Asianet Suvarna News Asianet Suvarna News

ನಾರ್ಮಲ್ ಹೆರಿಗೆಗೆ ಫೇಮಸ್‌ ಇಲ್ಲಿನ ಸರ್ಕಾರಿ ಆಸ್ಪತ್ರೆ..!

ಹೆರಿಗೆ ವಿಚಾರ ಬಂದಾಗ ಸುರಕ್ಷತೆ ದೃಷ್ಟಿಯಿಂದ ಖಾಸಗಿ ಆಸ್ಪತ್ರೆಗಳಿಗೆ ಮೊರೆ ಹೋಗುವವರೇ ಜಾಸ್ತಿ. ಆದರೆ ಕೋಲಾರದಲ್ಲಿ ಜನ ಹೆರಿಗೆ ಅಂದ್ರೆ ಸಾಕು ಸರ್ಕಾರಿ ಆಸ್ಪತ್ರೆಗೇ ಹೋಗುತ್ತಾರೆ. ಇಲ್ಲಿನ ಸರ್ಕಾರಿ ಆಸ್ಪತ್ರೆ ಹೆರಿಗೆ ಮಾಡ್ಸೋದಕ್ಕೇ ಫೇಮಸ್ಸ್.

 

Kolar govt hospital is famous for normal delivery
Author
Bangalore, First Published Jan 24, 2020, 8:40 AM IST

ಕೋಲಾರ(ಜ.24): ಸರ್ಕಾರಿ ಆಸ್ಪತ್ರೆ ಅಂದರೆ ಮುಖ ತಿರುಗಿಸೋದು ಸಹಜ. ಆದರೆ, ಕೋಲಾರದ ಈ ಸರ್ಕಾರಿ ಆಸ್ಪತ್ರೆಯಲ್ಲಿ ಜನ ಸಾಲುಗಟ್ಟಿನಿಂತಿರುತ್ತಾರೆ. ಅದರಲ್ಲೂ ಈ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ನೆರೆಯ ರಾಜ್ಯಗಳಿಂದಲೂ ಬರೋದು ವಿಶೇಷ. ಆಪರೇಷನ್‌ ಇಲ್ಲದ ಸಹಜ ಹೆರಿಗೆಗೆ ಈ ಆಸ್ಪತ್ರೆ ಹೆಸರಾಗಿದೆ.

ಜಿಲ್ಲಾ ಕೇಂದ್ರ ಕೋಲಾರದಲ್ಲಿ ದೊಡ್ಡದಾದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಿದೆ. ಇಲ್ಲಿ ನಿತ್ಯವೂ ನೂರಾರು ಮಂದಿಯ ಆರೈಕೆ ಮಾಡಲಾಗ್ತಿದೆ. ಇಲ್ಲಿಂದ ಕೂಗಳತೆಯ ದೂರದಲ್ಲಿರುವ ಪುಟ್ಟದಾದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವು ಹೆರಿಗೆ ವಿಭಾಗದಲ್ಲಿ ಜನಪ್ರಿಯತೆ ಗಳಿಸಿದೆ. ನುರಿತ ವೈದ್ಯರು ಮತ್ತು ವೈದ್ಯಕೀಯ ಸಿಬಂದಿಯೇ ಇದಕ್ಕೆ ಕಾರಣವಾಗಿದ್ದಾರೆ.

ಸರ್ಕಾರಿ ಶಾಲೆಗೆ ಮಂಜೂರಾದ ಜಾಗವನ್ನು ಗ್ರಾಮಸ್ಥರೇ ತಟ್ಟು ಮಾಡಿದ್ರು..!

ಕೋಲಾರದ ದರ್ಗಾ ಮೊಹಲ್ಲಾದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವು ನಿತ್ಯವೂ ರೋಗಿಗಳಿಂದ ಕಿಕ್ಕಿರಿದಿರುತ್ತದೆ. ಇಲ್ಲಿಗೆ ದಿನವೂ 200ಕ್ಕಿಂತ ಹೆಚ್ಚು ಮಂದಿ ಹೊರರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಅದರಲ್ಲೂ ಇಲ್ಲಿಗೆ ಹೆರಿಗೆಗಾಗಿ ಬರುವ ಮಹಿಳೆಯರ ಸಂಖ್ಯೆನೇ ಹೆಚ್ಚು, ಪ್ರತೀ ತಿಂಗಳು ಇಲ್ಲಿ 50ಕ್ಕೂ ಜಾಸ್ತಿ ಹೆರಿಗೆ ಪ್ರಕರಣಗಳು ದಾಖಲಾಗುತ್ತವೆ. ನೆರೆಯ ಜಿಲ್ಲೆ ಮತ್ತು ನೆರೆಯ ರಾಜ್ಯಗಳಿಂದಲೂ ಈ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ಸೇರುವುದು ವಿಶೇಷ. ಇದು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ಪೈಕಿ ದಾಖಲೆಯೂ ಎನ್ನಬಹುದಾಗಿದೆ.

ಆಶ್ಚರ್ಯಕರವಾದ ಸಂಗತಿ ಏನೆಂದರೆ ಕೋಲಾರದಿಂದ ಹೊರಗೆ ಮದುವೆ ಆಗಿರುವ ಅದೆಷ್ಟೋ ಮಹಿಳೆಯರು ಹೆರಿಗೆಗಾಗಿ ಇದೇ ಆಸ್ಪತ್ರೆಗೆ ಬರುತ್ತಾರೆ ಎಂದು ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗಿವ ಪೋಷಕರು ಮಾತಾಡಿಕೊಳ್ಳುತ್ತಾರೆ.

