ಕೋಲಾರದ ಮಾಲೂರಿನಲ್ಲಿ ಜೆಡಿಎಸ್ ಮುಖಂಡ ಹೂಡಿ ವಿಜಯ್ ಕುಮಾರ್ ಅವರು ಅಂಬೇಡ್ಕರ್ ಜಯಂತಿ ಅಂಗವಾಗಿ ಆಟೋ ಚಾಲಕರಿಗೆ ಉಚಿತ ಗ್ಯಾಸ್ ಕೂಪನ್‌ಗಳು ಮತ್ತು ಆಹಾರ ಕಿಟ್‌ಗಳನ್ನು ವಿತರಿಸಿದರು. ಗ್ಯಾಸ್ ಅಭಾವದ ಹಿನ್ನೆಲೆಯಲ್ಲಿ ಚಾಲಕರಿಗೆ ನೆರವಾಗುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೋಲಾರ: ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧದಿಂ ಗ್ಯಾಸ್ ಅಭಾವ ಹಿನ್ನೆಲೆ ಆಟೋ ಚಾಲಕರಿಗೆ ಯಾವುದಾದರೂ ಒಂದು ರೀತಿಯಲ್ಲಿ ಸಹಕಾರ ನೀಡಬೇಕು ಎಂಬ ಉದ್ದೇಶದಿಂದ ಆಹಾರ ಕಿಟ್ ಹಾಗೂ ಗ್ಯಾಸ್ ಕೂಪನ್‌ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಜೆಡಿಎಸ್ ಪಕ್ಷದ ಮುಖಂಡ ಹೂಡಿ ವಿಜಯ್ ಕುಮಾರ್ ಹೇಳಿದರು.
ಚಾಲಕರಿಗೆ ಆಹಾರ ಕಿಟ್ ಹಾಗೂ ಆಟೋಗಳಿಗೆ ಗ್ಯಾಸ್ ಕೂಪನ್
ಮಾಲೂರು ನಗರದ ವೈಟ್ ಗಾರ್ಡನ್ ಬಳಿ ಇರುವ ಅವರ ನಿವಾಸದ ಆವರಣದಲ್ಲಿ ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ನಂತರ ಆಟೋ ಚಾಲಕರಿಗೆ ಆಹಾರ ಕಿಟ್ ಹಾಗೂ ಆಟೋಗಳಿಗೆ ಗ್ಯಾಸ್ ಕೂಪನ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಆವರು ರಚಿಸಿ ಕೊಟ್ಟ ಸಂವಿಧಾನದಲ್ಲಿನ ಚಿಂತನೆಗಳನ್ನು ಪ್ರತಿಯೊಬ್ಬ ಭಾರತೀಯರು ಅಳವಡಿಸಿಕೊಳ್ಳುವುದರ ಮೂಲಕ ಸಂವಿಧಾನ ಮತ್ತು ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಬೇಕು ಎಂದರು.
ಚುನಾವಣೆಗಾಗಿ ಅಥವಾ ಪ್ರಚಾರಕ್ಕಾಗಿ ಅಲ್ಲ
ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಗುತ್ತಿಲ್ಲ. ಇದು ಚುನಾವಣೆಗಾಗಿ ಅಥವಾ ಪ್ರಚಾರಕ್ಕಾಗಿ ಅಲ್ಲ. ಕೋವಿಡ್ ಸಂದರ್ಭದಲ್ಲಿಯೂ ಸಹ ಆಟೋ ಚಾಲಕರಿಗೆ ನೆರವು ನೀಡಲಾಗಿದೆ. ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕೆಲವು ರಾಜಕೀಯ ಪಕ್ಷಗಳು ಮತ ಬ್ಯಾಂಕಿಗೆ ಬಳಸಿಕೊಳ್ಳುತ್ತಿದ್ದಾರೆ. ಆದರೆ ಶೋಷಿತ ಸಮುದಾಯಗಳಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳು ಸಮರ್ಪಕವಾಗಿ ತಲುಪಿಸುತ್ತಿಲ್ಲ ಎಂದರು.
ಇದನ್ನೂ ಓದಿ: ಸಡಗರ ಸಂಭ್ರಮದಿಂದ ನಡೆದ ಐತಿಹಾಸಿಕ ಬೇತಮಂಗಲದ ಒನಕೆ ಕರಗ
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಕಣಗಲ ವೆಂಕಟಸ್ವಾಮಿ ಅವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ತಾಲೂಕು ಜೆಡಿಎಸ್ ಅಧ್ಯಕ್ಷ ಬಿಕೆ ನಾರಾಯಣಸ್ವಾಮಿ, ಜೆಡಿಎಸ್ ಪಕ್ಷದ ಮುಖಂಡರಾದ ಆರ್ ಪ್ರಭಾಕರ್, ವೆಂಕಟೇಶ್ ಗೌಡ, ಬಡಗಿ ಶ್ರೀನಿವಾಸ್, ಆಂಜಿನಪ್ಪ, ಗೋಪಾಲ್ ಗೌಡ, ಕುಟ್ಟಿ, ಶ್ರೀನಾಥ್, ದೊಡ್ಡ ಕಲ್ಲಳ್ಳಿ ನಾರಾಯಣಸ್ವಾಮಿ, ದಿಬ್ಬಯ್ಯ, ಗುಟ್ಲಪ್ಪ, ಚಲಪತಿ, ಎಸ್ ನಾರಾಯಣಸ್ವಾಮಿ, ಬಿ ಆರ್ ವೆಂಕಟೇಶ್ ಬಾಬು, ದೇವರಾಜ್ ರೆಡ್ಡಿ, ರಾಜಾರಾಮ್, ಮೋಹನ್ ಬಾಬು, ಪಂಡು ಕಿರಣ್, ಇನ್ನಿತರರು ಹಾಜರಿದ್ದರು.
ಇದನ್ನೂ ಓದಿ: ಗ್ಯಾಸ್‌ಗಾಗಿ ಸಾಲು ನಿಂತ ಚಾಲಕರಿಗೆ 'ಕಿರಣ್' ಆಸರೆ: ಮೈಸೂರಿನಲ್ಲಿ 5 ಲಕ್ಷ ರೂ. ಹಂಚಿದ ದಾನಿ!


