Asianet Suvarna News Asianet Suvarna News

Jyothi Raj: 25 ಮಹಡಿಗಳನ್ನು 10 ನಿಮಿಷದಲ್ಲಿ ಹತ್ತಿದ ಕೋತಿರಾಜ್‌!

ಕೋತಿ ರಾಜ್‌ ಎಂದೇ ಕರೆಯಲ್ಪಡುವ ಜ್ಯೋತಿರಾಜ್‌ ಅವರು ಗುರುವಾರ ಉಡುಪಿಗೆ ಆಗಮಿಸಿದ್ದು, 25 ಅಡಿ ಎತ್ತರದ ಕಟ್ಟಡವನ್ನು ಹತ್ತಿ ನೋಡುಗರ ಮೈ ಜುಮ್ಮೆನ್ನುವಂತೆ ಮಾಡಿದರು.

Kothiraj who built 25 floors in 10 minutes at udupi rav
Author
First Published Mar 3, 2023, 11:15 AM IST | Last Updated Mar 3, 2023, 11:17 AM IST

ಉಡುಪಿ (ಮಾ.3) : ಕೋತಿ ರಾಜ್‌ ಎಂದೇ ಕರೆಯಲ್ಪಡುವ ಜ್ಯೋತಿರಾಜ್‌ ಅವರು ಗುರುವಾರ ಉಡುಪಿಗೆ ಆಗಮಿಸಿದ್ದು, 25 ಅಡಿ ಎತ್ತರದ ಕಟ್ಟಡವನ್ನು ಹತ್ತಿ ನೋಡುಗರ ಮೈ ಜುಮ್ಮೆನ್ನುವಂತೆ ಮಾಡಿದರು.

ನಗರದ ಬ್ರಹ್ಮಗಿರಿಯ ವುv್ಸ… ವಿಲ್ಲಾ ಎಂಬ ಸುಮಾರು 250 ಅಡಿ ಎತ್ತರದ ಈ ಕಟ್ಟಡವನ್ನು ಕೋತಿರಾಜ್‌(Kotiraj Chitradurga) ಖ್ಯಾತಿಯ ಜ್ಯೋತಿರಾಜ್‌(Jyotiraj) ಅವರು ಬೆಳಗ್ಗೆ 10.17ಕ್ಕೆ ಹತ್ತಲು ಆರಂಭಿಸಿ, ಕೇವಲ 10 ನಿಮಿಷಗಳಲ್ಲಿ 25ನೇ ಮಹಡಿಯನ್ನು ತಲುಪಿ ಕನ್ನಡ ಬಾವುಟವನ್ನು ಹಾರಿಸಿದರು. ಕ್ಲೈಮ್ಮಿಂಗ್‌ ಪೌಂಡೇಶನ್‌(Climbing Foundation) ಸ್ಥಾಪಿಸಿ, ಕೃತಕ ಗೋಡೆಯನ್ನು ನಿರ್ಮಿಸಿ ಸಾಹಸಿ ಕ್ರೀಡಾಪಟುಗಳಿಗೆ ತರಬೇತಿ ನೀಡುವ ಉದ್ದೇಶದಿಂದ ರಾಜ್ಯಾದ್ಯಂತ ಅವರು ಪ್ರವಾಸ ಮಾಡುತ್ತಿದ್ದಾರೆ.

Chitradurga: ದುರ್ಗದಲ್ಲಿ ಮಿನಿ ಸ್ಪೈಡರ್ ಮ್ಯಾನ್ ಗಳನ್ನು ಹುಟ್ಟಿಹಾಕಲು ಜ್ಯೋತಿರಾಜ್ ಪ್ರಯತ್ನ

ಜ್ಯೋತಿರಾಜ್‌ ಅವರ ಈ ಸಾಹಸವನ್ನು ವೀಕ್ಷಿಸಲು ನೂರಾರು ಮಂದಿ ಜಮಾಯಿಸಿದರು. ಅವರು ಕ್ಲೈಮಿಂಗ್‌ ಅಕಾಡೆಮಿ ಸ್ಥಾಪಿಸುವ ಉದ್ದೇಶವನ್ನು ತಿಳಿದು ತಮ್ಮಿಂದಾದ ಧನ ಸಹಾಯ ಮಾಡಿದರು. ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಈ ಸಾಹಸಕ್ಕಾಗಿ ಜ್ಯೋತಿರಾಜ್‌ಗೆ ಜಿಲ್ಲಾ ಅಗ್ನಿಶಾಮಳ ದಳದ ಅಧಿಕಾರಿ ವಸಂತ್‌ ಕುಮಾರ್‌ ಮತ್ತು ಅವರ ತಂಡ ಶಾಲು ಹೊದಿಸಿ ಅಭಿನಂದಿಸಿದರು.

ಉಡುಪಿಯಲ್ಲಿಯೂ ಈ ಪರಿ ಬಿಸಿಲಿನ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಜ್ಯೋತಿರಾಜ್‌, ಬಿಸಿಲಿನಿಂದ ಕಟ್ಟಡ ಮತ್ತು ಅದರ ಕಬ್ಬಿಣದ ರಾಡ್‌ಗಳು ಬಿಸಿಯಾಗಿದ್ದವು. ಮೇಲೆ ಏರುತ್ತಿದ್ದಂತೆ ಬಾಯಾರಿಕೆಯಾಯಿತು. ಆಗ ಮಧ್ಯದ ಫ್ಲ್ಯಾಟೊಂದರಲ್ಲಿರುವ ಹಿರಿಯರು ಕಿಟಕಿಯಿಂದ ನೀರು ನೀಡಿದರು ಎಂದವರು ಉಡುಪಿಯ ಜನತೆಯ ಪ್ರೀತಿಯನ್ನು ಶ್ಲಾಘಿಸಿದರು.

ಮಂಕಿ ಮ್ಯಾನ್ ಖ್ಯಾತಿಯ ಕೋತಿರಾಜ್ ಬಯೋಪಿಕ್ ಶೂಟಿಂಗ್ ಆರಂಭ

ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವಂತಾಗಬೇಕು

ನಾನು ಕ್ಲೈಮ್ಮಿಂಗ್‌ ¶ೌಂಡೇಶನ್‌ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಒಂದು ಬೃಹತ್‌ ಕೃತಕ ಗೋಡೆಯನ್ನು ನಿರ್ಮಿಸಿ, ಅಲ್ಲಿ ನನ್ನಂತೆ ಆಸಕ್ತರಿಗೆ ತರಬೇತಿ ನೀಡುವ ಉದ್ದೇಶವಿದೆ. ಮುಂದೆ ಒಲಿಂಪಿP್ಸ…ನ ಕ್ಲೈಮ್ಮಿಂಗ್‌ ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕ ತರುವ ಹುಡುಗರನ್ನು ತಯಾರಿಸಬೇಕು. ಹೊರದೇಶಗಳಲ್ಲಿಯೂ ಈ ಸಾಹಸವನ್ನು ಮಾಡಿ ತ್ರಿವರ್ಣ ಧ್ವಜವನ್ನು ಹಾರಿಸುವಂತಾಗಬೇಕು ಎಂದು ಜ್ಯೋತಿರಾಜ್‌ ಹೇಳಿದರು.

Latest Videos
Follow Us:
Download App:
  • android
  • ios