ಕೊಪ್ಪಳ, [ಡಿ.30]: ಝುಳು ಝುಳು ಹರಿವ ನದಿ. ಮಿನಿ ಗೋವಾ ವಿರುಪಾಪುರಗಡ್ಡೆಯಲ್ಲಿ ಸುತ್ತ ಕಣ್ಣು ಹಾಯಿಸಿದಲ್ಲೆಲ್ಲ ನೀರೇ ನೀರು..ಬೆಟ್ಟ-ಗುಡ್ಡಗಳ ಏರಿಳಿತಗಳು. ಇದು ವಿದೇಶಿಗರ ಪಾಲಿಗೆ ಸ್ವರ್ಗ ಸ್ಥಳವಾಗಿದೆ. ಅಷ್ಟೇ ಅಲ್ಲದೇ ಮೋಜು ಮಸ್ತಿಗೆ ಈ ಸ್ಥಳ ಹೇಳಿ ಮಾಡಿಸಿದಂತಿದೆ. ಈ ಹಿನ್ನೆಲೆಯಲ್ಲಿ ಹಂಪಿ ವೀಕ್ಷಣೆಗೆಂದ ಬರುವ ಬಹುತೇಕ ವಿದೇಶಿಗರು ಇಲ್ಲೇ ತಂಗುವುದು.

ಅದರಲ್ಲೂ ನ್ಯೂ ಇಯರ್ ಅಂತ ಪಾರ್ಟಿಗಳು ಇಲ್ಲಿ ಭರ್ಜರಿಯಾಗಿ ನಡೆಯುತ್ತವೆ. ಇದಕ್ಕೆ ರೇಸಾರ್ಟ್ ಮಾಲೀಕರು ಎಲ್ಲಾ ಸವಲತ್ತುಗಳನ್ನು ಮಾಡಿಕೊಡುತ್ತಾರೆ. ಕಳೆದ ಬಾರಿ ನ್ಯೂ ಇಯರ್ ಪಾರ್ಟಿಯಲ್ಲಿ ಮಾಧಕ ವಸ್ತುಗಳ ಸೇವಿಸಿ ತುಂಡು ಬಟ್ಟೆಯಲ್ಲಿ ನೃತ್ಯ ಮಾಡಿರುವುದು ಭಾರೀ ಸುದ್ದಿಗೆ ಗ್ರಾಸವಾಗಿತ್ತು. ಈ ಬಾರಿಯ ನ್ಯೂ ಇಯರ್ ಮೋಜು ಮಸ್ತಿ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ರೇಸಾರ್ಟ್ ಮಾಲೀಕರ ಹಣದಾಸೆಯ ಹುಚ್ಚಾಟಕ್ಕೆ ಬ್ರೇಕ್ ಹಾಕಿದ್ದಾರೆ. 

ಹೊಸ ವರ್ಷಾಚರಣೆಗೆ ಖಾಕಿ ಸರ್ಪಗಾವಲು! ಎಚ್ಚರ!

ಇಂದು [ಸೋಮವಾರ] ರೇಸಾರ್ಟ್ ಮಾಲೀಕರ ಸಭೆ ನಡೆಸಿದ ಗಂಗಾವತಿಯ ಪೊಲೀಸರು, ಹೊಸ ವರ್ಷಾಚರಣೆ ವೇಳೆ ತುಂಡುಡುಗೆ ಹಾಕಿ ಡಾನ್ಸ್ ಮಾಡಿಸಿದ್ರೆ, ಮಾಧಕ ವಸ್ತುಗಳ ಮಾರಾಟ ಮಾಡಿದ್ರೆ ಮುಲಾಜಿಲ್ಲದೇ ಕೇಸ್ ಹಾಕ್ತೀವಿ ಎಂದು ಗಂಗಾವತಿ ಡಿವೈಎಸ್‌ಪಿಬಿ.ಪಿ ಚಂದ್ರಶೇಖರ್ ಖಡಕ್ ಎಚ್ಚರಿಕೆ ನೀಡಿದರು.

