ಮೈಸೂರು (ಜ.25):   ಸಿದ್ದರಾಮಯ್ಯ ಅವರನ್ನು ಸಮಾಜದಿಂದ ಬಹಿಷ್ಕರಿಸುತ್ತೇವೆ ಎಂದು  ಎಚ್. ವಿಶ್ವನಾಥ್ ಹೇಳಿರುವುದು ಸರಿಯಲ್ಲ.  ಬಹಿಷ್ಕಾರ ಎಂಬುದು ಅಸಂವಿಧಾನಿಕ ಪದವಾಗಿದೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ ಹೇಳಿದರು. 

ಮೈಸೂರಿನಲ್ಲಿಂದು ಮಾತನಾಡಿದ ಲಕ್ಷ್ಮಣ್ , ವಿಶ್ವನಾಥ್ ಸಾಹಿತ್ಯ ಕೂಟದಲ್ಲಿ ಎಂಎಲ್‌ಸಿ ಆಗಿದ್ದಾರೆ.  ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಕುಂದು ತರಲು ಪ್ರಯತ್ನ ಮಾಡಲಾಗುತ್ತಿದೆ.  ಆರ್ ಎಸ್ ಎಸ್ ಹಾಗೂ ಎಚ್ ವಿಶ್ವನಾಥ್ ಅವರಿಂದ ಈ  ಪ್ರಯತ್ನ ನಡೆಯುತ್ತಿದೆ ಎಂದರು. 

ನನ್ನ ಮಗಳು ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳಲಿ ಎಂದ ಕಾಂಗ್ರೆಸ್ ಶಾಸಕ ...

ಸಿದ್ದರಾಮಯ್ಯ ಅವರು ಒಂದು ಜಾತಿ ವರ್ಗಕ್ಕೆ ಸೇರಿದವರಲ್ಲ. ವಿಶ್ವನಾಥ್ ಬಹಿಷ್ಕಾರ ಪದ ಹೇಗೆ ಬಳಸಿದರು. ಅವರಿಗೆ ಈ ಬಗ್ಗೆ ನಾಚಿಕೆಯಾಗಬೇಕು.  ಇದು ಅಕ್ಷಮ್ಯ ಅಪರಾಧ ಇದಕ್ಕೆ ನಮ್ಮ ವಿರೋಧವಿದೆ.  ಆ ಹೇಳಿಕೆಯನ್ನು ವಿಶ್ವನಾಥ್ ವಾಪಸ್ಸು ತೆಗೆದುಕೊಳ್ಳಬೇಕು ಎಂದು ಲಕ್ಷ್ಮಣ್ ಒತ್ತಾಯಿಸಿದರು. 

 ಸಿಎಂ ಕೈವಾಡ : ಅಕ್ರಮ ಗಣಿಗಾರಿಕೆಯನ್ನ ಸಕ್ರಮಗೊಳಿಸಿಕೊಳ್ಳಿ ಎನ್ನುವ ಸಿಎಂ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಲಕ್ಷ್ಮಣ್  ಸಿಎಂ ಹೇಳಿಕೆ ವಿಚಾರ.
ಅಕ್ರಮ ಗಣಿಕಾರಿಕೆ ಹಿಂದೆ ಸಿ ಎಂ ಕೈವಾಡ ಇದೆ.  ಗಣಿಗಾರಿಕೆ ನಡೆಸುವವರ ಹಿಂದೆ ಯಡಿಯೂರಪ್ಪ ಇದ್ದಾರೆ. ಅದಕ್ಕಾಗೆ ಈ ಹೇಳಿಕೆಯನ್ನ ಸಿಎಂ ಹೇಳುತ್ತಿದ್ದಾರೆ ಎಂದರು. 
 
90  ವರ್ಷದ ಹಳೆಯ‌ ಡ್ಯಾಂ ನ ಉಳಿಸುವ ನಿಟ್ಟಿನಲ್ಲಿ ತಕ್ಷಣ ಡ್ಯಾಂ ಸುತ್ತಲಿನ ಅಕ್ರಮ ಗಣಿಗಾರಿಕೆ ನಿಲ್ಲಿಸಿಬೇಕು. ಅಕ್ರಮ ಗಣಿಗಾರಿಕೆಯವರ ವಿರುದ್ದ ಕ್ರಿಮಿನಲ್ ಕೇಸ್ ಗಳನ್ನ ದಾಖಲು ಮಾಡಬೇಕು ಎಂದು ಲಕ್ಷ್ಮಣ್ ಹೇಳಿದರು.