Asianet Suvarna News Asianet Suvarna News

ಕೊರಟಗೆರೆ : ಜಯಮಂಗಲಿ ನದಿಯ ಮರಳು ರಕ್ಷಣೆಗೆ ನಿಂತ ತಹಸೀಲ್ದಾರ್‌

ಜಯಮಂಗಲಿ ನದಿಯ ಒಡಲಿಗೆ ಕನ್ನಹಾಕಿ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ಅಡ್ಡೆಯ ಮೇಲೆ ತಹಸೀಲ್ದಾರ್ ಮುನಿಶಾಮಿರೆಡ್ಡಿ ನೇತೃತ್ವದ ತಂಡ ದಾಳಿ ನಡೆಸಿ ಟ್ರ್ಯಾಕ್ಟರ್‌ ಮತ್ತು ದ್ವಿಚಕ್ರ ವಾಹನ ವಶಕ್ಕೆ ಪಡೆದ ಘಟನೆ ನಡೆದಿದೆ. ಕೋಳಾಲ ಹೋಬಳಿ ವಜ್ಜನಕುರಿಕೆ ಗ್ರಾ.ಪಂ.ನ ಮೊರಗಾನಹಳ್ಳಿ ಮತ್ತು ಕೆ.ಜಿ.ಬೇವಿನಹಳ್ಳಿ ಮೂಲಕ ಹರಿಯುವ ಜಯಮಂಗಲಿ ನದಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳು ಅಡ್ಡೆಯ ಮೇಲೆ ತಹಸೀಲ್ದಾರ್ ಮುನಿಶಾಮಿ ರೆಡ್ಡಿ ನೇತೃತ್ವದ ತಂಡ ತಡರಾತ್ರಿ ಮಿಂಚಿನ ದಾಳಿ ನಡೆಸಿದ್ದಾರೆ.

Koratagere Tehsildar stood up to protect the sand of Jayamangali river  snr
Author
First Published Oct 21, 2023, 8:47 AM IST

ಕೊರಟಗೆರೆ: ಜಯಮಂಗಲಿ ನದಿಯ ಒಡಲಿಗೆ ಕನ್ನಹಾಕಿ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ಅಡ್ಡೆಯ ಮೇಲೆ ತಹಸೀಲ್ದಾರ್ ಮುನಿಶಾಮಿರೆಡ್ಡಿ ನೇತೃತ್ವದ ತಂಡ ದಾಳಿ ನಡೆಸಿ ಟ್ರ್ಯಾಕ್ಟರ್‌ ಮತ್ತು ದ್ವಿಚಕ್ರ ವಾಹನ ವಶಕ್ಕೆ ಪಡೆದ ಘಟನೆ ನಡೆದಿದೆ. ಕೋಳಾಲ ಹೋಬಳಿ ವಜ್ಜನಕುರಿಕೆ ಗ್ರಾ.ಪಂ.ನ ಮೊರಗಾನಹಳ್ಳಿ ಮತ್ತು ಕೆ.ಜಿ.ಬೇವಿನಹಳ್ಳಿ ಮೂಲಕ ಹರಿಯುವ ಜಯಮಂಗಲಿ ನದಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳು ಅಡ್ಡೆಯ ಮೇಲೆ ತಹಸೀಲ್ದಾರ್ ಮುನಿಶಾಮಿ ರೆಡ್ಡಿ ನೇತೃತ್ವದ ತಂಡ ತಡರಾತ್ರಿ ಮಿಂಚಿನ ದಾಳಿ ನಡೆಸಿದ್ದಾರೆ.

ಜಯಮಂಗಲಿ ನದಿಯ ಮರಳನ್ನು ತಡರಾತ್ರಿ ಲಾರಿಗೆ ತುಂಬಿ ಕೋಳಾಲ ಮಾರ್ಗ ಬೆಂಗಳೂರಿಗೆ ಸಾಗಿಸಲಾಗುತ್ತಿದೆ. ಅಧಿಕಾರಿ ವರ್ಗ ಕೇಂದ್ರ ಸ್ಥಾನದಲ್ಲಿ ಇರದ ಪರಿಣಾಮ ಮರಳು ಮಾಫಿಯಾಕ್ಕೆ ಕಡಿವಾಣವೇ ಇಲ್ಲದಾಗಿದೆ.

