Kolar: ಬೀದಿ ನಾಯಿಗಳ ಕಾಟ: ಸಾರ್ವಜನಿಕರಿಗೆ ತೀವ್ರ ತೊಂದರೆ!
ಕೋಲಾರದಲ್ಲಿ ಬೀದಿ ನಾಯಿಗಳ ಹಾವಳಿ ಜೋರಾಗಿದೆ. ಮಹಿಳೆಯರು, ಮಕ್ಕಳು ಹಾಗೂ ವೃದ್ಧರ ಮೇಲೆ ದಾಳಿ ಮಾಡೋದು ಸರ್ವೇ ಸಾಮಾನ್ಯವಾಗಿದೆ. ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತ್ತಾಗಿದೆ. ಈ ಕುರಿತ ಸ್ಟೋರಿ ಇಲ್ಲಿದೆ.
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ (ಜೂ.13): ಕೋಲಾರದಲ್ಲಿ ಬೀದಿ ನಾಯಿಗಳ ಹಾವಳಿ ಜೋರಾಗಿದೆ. ಮಹಿಳೆಯರು, ಮಕ್ಕಳು ಹಾಗೂ ವೃದ್ಧರ ಮೇಲೆ ದಾಳಿ ಮಾಡೋದು ಸರ್ವೇ ಸಾಮಾನ್ಯವಾಗಿದೆ. ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತ್ತಾಗಿದೆ. ಈ ಕುರಿತ ಸ್ಟೋರಿ ಇಲ್ಲಿದೆ. ರಾಜಧಾನಿಗೆ ಬೆಂಗಳೂರಿಗೆ ಸಮೀಪವಿರುವ ಕೋಲಾರ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಬೀದಿ ನಾಯಿಗಳ ಹಾವಳಿ ಮೀತಿ ಮೀರಿದ್ದು, ಇದರಿಂದ ಇಲ್ಲಿನ ಸಾರ್ವಜನಿಕರು ಭಯದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲೆಂದರಲ್ಲಿ,ರಸ್ತೆಯ ಅಕ್ಕಪಕ್ಕ ಬಿಸಾಡಿರುವ ಮಾಂಸವನ್ನು ತಿನ್ನುವ ನಾಯಿಗಳು.
ಬೈಕ್ ಸವಾರರು, ಮಕ್ಕಳು, ವೃದ್ಧರು ಹಾಗೂ ಜಾನುವಾರುಗಳ ಮೇಲೆಯೂ ದಾಳಿ ನಡೆಸುವಂತಹ ಪ್ರಕರಣಗಳು ಕಂಡುಬರುತ್ತಿದ್ದರೂ ಸಹ ಸ್ಥಳೀಯ ಸಂಸ್ಥೆಗಳು ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗುತ್ತಿಲ್ಲ. ನಗರ ಸ್ಥಳೀಯ ಸಂಸ್ಥೆಗಳಿಂದ ಪ್ರತಿವರ್ಷವೂ ಬೀದಿ ನಾಯಿಗಳ ಸಂತನಹರಣ ಶಸ್ತ್ರ ಚಿಕಿತ್ಸೆಗೆಂದು ಟೆಂಡರ್ ಆಹ್ವಾನಿಸಲಾಗುತ್ತಿದೆ. ಆದರೆ, ಯಾರೂ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿಲ್ಲ.ಇದರಿಂದ ನಾಯಿಗಳ ಸಂತಾನಶಕ್ತಿ ಹರಣ ಮಾಡಲು ಅಧಿಕಾರಿಗಳಿಂದ ಸಾಧ್ಯವಾಗುತ್ತಿಲ್ಲ.ಇದಕ್ಕೆ ಸಾರ್ವಜನಿಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಬಾಲಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸೋಣ: ಬಿ.ಪಿ ದೇವಮಾನೆ