ಭಾರತೀಯ ಸಂಸ್ಕೃತಿಗೆ ದಕ್ಕೆ ಹಾಗೋ ರೀತಿ ಹೊಸ ವರ್ಷ ಆಚರಣೆ ಮಾಡಬಾರದು. ಒಂದು ಆದ್ರೆ, ಕ್ರಮ ಕೈಗೊಳ್ಳುವುದು ಗ್ಯಾರಂಟಿ ಎಂದು ಗಂಗಾವತಿ ಡಿವೈಎಸ್‌ಪಿಬಿ.ಪಿ ಚಂದ್ರಶೇಖರ್ ಖಡಕ್ ಎಚ್ಚರಿಸಿದರು.

ಹೊಸ ವರ್ಷದ ಸಂದರ್ಭದಲ್ಲಿ ಮಧ್ಯರಾತ್ರಿ ವಿದೇಶಿಗರನ್ನು ಸಂತೃಪ್ತಿ ಪಡಿಸಲು ಹೆಚ್ಚಿನ ಹಣ ಪಡೆದು ಮಾದಕ ವಸ್ತುಗಳನ್ನು ಮಾರಾಟ ಮಾಡುವುದು ಹಾಗೂ ಅರೆಬೆತ್ತಲೆ ನೃತ್ಯವನ್ನು ಏರ್ಪಡಿಸ್ತಾರೆ ಅನ್ನೋ ಆರೋಪ ಕೇಳಿ ಬಂದಿತ್ತು. ಇದ್ರಿಂದ ಇದೀಗ ಕೊಪ್ಪಳ ಜಿಲ್ಲೆಯ ಗಂಗಾವತಿಯ ಪೊಲೀಸರು ಎಚ್ಚೆತ್ತುಕೊಂಡಿದ್ದು ಸಿಪಿಐ ಸುರೇಶ್ ತಳವಾರ, ರೇಸಾರ್ಟ್ ಮಾಲಿಕರಿಗೆ ಖಡಕ್ ವಾರ್ನಿಂಗ್ ನೀಡಿದರು. 

ಈ ಪ್ರದೇಶದಲ್ಲಿ ಇತಿಹಾಸ ಪ್ರಸಿದ್ದ ಹಂಪಿ, ಕೊಪ್ಪಳ ಜಿಲ್ಲೆಯ ಆಂಜನಾದ್ರಿ ಪರ್ವತ, ಋಷಿಮುಖ ಪರ್ವತ, ಆನೆಗೊಂದಿ ಸೇರಿದಂತೆ ತುಂಗಾಭದ್ರ ನದಿಯೂ ಇಲ್ಲಿ ಹರಿಯುತ್ತೆ. ಇನ್ನೂ ವಿಶೇಷವೆಂದ್ರೆ, ವಿದೇಶಿಗರಿಗೆ ಹೇಳಿ ಮಾಡಿದ ನೈಸರ್ಗಿಕ ಸ್ಥಳಗಳು ಇಲ್ಲೇ ಇದ್ದು, ಸಾವಿರಾರು ವಿದೇಶಿಗರು ವಿರುಪಾಪುರ ಗಡ್ಡೆಯಲ್ಲಿ ತಿಂಗಳುಗಟ್ಟಲೆ ಇಲ್ಲೇ ವಾಸ್ತವ್ಯ ಮಾಡ್ತಾರೆ. ಇದನ್ನೆ ಬಂಡವಾಳ ಮಾಡಿಕೊಂಡ ರೆಸಾರ್ಟ್ ಮಾಲೀಕರು ಇದೇ ಸ್ಥಳದಲ್ಲಿ ಹತ್ತಾರು ರೇಸಾರ್ಟಗಳನ್ನು ತೆರೆದಿದ್ದಾರೆ.