ಮೊರಗಾನಹಳ್ಳಿ ಸಮೀಪ ಹರಿಯುವ ಜಯಮಂಗಲಿ ನದಿಯ ದೊಡ್ಡ ಹಳ್ಳದಲ್ಲಿ ತಹಸೀಲ್ದಾರ್‌ ಕಳೆದ 30ದಿನದಲ್ಲಿ ಎರಡು ಬಾರಿ ದಾಳಿ ನಡೆಸಿ, ಟ್ರ್ಯಾಕ್ಟರ್‌ ಮತ್ತು ಸಲಕರಣೆ ವಶಕ್ಕೆ ಪಡೆದು ಕೋಳಾಲ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಮರಳು ಗಣಿಗಾರಿಕೆಯ ಮಾಹಿತಿಯೇ ಸ್ಥಳೀಯ ಅಧಿಕಾರಿಗಳಿಗೆ ಲಭ್ಯವಿದ್ದರೂ ಮೌನಕ್ಕೆ ಶರಣಾಗಿದ್ದಾರೆಯೇ ಎಂಬುದೇ ನಿಗೂಢ.

ಜಯಮಂಗಳಿ, ಸುವರ್ಣಮುಖಿ ನದಿಪಾತ್ರದ ಮರಳು ರಕ್ಷಣೆ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳ ಪ್ರಮುಖ ಕರ್ತವ್ಯ. ಕೋಳಾಲ ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಕಂದಾಯ ಅಧಿಕಾರಿಗಳ ತಂಡ ಅಕ್ರಮ ಮರಳು ಸಾಗಾಣಿಕೆ ಅಡ್ಡೆಗಳ ಮೇಲೆ ನಿಗಾ ಇಡಬೇಕಿದೆ. ಇಲ್ಲವಾದರೆ ಸರಕಾರಕ್ಕೆ ಅಕ್ರಮ ಮರಳು ಸಾಗಾಣಿಕೆ ಬಗ್ಗೆ ಪತ್ರ ಬರೆಯುತ್ತೇನೆ ಎಂದು ತಹಸೀಲ್ದಾರ ಮುನಿಶಾಮಿರೆಡ್ಡಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಜಯಮಂಗಲಿ ನದಿಯಲ್ಲಿ ಮರಳುಗಾರಿಕೆ

ವರದಿ :  ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣನ್ಯೂಸ್ ತುಮಕೂರು.‌

ತುಮಕೂರು (ಅ.16) : ಜಯಮಂಗಲಿ ನದಿ ತುಮಕೂರು ಜಿಲ್ಲೆಯ ಎರಡು ತಾಲೂಕುಗಳ ರೈತರ ಜೀವನಾಡಿಯಾಗಿದೆ. ಸುಮಾರು 30 ವರ್ಷಗಳ ಕಾಲ ನದಿಯಲ್ಲಿ ನೀರು ಕಾಣದಾಗಿತ್ತು. ಕಳೆದ ವರ್ಷ ವ್ಯಾಪಕ ಮಳೆಯಿಂದಾಗಿ ನೆರೆ ಉಂಟಾಗಿ ಮೈದುಂಬಿ ಹರಿದಿತ್ತು. ಆದರೆ ಈ ವರ್ಷ ಮಳೆ‌ ಬಾರದ‌ ಪರಿಣಾಮ‌ ನದಿ ಒಡಲು ನೀರಿಲ್ಲದೆ ಮರಳಿನಿಂದ ತುಂಬಿ ಹೋಗಿದೆ.  ಇದೀಗ ಸಮೃದ್ಧಿಯಾಗಿ ಶೇಖರಣೆಯಾಗಿರುವ ಮರಳಿನ ಮೇಲೆ ದಂಧೆಕೋರರ ಕಣ್ಣು ಬಿದಿದೆ.

