ಶಾಸಕರನ್ನ ಹಿಗ್ಗಾಮುಗ್ಗಾ ಝಾಡಿಸಿದ ಕಾರ್ಯಕರ್ತ: ಕಕ್ಕಾಬಿಕ್ಕಿಯಾದ ಚಿಂಚನಸೂರ್!
ಬಾಬುರಾವ್ ಚಿಂಚನಸೂರ್ ಅವರನ್ನು ಹಿಗ್ಗಾಮುಗ್ಗಾ ಝಾಡಿಸಿದ ಕೋಲಿ ಸಮಾಜದ ಮುಖಂಡ| ಯಾದಗಿರಿ ನಗರದಲ್ಲಿ ನಡೆದ ಘಟನೆ| ಸರ್ಕಾರ ನಿಗಮ ಸ್ಥಾಪನೆ ಮಾಡಿದರೂ ನಯಾಪೈಸೆ ಅನುದಾನ ಕೊಟ್ಟಿಲ್ಲ: ವೆಂಕಟೇಶ್|
ಯಾದಗಿರಿ(ಮಾ.05): ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಹಾಗೂ ರಾಜ್ಯ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಬಾಬುರಾವ್ ಚಿಂಚನಸೂರ್ ಅವರನ್ನು ಕೋಲಿ ಸಮಾಜದ ಮುಖಂಡರೊಬ್ಬರು ಹಿಗ್ಗಾಮುಗ್ಗಾ ಝಾಡಿಸಿದ ಘಟನೆ ಜರುಗಿದೆ.
ರಾಜ್ಯ ಬಿಜೆಪಿ ಸರ್ಕಾರ ಹಾಗೂ ಸಿಎಂ ಬಿಎಸ್‌ವೈ ಅವರ ಬಗ್ಗೆ ಚಿಂಚನಸೂರು ಚಿಂಚನಸೂರ್ ಬಿಜೆಪಿ ಸರ್ಕಾರದ ಆಡಳಿತವನ್ನು ವರ್ಣಿಸುತ್ತಿರುವ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಗೆ ಆಗಮಿಸಿದ ಕೋಲಿ ಸಮಾಜದ ಮುಖಂಡ ವೆಂಕಟೇಶ್ ಕೋಪ ಪ್ರದರ್ಶಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ತಮ್ಮನ್ನು (ಚಿಂಚನಸೂರು) ಭೇಟಿಯಾಗಲು ಕಾರ್ಯಕರ್ತರು ಬಿಡುವುದಿಲ್ಲ ಇನ್ನೊಂದೆಡೆ, ಸರ್ಕಾರ ನಿಗಮ ಸ್ಥಾಪನೆ ಮಾಡಿದರೂ ನಯಾಪೈಸೆ ಅನುದಾನ ಕೊಟ್ಟಿಲ್ಲ. ನಿಮ್ಮನ್ನು ಹಾಗೂ ಕೋಲಿ ಸಮಾಜದವರ ಮುಂದಿಟ್ಟುಕೊಂಡು ಮತ ಪಡೆದ ಸಂಸದ ಡಾ. ಜಾಧವ್ ಈಗ ಇತ್ತ ಕಡೆ ಕ್ಯಾರೇ ಅನ್ನುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಕೋಲಿ ಸಮಾಜ, ಜನರನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಚಿಂಚನಸೂರು ಅವರು ಕೆಲವರ ಕಿವಿ ಮಾತುಗಳಿಗೆ ಸಮಾಜದ ಮೂಲ ನಾಯಕರನ್ನೇ ಕಳೆದು ಕೊಳ್ಳುತ್ತಿದ್ದಾರೆ. ನಿಮ್ಮ ಹಿಂದೆ ಬೆನ್ನಿಗೆ ಚೂರಿ ಹಾಕುವವರೇ ಇದ್ದಾರೆಂದು ವೆಂಕಟೇಶ್ ಜೋರುದನಿಯಲ್ಲಿ ಮಾತನಾಡುತ್ತ ಹೊರ ನಡೆದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ್ ಅವರಿಗೆ ಮತ ನೀಡುವ ಮೂಲಕ ಗೆಲ್ಲಿಸಿದ್ದೇವೆ. ಆದರೆ, ಆ ಮನುಷ್ಯನನ್ನ ಭೇಟಿಯಾಗಲು ನಾವೂ ಅನೇಕ ಬಾರಿ ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.