ಸಿದ್ಧಗಂಗಾ ಮಠಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳ

ಬೆಂಗಳೂರು, ಹೊಸಕೋಟೆ, ಚಿಕ್ಕಬಳ್ಳಾಪುರ ಮುಳಬಾಗಿಲು, ಕೆಜಿಎಫ್‌, ಬಂಗಾರಪೇಟೆ ಮುಂತಾದ ಕಡೆಗಳಿಂದ ಇಲ್ಲಿಗೆ ಹೆರಿಗೆಗಾಗಿ ಬರುತ್ತಾರೆ, ಸುರಕ್ಷತೆ ದೃಷ್ಟಿಯಿಂದ ಬಹುತೇಕರು ಹೆರಿಗೆಗೆ ದಾಖಲಾಗುತ್ತಾರೆ.

ಆರೋಗ್ಯ ಇಲಾಖೆಯಿಂದ ಕಾಲ-ಕಾಲಕ್ಕೆ ವೈದ್ಯಾಧಿಕಾರಿಗಳಿಗೆ ಹೊಸ ತರಬೇತಿಯನ್ನು ಕೊಡುವುದು ಸಹಜ. ಆ ಹೊಸ ವಿಷಯ ಹಾಗೂ ವಿಧಾನವನ್ನು ಇಲ್ಲಿನ ಶುಶ್ರೂಷಕಿಯರ ಜೊತೆಗೆ ಆಸ್ಪತ್ರೆಯ ವೈದ್ಯರು ಹಂಚಿಕೊಳ್ಳುತ್ತಾರೆ. ಇದರಿಂದಾಗಿ ಶುಶ್ರೂಷಕಿಯರೂ ಕೂಡಾ ಹೆರಿಗೆ ಪೂರ್ವದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆಯಲ್ಲಿ ನೈಪುಣ್ಯ ಪಡೆದುಕೊಂಡು ತುರ್ತು ಸಂದರ್ಭಗಳನ್ನು ನಿಭಾಯಿಸಲು ಸಾಧ್ಯವಾಗಿದೆ. ಈ ಆಸ್ಪತ್ರೆಗೆ ಬರುವ ರೋಗಿಗಳಿಗೆ ಇಲ್ಲಿನ ವಾತಾವರಣವು ತೃಪ್ತಿ ತಂದಿದೆ. ಇಲ್ಲಿನ ಸ್ವಚ್ಛತೆ ಮತ್ತು ವೈದ್ಯರ ಸೇವೆಯು ಇಲ್ಲಿಗೆ ಬರುವ ಗರ್ಭಿಣಿಯರಲ್ಲಿ ಧೈರ್ಯವನ್ನು ಕೊಡುವುದರಲ್ಲಿ ಯಶಸ್ವಿಯಾಗಿದೆ.

ಒಟ್ಟಾರೆಯಾಗಿ, ಸರ್ಕಾರಿ ಆಸ್ಪತ್ರೆಗಳೆಂದ್ರೆ ನ್ಯೂನ್ಯತೆಗಳನ್ನು ಹೇಳೋದು ಮಾಮೂಲಿ ಅನ್ನೋ ಈ ಕಾಲದಲ್ಲಿ ಕೋಲಾರದ ಈ ಪುಟ್ಟದಾದ ಆರೋಗ್ಯ ಕೇಂದ್ರದ ಸೇವೆ ಬಗ್ಗೆ ದೊಡ್ಡದಾಗಿ ಕೊಂಡಾಡುವುದು ಹೆಮ್ಮೆಯ ಸಂಗತಿಯಾಗಿದೆ.

ಅರಣ್ಯ ಇಲಾಖೆಗೆ ಚೆಳ್ಳೆಹಣ್ಣು ತಿನ್ನಿಸಿದ ಆಗಂತುಕ ಚಿರತೆ!

ನಮ್ಮ ಆಸ್ಪತ್ರೆಯಲ್ಲಿ ಆಧುನಿಕ ತಂತ್ರಜ್ಞಾನದ ಎಲ್ಲ ಪರಿಕರಗಳೂ ಇವೆ. ಚಿಕಿತ್ಸೆ ನೀಡುವ ಅನುಭವಿ ಮತ್ತು ನುರಿತ ವೈದ್ಯರು ಹಾಗು ಶುಶ್ರೂಕಿಯರು ಇದ್ದಾರೆ. ಆಪರೇಷನ್‌ ಇಲ್ಲದೆ ಯಾವುದೇ ಪ್ರಾಣಾಪಾಯವಿಲ್ಲದೆ ಸುರಕ್ಷಿತವಾಗಿ ಹೆರಿಗೆ ಆಗುವುದರಿಂದ ಹೆಚ್ಚಿನ ಮಹಿಳೆಯರು ಹೆರಿಗೆಗಾಗಿ ಇಲ್ಲಿಗೆ ಬರುತ್ತಾರೆ ಎಂದು ದರ್ಗಾ ಮೊಹಲ್ಲಾದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ನಾರಾಯಣಸ್ವಾಮಿ ಹೇಳಿದ್ದಾರೆ.

Follow Us:
Download App:
  • android
  • ios