇಸ್‌​ಬುಕ್‌, ಟ್ವಿಟ್ಟರ್‌ ಬಿಟ್ಟು ರಾಜ್ಯದಲ್ಲಿ ನಡೆಯುತ್ತಿರುವ ಅನ್ಯಾಯ ಸರಿ​ಪ​ಡಿಸಿ ಎಂದು ಒತ್ತಾ​ಯಿ​ಸಿ​ದ​ರು.
ರೈತರ ಬೆಳೆಗೆ ಸಮರ್ಪಕ ಬೆಲೆ ಇಲ್ಲದೆ ಸಂಕಷ್ಟಅನು​ಭ​ವಿ​ಸಿ​ದ್ದಾರೆ. ಸರ್ಕಾರ ಇವರ ಬಗ್ಗೆ ಯೋಜ​ನೆ​ಗ​ಳನ್ನು ಜಾರಿ​ಗೊ​ಳಿ​ಸಿಲ್ಲ ಎಂದು ಆರೋ​ಪಿ​ಸಿದ ಅವರು, ಸಚಿವ ಸ್ಥಾನ ಹಾಗೂ ಮುಖ್ಯಮಂತ್ರಿ ಬದಲಾವಣೆಯಂತಹ ಚರ್ಚೆಗಳಲ್ಲಿ ದಿನ ಕಳೆ​ಯು​ತ್ತಿದೆ ಎಂದು ಕಿಡಿ​ಕಾ​ರಿ​ದರು.

'ಕುಮಾರಸ್ವಾಮಿಯೂ ರಾಮ​ಮಂದಿ​ರಕ್ಕೆ ದೇಣಿಗೆ ನೀಡ​ಬ​ಹು​ದು'

ಈ ಸರ್ಕಾ​ರ​ದಲ್ಲಿ ಅಭಿ​ವೃದ್ಧಿ ಕೆಲ​ಸ​ಗಳು ಆಗು​ತ್ತಿಲ್ಲ. ಹಿಂದಿನ ಸಿದ್ದ​ರಾ​ಮಯ್ಯ ಸರ್ಕಾ​ರ​ದಲ್ಲಿ ಬಿಡು​ಗ​ಡೆ​ಯಾದ ಅನು​ದಾ​ನ​ದಲ್ಲಿ ಈ ಕ್ಷೇತ್ರ​ದಲ್ಲಿ ಅಭಿ​ವೃದ್ಧಿ ಕಾರ್ಯ​ಗಳು ನಡೆ​ಯು​ತ್ತಿವೆ ಎಂದ ಅವರು, ಮನೆಯಲ್ಲಿ ಬೈಕ್‌, ಟಿವಿ, ಫ್ರೀಡ್ಜ್‌ಗಳಿದ್ದರೆ ಬಿಪಿಎಲ್‌ ಕಾರ್ಡ್‌ ರದ್ದು ಪಡಿಸುತ್ತೇವೆ ಎಂಬ ಆಹಾರ ಸಚಿವರ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಹಾಗಾದರೆ ಬಡವರ ಮನೆಯಲ್ಲಿ ಟಿವಿ, ಬೈಕ್‌ ಇರಬಾರದೆ? ಎಂದು ಪ್ರಶ್ನಿಸಿದರು.

ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ ಮಾತನಾಡಿ, 13 ಗ್ರಾಪಂಗಳಲ್ಲಿ ಬಿಜೆಪಿ, 3ರಲ್ಲಿ ಮಾತ್ರ ಕಾಂಗ್ರೆಸ್‌ ಬೆಂಬ​ಲಿ​ಗರು ಅಧಿ​ಕಾ​ರಕ್ಕೆ ಬರು​ತ್ತಾರೆ ಎಂದು ಹೇಳಿ​ದ್ದರು. ಆದರೆ, ಕಾಂಗ್ರೆಸ್‌ 7ರಲ್ಲಿ ಅಧಿ​ಕಾ​ರ ಪಡೆ​ದಿದೆ. ತಾಲೂಕಿನಲ್ಲಿ ಕಾಂಗ್ರೆಸ್‌ ಪಕ್ಷವಿಲ್ಲದಂತೆ ಮಾಡುತ್ತೇವೆ ಎಂದಿದ್ದವ​ರಿಗೆ ಗ್ರಾಪಂ ಚುನಾ​ವ​ಣೆ​ಯಲ್ಲಿ ತಕ್ಕ ಉತ್ತರ ನೀಡಿದ್ದು ಮುಂದಿನ ದಿನ​ಗ​ಳಲ್ಲಿ ಸಾಕಷ್ಟುಜನರು ಕಾಂಗ್ರೆಸ್‌ ಸೇರ್ಪ​ಡೆ​ಯಾ​ಗ​ಲಿ​ದ್ದಾರೆ ಎಂದ​ರು

ಆನಂತರ ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಈ ವೇಳೆ ಮುಖಂಡರಾದ ಎಚ್‌.ಎಂ. ನಾಯ್ಕ, ಅಶೋಕ ಶಿರ್ಶಿಕರ, ಎನ್‌.ಎಂ. ದುಂಡಸಿ, ರಾಮಕೃಷ್ಣ ಮೂಲಿಮನಿ, ಶಾರದಾ ರಾಠೋಡ, ಗೌಸ ಮಖಾನದಾರ ಇದ್ದ​ರು.