ಇನ್ನು ಇತ್ತ ಗ್ರಾಪಂ ವ್ಯಾಪ್ತಿಯಲ್ಲಿರುವ ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡುವುದು ಪಂಚಾಯಿತಿಗಳ ಕರ್ತವ್ಯ, ಪಂಚಾಯತ್ ರಾಜ್ ಕಾಯಿದೆಯಲ್ಲೂ ಇದರ ಬಗ್ಗೆ ಉಲ್ಲೇಖಿಸಲಾಗಿದೆ. ಆದ್ರೆ ಶಸ್ತ್ರ ಚಿಕಿತ್ಸೆಯ ಬಳಿಕ ನಾಯಿಗಳ ಆರೋಗ್ಯ ಕಾಳಜಿ ವಹಿಸುವುದು ತಲೆನೋವಾಗಿದೆ. ಪಶು ಪಲನಾ ಇಲಾಖೆಯವರು ಶಸ್ತ್ರಚಿಕಿತ್ಸೆಯ ಮಾಡಲು ಸಿದ್ಧವಿದ್ದರೂ, ಕಾಳಜಿ ಕೇಂದ್ರಗಳು ಇಲ್ಲದ ಹಾಗೂ ನಿರ್ವಹಣೆಗೆ ಅಗತ್ಯತೆಗೆ ಅನುದಾನ ಲಭ್ಯವಿಲ್ಲ. ಪಶುಚಲನಾ ಇಲಾಖೆಯಿಂದ ಪ್ರತಿ ನಾಯಿಯ ಸಂತಾನಶಕ್ತಿ ಹರಣ ಚಿಕಿತ್ಸೆಗೆ 1,750 ರೂ ನಿಗದಿಪಡಿಸಲಾಗಿದ್ದು, ಗ್ರಾಪಂ ಅಥವಾ ನಗರಸಭೆಯವರು ನಾಯಿಗಳನ್ನು ಆಸ್ಪತ್ರೆಗೆ ತೆಗೆದುಕೊಂಡು ಬಂದರೆ ಶಸ್ತ್ರಚಿಕಿತ್ಸೆ ಮಾಡಿಕೊಡಲು ಅಧಿಕಾರಿಗಳು ಸಿದ್ಧರಿದ್ದಾರೆ.
ಎಲ್ಲ ಶಾಸಕರಿಗೆ 50 ಲಕ್ಷ, ಅಡ್ಡ ಮತಕ್ಕೆ ಕಾರಣವೇನು? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಶ್ರೀನಿವಾಸ್ ಗೌಡ
ಆದರೆ, ನಾಯಿಗಳನ್ನು ಹಿಡಿಯುವವರು ಹಾಗೂ ಚಿಕಿತ್ಸೆ ಬಳಿಕ ಕಾಳಜಿ ವಹಿಸುವವರು ಯಾರು ಎಂಬುದು ಪ್ರಶ್ನೆಯಾಗಿ ಉಳಿದಿದೆ. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯ ಬಳಿಕ ನಾಯಿಗಳ ಆರೈಕೆ ಮಾಡುವುದು ಮುಖ್ಯವಾಗಿದೆ. ಅದರಂತೆ ಚಿಕಿತ್ಸೆ ಬಳಿಕ ನಾಯಿಯನ್ನು 48 ಗಂಟೆಗಳ ಕಾಲ ಪರಿವೀಕ್ಷಣೆಯಲ್ಲಿಟ್ಟು ಕಾಳಜಿ ವಹಿಸಬೇಕಾಗುತ್ತದೆ . ಆ ಬಳಿಕ ನಾಯಿ ಆರೋಗ್ಯವಾಗಿದೆ ಎಂಬುದನ್ನು ಖಾತರಿಪಡಿಸಿ ಕೊಂಡು ಎಲ್ಲಿಂದ ಹಿಡಿಯಲಾಗಿತ್ತು. ಅಲ್ಲೇ ಬಿಡಬೇಕಾಗುತ್ತದೆ. ಅದೇನೇ ಇರಲಿ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಬೇಜವಾಬ್ದಾರಿ ತನದಿಂದ ಅಮಾಯಕರು ಭಯದಿಂದ ಓಡಾಡುವ ಪರಿಸ್ಥಿತಿಗೆ ಕಾರಣರಾಗಿದ್ದಾರೆ. ಇನ್ನಾದದರೂ ಸಂಬಂಧಪಟ್ಟವರು ಎಚ್ಚರ ವಹಿಸಿ ಮುಂದಾಗುವ ಅನಾಹುತ ತಪ್ಪಿಸಬೇಕಾಗಿದೆ.