ಕೋಲಾರದಿಂದ ಬಂಗಾರಪೇಟೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ, ಪಕ್ಕದ ಸೀಟಿನಲ್ಲಿದ್ದ ಮಹಿಳೆಗೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಕೆರಳಿದ ಮಹಿಳೆ, ಆತನಿಗೆ ಬಸ್‌ನಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಆರೋಪಿಯು ಚಲಿಸುತ್ತಿದ್ದ ಬಸ್‌ನಿಂದ ಜಿಗಿದು ಪರಾರಿಯಾಗಿದ್ದಾನೆ.

ಕೋಲಾರ (ಆ.13): ಪಕ್ಕದ ಸೀಟಲ್ಲಿ ಕುಳಿತಿದ್ದ ಮಹಿಳೆಯ ಮೈಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯೊಬ್ಬನಿಗೆ ಕಿರುಕುಳಕ್ಕೊಳಗಾದ ಮಹಿಳೆ ಬಸ್‌ನಲ್ಲೇ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಕೋಲಾರದಿಂದ ಬಂಗಾರಪೇಟೆಗೆ ತೆರಳುತ್ತಿದ್ದ ಬಸ್‌ನಲ್ಲಿ ನಡೆದಿದೆ.

ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪಿ ಅಂಕಲ್ KGF ಮೂಲದವರೆಂದು ಗುರುತಿಸಲಾಗಿದೆ. ಇನ್ನು ಅದೇ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಬಂಗಾರಪೇಟೆಯವರು ಎನ್ನಲಾಗಿದೆ.

ವಿಡಿಯೋ ವೈರಲ್, ಬಸ್‌ನಲ್ಲಿ ನಡೆದಿದ್ದೇನು

ಕೋಲಾರದಿಂದ ಬಂಗಾರಪೇಟೆ ಕಡೆಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ

ಕೋಲಾರದಿಂದ - ಬಂಗಾರಪೇಟೆಗೆ ತೆರಳುತ್ತಿದ್ದ Ka 51-f4452 ಸಂಖ್ಯೆಯ KSRTC ಬಸ್. ಇದೆ ಬಸ್ ಹತ್ತಿದ್ದ ಕಾಮುಕ ಅಂಕಲ್ ಮಹಿಳೆಯ ಪಕ್ಕ ಕುಳಿತಿದ್ದಾನೆ. ಬಸ್ ಚಲಿಸುವಾಗ ಅಲುಗಾಡುತ್ತಾ ಮಹಿಳೆ ಮೈಕೈ ಸ್ಪರ್ಶಿಸಿರುವ ಕಾಮುಕ ಅಂಕಲ್. ಇದು ಸಹಜವೆಂದು ಮೊದಲಿಗೆ ಸುಮ್ಮನಿದ್ದ ಮಹಿಳೆ. ಆದರೆ ಪದೇಪದೆ ಇದೇ ರೀತಿ ಮೈಕೈ ಮುಟ್ಟಿ ಕೈಗೆ ಮುತ್ತು ಕೊಡಲು ಯತ್ನಿಸಿದ್ದಾನೆ. ಈ ವೇಳೆ ರೌದ್ರಾವತಾರ ತಾಳಿದ ಮಹಿಳೆ ಆನ್ ದಿ ಸ್ಪಾಟ್ ಬಸ್‌ನಲ್ಲೇ ಕಾಮುಕನಿ ಹಿಗ್ಗಾ ಮುಗ್ಗಾ ಥಳಿಸಿದ್ದಾಳೆ. ಈ ಘಟನೆಯಿಂದ ಬಸ್‌ನಲ್ಲಿದ್ದ ಇತರೆ ಪ್ರಯಾಣಿಕರು ಕೂಡ ಆರೋಪಿ ಗೂಸಾ ಕೊಟ್ಟಿದ್ದಾರೆ.

ಚಲಿಸುವ ಬಸ್‌ನಿಂದ ಹೊರಕ್ಕೆ ಜಿಗಿದು ಪರಾರಿ

ಯಾವಾಗ ಮಹಿಳೆ ತಿರುಗಿಬಿದ್ದಳೋ ಆಗ ಆಂಕಲ್ 'ತಪ್ಪಾಗಿದೆ ಬಿಟ್ಟುಬಿಡಿ' ಅಂತಾ ಮಹಿಳೆಯ ಕೈಕಾಲು ಬೀಳುವ ನಾಟಕ ಶುರು ಮಾಡಿದ್ದಾನೆ. ಅಷ್ಟೊತ್ತಿಗಾಗಲೆ ಮಹಿಳೆ ಚೆನ್ನಾಗಿ ಬೆಂಡೆತ್ತಿದ್ದಾರೆ. ಪ್ರಯಾಣಿಕರು ಕೂಡ ಗೂಸಾ ಕೊಟ್ಟಿದ್ದಾರೆ ಇನ್ನು ಇಲ್ಲೇ ಇದ್ದರೆ ಉಳಿಯುವುದಿಲ್ಲ ಎಂದವನೇ ಚಲಿಸುವ ಬಸ್‌ನಿಂದ ಹೊರಕ್ಕೆ ಜಿಗಿದು ಪರಾರಿಯಾಗಿದ್ದಾನೆ. ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಹಿಳೆಯರಿಗೆ ಸುರಕ್ಷತೆ ತಾಣ ಯಾವುದು?

ಮಹಿಳೆಯರಿಗೆ ಬಸ್‌ಸ್ಟ್ಯಾಂಡಲ್ಲೂ ಸುರಕ್ಷತೆಯಿಲ್ಲ, ಬಸ್‌ನಲ್ಲೂ ಇಲ್ಲ ಎಂಬಂತಾಗಿದೆ. ಶಕ್ತಿ ಯೋಜನೆಯಿಂದ ಯಾವಾಗಲೂ ರಶ್ ಇರುವ ಬಸ್‌ಗಳು ಇದನ್ನೇ ಬಂಡಾವಳ ಮಾಡಿಕೊಂಡ ಕಾಮುಕರು. ಮಹಿಳೆಯರನ್ನ ಸ್ಪರ್ಶಿಸಿ ಕಿರುಕುಳ ನೀಡುವುದು ದಿನನಿತ್ಯ ಬಸ್‌ಗಳಲ್ಲಿ ನಡೆಯುತ್ತಿವೆ. ಸಿಸಿಟಿವಿ ಹಾಕಿದರೂ ಕಿರುಕುಳ ಕಡಿಮೆಯಾಗಿಲ್ಲ. ಮಹಿಳೆಯರ ಪ್ರಯಾಣಿಸಲು ಸುರಕ್ಷಿತವಲ್ಲ ವಾತಾವರಣನಿರ್ಮಾಣವಾಗಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.