Udupi: ಕನ್ನರ್ಪಾಡಿ ಶ್ರೀ ಜಯದುರ್ಗಪರಮೇಶ್ವರಿ ದೇವಸ್ಥಾನದಲ್ಲಿ ಮೊದಲ ಬಾರಿಗೆ ಕೋಟಿ ಕುಂಕುಮಾರ್ಚನೆ!
ತಮ್ಮ ಇಷ್ಟ ದೇವರನ್ನು ತಾವು ಇಷ್ಟಪಟ್ಟ ಹಾಗೆ ಅರ್ಚಿಸಿ ಖುಷಿಪಡುವುದು ಎಂದರೆ ಭಕ್ತರಿಗೆ ಎಲ್ಲಿಲ್ಲದ ಪ್ರೀತಿ. ದೇವರ ಪ್ರಸಾದವೆಂದು ನಾವು ಹಣೆಗೆ ಹಚ್ಚುವ ಕುಂಕುಮದ ಬಗ್ಗೆ ಅಪಾರ ಶ್ರದ್ಧೆ ಇವತ್ತಿಗೂ ಇದೆ.
ವರದಿ: ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಏ.08): ತಮ್ಮ ಇಷ್ಟ ದೇವರನ್ನು (God) ತಾವು ಇಷ್ಟಪಟ್ಟ ಹಾಗೆ ಅರ್ಚಿಸಿ ಖುಷಿಪಡುವುದು ಎಂದರೆ ಭಕ್ತರಿಗೆ (Devotees) ಎಲ್ಲಿಲ್ಲದ ಪ್ರೀತಿ. ದೇವರ ಪ್ರಸಾದವೆಂದು ನಾವು ಹಣೆಗೆ ಹಚ್ಚುವ ಕುಂಕುಮದ ಬಗ್ಗೆ ಅಪಾರ ಶ್ರದ್ಧೆ ಇವತ್ತಿಗೂ ಇದೆ. ದೇವರಿಗೆ ಅರ್ಪಣೆ ಯಾದ ಕುಂಕುಮವನ್ನು ಹಣೆಗೆ ತಿಲಕ ವಾಗಿಟ್ಟರೆ ದೇವರ ಅಭಯ ನಮ್ಮ ಜೊತೆಗೆ ಇರುತ್ತೆ ಅನ್ನೋದು ನಂಬಿಕೆ. ಅದರಲ್ಲೂ ಅರ್ಚನೆ ಪ್ರಿಯೆ ಶ್ರೀ ದೇವಿಗೆ, ಕುಂಕುಮಾರ್ಚನೆ ವಿಶೇಷ ಸೇವೆ. ಇಷ್ಟಾರ್ಥ ಸಿದ್ದಿಗಾಗಿ ನಡೆಸುವ ಕುಂಕುಮಾರ್ಚನೆಯಲ್ಲೇ ವಿಶೇಷ ಎಂಬಂತೆ, ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಕೋಟಿ ಕುಂಕುಮಾರ್ಚನೆ (Koti Kumkumarchane) ಉಡುಪಿಯಲ್ಲಿ (Udupi) ನಡೆಯಿತು.
ನಗರದ ಕನ್ನರಪಾಡಿಯಲ್ಲಿರುವ ತಾಯಿ ಜಯದುರ್ಗೆಗೆ (Sri Jayadurgaparameshwari) ನಡೆದ ಕೋಟಿ ಕುಂಕುಮಾರ್ಚನೆಯ ಸೊಬಗು ಭಕ್ತಜನರ ಮನಸೂರೆಗೊಂಡಿತು. ದೇವಿಯ ದೇವಸ್ಥಾನದಲ್ಲಿ (Temple) ಕುಂಕುಮಾರ್ಚನೆ ಸೇವೆಗೆ ವಿಶೇಷ ಮಹತ್ವ ಇದೆ. ಶ್ರೀ ದೇವಿಯ ನಾಮ ಜನಪವನ್ನು ಮಾಡುತ್ತಾ ಕುಂಕುಮವನ್ನು ಅರ್ಚನೆ ಮಾಡುವುದಕ್ಕೆ ಕುಂಕುಮಾರ್ಚನೆ ಅಂತಾರೆ. ದೇವಿಗೆ ಕುಂಕುಮಾರ್ಚನೆ ಮಾಡಿದರೆ ಮನದ ಇಷ್ಟಾರ್ಥ ಸಿದ್ದಿ ಆಗಿ, ಶ್ರೇಯಸ್ಸು ಲಭಿಸುತ್ತೆ ಅನ್ನೋದು ಭಕ್ತರ ನಂಬಿಕೆ.
