ಗಣೇಶ ವಿಗ್ರಹಗಳನ್ನು ಚರಂಡಿಗೆ ಎಸೆದ ನಗರ ಸಭೆ?
ಗಣೇಶನಿಗೆ ನೀಡಬೇಕಾದ ಸೂಕ್ತ ಗೌರವವಿಲ್ಲದೇ ಚರಂಡಿಗೆ ವಿಗ್ರಹವನ್ನು ಎಸೆದು ಅಗೌರವ ತೋರಲಾಗಿದೆ. ಆದರೆ ಯಾರಿಂದ ಈ ಕೃತ್ಯ ನಡೆದಿದೆ ಎನ್ನುವ ವಿಚಾರ ಮಾತ್ರ ತಳಿದು ಬಂದಿಲ್ಲ.
ಕೊಪ್ಪಳ (ಆ.24): ಬ್ಯಾರಲ್‌ನಲ್ಲಿ ವಿಸರ್ಜಿಸಲಾಗಿದ್ದ ಗಣೇಶ ಮೂರ್ತಿಯು ಚರಂಡಿಯಲ್ಲಿ ಪತ್ತೆ ಆಗಿರುವ ಘಟನೆ ಕೊಪ್ಪಳ ನಗರದ ಬಿ.ಟಿ.ಪಾಟೀಲ್ ನಗರದಲ್ಲಿ ನಡೆದಿದೆ. ಆದರೆ ಘಟನೆಗೆ ಯಾರು ಕಾರಣ ಎಂಬುದು ಮಾತ್ರ ನಿಗೂಢವಾಗಿಯೇ ಇದೆ.
ಗಣೇಶ ವಿಸರ್ಜನೆಗೆಂದು ಸಿದ್ಧಿವಿನಾಯಕ ದೇವಸ್ಥಾನ ಬಳಿ ನಗರಸಭೆಯವರು ಬ್ಯಾರಲ್ ಇಟ್ಟಿದ್ದರು. ಅದರಲ್ಲಿ ಗಣೇಶ ಮೂತಿರ್ಯನ್ನು ಸುತ್ತಮುತ್ತಲ ಜನರು ಸಂಜೆ ವಿಸರ್ಜಿಸಿದ್ದರು.ಆದರೆ, ಬೆಳಗ್ಗೆ ಬ್ಯಾರಲ್‌ನಲ್ಲಿ ಇದ್ದ ಗಣೇಶ ಮೂರ್ತಿ ಚರಂಡಿಯಲ್ಲಿ ಬಿದ್ದಿತ್ತು.
ನೀಲಾವರ ಗೋಶಾಲೆಯಲ್ಲಿ ಬೈಹುಲ್ಲಿನ ವಿಶಿಷ್ಟ ಗಣಪತಿ..
ಸ್ಥಳೀಯರು ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರಸಭೆ ಸಿಬ್ಬಂದಿಯೇ ಬ್ಯಾರಲ್ ತೆಗೆದುಕೊಂಡು ಹೋಗುವಾಗ ಗಣೇಶ ಮೂರ್ತಿಯನ್ನು ಚರಂಡಿಯಲ್ಲಿ ಎಸೆದಿದ್ದಾರೆ ಎಂದು ಕಿಡಿಕಾರಿದ್ದಾರೆ. ಆದರೆ, ನಿಖರ ಮಾಹಿತಿ ಯಾರ ಬಳಿಯೂ ಇಲ್ಲ.