ನವದೆಹಲಿ(ಜೂ.13): ಕೊರೋನಾ ವೈರಸ್ ನಿಯಂತ್ರಕ್ಕೆ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿಲ್ಲ. ಲಾಕ್‌ಡೌನ್ 1 ರಿಂದ ಲಾಕ್‌ಡೌನ್ 4ರ ವರೆಗೆ ಕೊರೋನಾ ವೈರಸ್‌ ಕೇಂದ್ರದ ನಿಯಂತ್ರಣಕ್ಕೆ ಸಿಕ್ಕಿಲ್ಲ. ತಪ್ಪಿನ ಮೇಲೆ ತಪ್ಪು ಮಾಡುವುದು ಹುಚ್ಚುತನ ಎಂದು ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ಗುಡುಗಿದ್ದಾರೆ.

ಕೊರೋನಾ ಸೋಂಕಿತರ ಸಂಖ್ಯೆಯ ಗ್ರಾಫ್ ಮಾಹಿತಿಯನ್ನು ಟ್ವಿಟರ್ ಮೂಲಕ ಹಂಚಿಕೊಂಡಿರುವ ರಾಹುಲ್, ಕೇಂದ್ರ ಸರ್ಕಾರವನ್ನು ತಿವಿದಿದ್ದಾರೆ. 

ದೇಶದಲ್ಲಿ ಲಾಕ್‌ ಡೌನ್ ಸಂಪೂರ್ಣ ವಿಫಲ; ಕಾರಣ ಕೊಟ್ಟ ರಾಹುಲ್!.

ಪದೇ ಪದೆ ತಪ್ಪುಗಳನ್ನು ಮಾಡಿ ಉತ್ತಮ ಫಲಿತಾಂಶ ನಿರೀಕ್ಷಿಸುವುದು ಹುಚ್ಚುತನ ಎಂದು ರಾಹುಲ್ ಗಾಂಧಿ ಟ್ವಿಟರ್ ಮೂಲಕ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಸದ್ಯ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 3 ಲಕ್ಷ ದಾಟಿದೆ. ಇನ್ನು ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 8,884.  ನೂರು ಪ್ರಕಣಗಳಿಂದ ರಿಂದ 1 ಲಕ್ಷ ಕೊರೋನಾ ವೈರಸ್ ಪ್ರಕರಣ ಸಂಖ್ಯೆ ತಲುಪಲು 64 ದಿನ ತೆಗೆದುಕೊಂಡ ಭಾರತ, ಇದೀಗ ಕೇವಲ 2 ವಾರದಲ್ಲಿ 2 ಲಕ್ಷ ಕೊರೋನಾ ವೈರಸ್ ಕೇಸ್ ಪತ್ತೆಯಾಗಿದೆ.

ಭಾರತದ ಗಡಿ ಭಾಗವನ್ನು ಚೀನಾ ಆಕ್ರಮಿಸಿತೆ? ರಕ್ಷಣಾ ಸಚಿವರಿಗೆ ರಾಹುಲ್ ಗಾಂಧಿ ಪ್ರಶ್ನೆ!...

ಭಾರತದಲ್ಲಿ ಒಂದೇ ದಿನ 11,458 ಕೊರೋನಾ ವೈರಸ್ ಪ್ರಕರಣ ದಾಖಲಾಗುವು ಹಿಂದಿನ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದೆ.  ವಿಶ್ವದಲ್ಲಿ ಕೊರೋನಾ ವೈರಸ್ ಭೀಕರತೆಗೆ ತುತ್ತಾದ ದೇಶಗಳ ಪೈಕಿ ಭಾರತ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಕೊರೋನಾ ವೈರಸ್‌ನಿಂದ ಗುಣಮುಖರಾಗುತ್ತಿರುವ ಸಂಖ್ಯೆ ಕೊಂಚ ಸಮಾಧಾನ ತಂದಿದೆ. ಇದುವರರೆಗೆ 1,54,329 ಮಂದಿ  ಕೊರೋನಾ ವೈರಸ್‌ನಿಂದ ಗುಣಮುಖರಾಗಿದ್ದಾರೆ.