ಇಂತಹ ಕುಂಕುಮಾರ್ಚನೆ ಸೇವೆಯಲ್ಲೆ ಅಪರೂದ ದಾಖಲೆ ಎಂಬಂತೆ ಕೋಟಿ ಕುಂಕುಮಾರ್ಚನೆ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಉಡುಪಿಯ ಕನ್ನರ್ಪಾಡಿಯ ಜಯ ದುರ್ಗಾ ಪರಮೇಶ್ವರಿ ದೇವಿಗೆ ನೆರವೇರಿಸಲಾಯಿತು. ಉಡುಪಿಯ ಇತಿಹಾಸ ಪ್ರಸಿದ್ಧ, ಅಂದರೆ ಸುಮಾರು 5 ಸಾವಿರಕ್ಕೂ ಹೆಚ್ಚಿನ ವರ್ಷಗಳ ಇತಿಹಾಸ ಇರುವ, ಕಣ್ವ ಮಹರ್ಷಿಗಳ ತಪಸ್ಸಿಗೊಲಿದ ಕನ್ನರ್ಪಾಡಿಯ ಜಯದುರ್ಗಾ ಪರಮೇಶ್ವರಿ ಸನ್ನಿಧಿಯಲ್ಲಿ ಜೀರ್ಣೋದ್ಧಾರ ಕಾರ್ಯ ನಡೆದು ಸದ್ಯ ಅದ್ದೂರಿಯಾಗಿ ಅಷ್ಟಬಂಧ ಬ್ರಹ್ಮಕುಂಭಾಭಿಷೇಕ ನಡೆಯುತ್ತಿದೆ.
Udupi: ಕರಾವಳಿಯಲ್ಲಿ ಮತ್ತೆ ಮುಂದುವರಿದ ಗೋಕಳ್ಳರ ಅಟ್ಟಹಾಸ
ಇದರ ಪ್ರಯುಕ್ತ ಲೋಕ ಕಲ್ಯಾಣ ಕಲ್ಯಾಣಕ್ಕಾಗಿ ಭಕ್ತರೊಡಗೂಡಿ ಕೋಟಿ ಕುಂಕುಮಾರ್ಚನೆ ಸೇವೆ ನೆರವೇರಿಸಲಾಯಿತು. ಮಾರ್ಚ್ 15ರಿಂದಲೇ ದೇಗುಲದಲ್ಲಿ ಅಷ್ಟೋತ್ತರಗಳೊಂದಿಗೆ ಜಯದುರ್ಗೆಗೆ ಪ್ರಾರ್ಥನೆ ಸಲ್ಲಿಸಿ ಕುಂಕುಮಾರ್ಚನೆ ಆರಂಭಿಸಲಾಗಿತ್ತು. 250 ರಿಂದ 300 ಭಕ್ತರು ಸರದಿಯಲ್ಲಿ ದೇಗುಲಕ್ಕೆ ಬಂದು ಕುಂಕುಮಾರ್ಚನೆ ನೆರವೇರಿಸಿದ್ದಾರೆ. ಶುಕ್ರವಾರದಂದು ಕುಂಕುಮಾರ್ಚನೆ ಮಂಗಳೋತ್ಸವ ನೆರವೇರಿತು.ಅಪರೂಪ ಕೋಟಿ ಕುಂಕುಮಾರ್ಚನೆ ಕಣ್ತುಂಬಿಕೊಳ್ಳಲು ಐವತ್ತು ಸಾವಿರಕ್ಕೂ ಹೆಚ್ಚಿನ ಭಕ್ತರು ಆಗಮಿಸಿದರು. ಈ ವೇಳೆ ತಾಯಿಯ ದರ್ಶನ ಪಡೆದ ಪುನೀತರಾದರು.