ತುಮಕೂರಿನ ದೇವರಾಯದುರ್ಗದಲ್ಲಿ ಜನಿಸುವ ಜಯಮಂಗಲಿ ನದಿ ಕೊರಟಗೆರೆ, ಮಧುಗಿರಿ,ಪಾವಗಡ ತಾಲ್ಲೂಕಿನಲ್ಲಿ ಹರಿದು ಆಂಧ್ರಕ್ಕೆ ಸೇರಲಿದೆ. ಈ ನದಿಯಲ್ಲಿ ಶೇಖರಣೆಯಾಗಿರುವ ಮರಳಿನ ಮೇಲೆ  ಮಾಫಿಯಾದ ಕಣ್ಣು ಬಿದ್ದಿದೆ. ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಮರಳನ್ನು ಕದ್ದು ಮುಚ್ಚಿ ಸಾಗಿಸಲಾಗುತ್ತಿದೆ.

ಮತ್ತೆ ಸದ್ದು ಮಾಡ್ತಿದೆ ಸ್ಯಾಂಡ್ ಮಾಫಿಯಾ: ನದಿ ಒಡಲನ್ನೇ ಕೊರೆಯತ್ತಿದ್ದಾರೆ ಮರಳು ಗಳ್ಳರು

ಮಧುಗಿರಿಯ ಕೊಂಡವಾಡಿ, ಅಕ್ಕಲಾಪುರ, ಕುರುಡಿ, ಕೊಡ್ಲಾಪುರ,ಪುರವರ, ಕೊಡಿಗೇನಹಳ್ಳಿ  ಹಾಗೂ‌ ಕೊರಟಗೆರೆಯ ಮೊರ್ಗಾನಹಳ್ಳಿ ಕೆಜಿ. ಬೇವಿನಹಳ್ಳಿಯಲ್ಲಿ ಮರಳುಗಾರಿಕೆ ಮಾಡಲಾಗುತ್ತಿದೆ. ರಾತ್ರಿ ಹಾಗೂ ಹಗಲು ಹೊತ್ತು  ರಾಜಾರೋಷವಾಗಿಹ ಮರಳು ತುಂಬಿ ಲಾರಿಗಳ ಮೂಲಕ ರಾಜಧಾನಿ ಬೆಂಗಳೂರಿಗೆ ಕಳುಹಿಸಲಾಗುತ್ತಿದೆ. 

ಅಕ್ರಮ‌ ಮರಳುಗಾರಿಕೆ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನಲೆ, ಕೊರಟಗೆರೆ ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಅಖಾಡಕ್ಕೆ ಇಳಿದಿದ್ದಾರೆ.‌ ಮಧ್ಯರಾತ್ರಿ ಖುದ್ದು ಜಯಮಂಗಲಿ ನದಿ ಹರಿಯುವ ಗ್ರಾಮಗಳಲ್ಲಿ ರೌಂಡ್ ಹೊಡೆದು, ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಿದ್ದಾರೆ.  ತಹಶೀಲ್ದಾರ್ ದಾಳಿ ವೇಳೆ ಮರಳು ತುಂಬುತ್ತಿದ್ದ ದಂಧೆಕೋರರು ಟ್ರ್ಯಾಕ್ಟರ್ ಬಿಟ್ಟು ಪರಾರಿಯಾಗಿದ್ದಾರೆ.  ಕಳೆದ ಒಂದು ತಿಂ‌ಗಳ ಎರಡು ಬಾರಿ ದಾಳಿ ನಡೆಸಲಾಗಿದೆ.

ಬಳ್ಳಾರಿ: ಎಗ್ಗಿಲ್ಲದೇ ಸಾಗಿದೆ ಅಕ್ರಮ ಮರಳು ಸಾಗಾಟ, ಕಣ್ಮುಚ್ಚಿ ಕುಳಿತ ಗಣಿ ಮತ್ತು ಭೂವಿಜ್ಞಾನ ಇಲಾಖೆ!

ಜಯಮಂಗಳಿ ನದಿಪಾತ್ರದ ಮರಳು ರಕ್ಷಣೆ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳ  ನಿಗಾ ಇಡಬೇಕಿದೆ. ಈ ಮೂಲಕ ಜಯಮಂಗಲಿ ನದಿ ಪಾತ್ರದ ಸುತ್ತಾಮುತ್ತ ಅಂತರ್ಜಲ ಕಾಪಾಡಬೇಕಿದೆ

Follow Us:
Download App:
  • android
  • ios