ಶಿಕ್ಷಣ ಸಚಿವರೇ ಇತ್ತ ನೋಡಿ: ಕೊಡಗಿನ 24 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಒಬ್ಬ ಶಿಕ್ಷಕರೂ ಇಲ್ಲ!

ಕೊಡಗು ಸುಶಿಕ್ಷಿತರ ಜಿಲ್ಲೆ ಎಂದು ಕರೆಯುತ್ತಾರೆ. ಪ್ರತೀ ವರ್ಷದ ಶೈಕ್ಷಣಿಕ ಸಾಧನೆಯಲ್ಲೂ ತೀರಾ ಕಡಿಮೆ ಏನು ಇರಲಿಲ್ಲ. ಆದರೆ ಈ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೋಡಿದರೆ ಶೈಕ್ಷಣಿಕ ಸಾಧನೆ ಅದ್ಯಾವ ಮಟ್ಟಕ್ಕೆ ಕುಸಿಯುತ್ತದೆಯೋ ಎನ್ನುವ ಆತಂಕ ಕಾಡಲಾರಂಭಿಸಿದೆ. 

Kodagus 24 Government primary schools do not have a single teacher gvd

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಸೆ.07): ಕೊಡಗು ಸುಶಿಕ್ಷಿತರ ಜಿಲ್ಲೆ ಎಂದು ಕರೆಯುತ್ತಾರೆ. ಪ್ರತೀ ವರ್ಷದ ಶೈಕ್ಷಣಿಕ ಸಾಧನೆಯಲ್ಲೂ ತೀರಾ ಕಡಿಮೆ ಏನು ಇರಲಿಲ್ಲ. ಆದರೆ ಈ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೋಡಿದರೆ ಶೈಕ್ಷಣಿಕ ಸಾಧನೆ ಅದ್ಯಾವ ಮಟ್ಟಕ್ಕೆ ಕುಸಿಯುತ್ತದೆಯೋ ಎನ್ನುವ ಆತಂಕ ಕಾಡಲಾರಂಭಿಸಿದೆ. ಅದಕ್ಕೆ ಕಾರಣ ಕೊಡಗಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ಶಿಕ್ಷಕರ ಕೊರತೆ ಇದೆ. ಶಿಕ್ಷಕರು ಅಷ್ಟೇ ಅಲ್ಲ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು, ಬ್ಲಾಕ್ ಸಮೂಹ ಸಂಪನ್ಮೂಲ ವ್ಯಕ್ತಿಗಳ ಸಂಖ್ಯೆಯೂ ಕೊರತೆ ಇದೆ. ಅಷ್ಟೇ ಏಕೆ ಶಿಕ್ಷಣ ಇಲಾಖೆಯ ಜಿಲ್ಲಾ ಮುಖ್ಯಸ್ಥರಾದ ಡಿಡಿಪಿಐ ಹುದ್ದೆಯೇ ಖಾಲಿ ಇದೆ. 

ಈ ಸ್ಥಿತಿಯೇ ಕೊಡಗಿನ ಶೈಕ್ಷಣಿಕ ಸಾಧನೆ ತೀರಾ ಕಳಪೆಯಾಗಿ ಬಿಡುತ್ತಾ ಎನ್ನುವ ಆತಂಕಕ್ಕೆ ಕಾರಣವಾಗಿದೆ. ಕೊಡಗು ಜಿಲ್ಲೆಯ ಒಟ್ಟು 532 ಪ್ರಾಥಮಿಕ ಶಾಲೆಗಳ ಪೈಕಿ ಬರೋಬ್ಬರಿ 24 ಪ್ರಾಥಮಿಕ ಶಾಲೆಗಳಲ್ಲಿ ಒಬ್ಬ ಶಿಕ್ಷಕರೂ ಇಲ್ಲ. ಮಡಿಕೇರಿ ತಾಲ್ಲೂಕಿನ 8 ಸೋಮವಾರಪೇಟೆ ತಾಲ್ಲೂಕಿನ 1 ಮತ್ತು ವಿರಾಜಪೇಟೆ ತಾಲ್ಲೂಕಿನ ಬರೋಬ್ಬರಿ 15 ಶಾಲೆಗಳಲ್ಲಿ ಒಬ್ಬ ಶಿಕ್ಷಕರೂ ಇಲ್ಲ. ಈ ಶಾಲೆಗಳಲ್ಲಿ 311 ವಿದ್ಯಾರ್ಥಿಗಳಿದ್ದು ಇವರ ಕಲಿಕೆ ಅದ್ಯಾವ ಗುಣಮಟ್ಟದಿಂದ ಕೂಡಿರುತ್ತೇ ಇನ್ನುವುದನ್ನು ನೀವೇ ಊಹಿಸಿಕೊಳ್ಳಿ. ಸದ್ಯ ಈ ಶಾಲೆಗಳಿಗೆ ಅಕ್ಕಪಕ್ಕದ ಶಾಲೆಗಳ ಶಿಕ್ಷಕರನ್ನು ಹೆಚ್ಚುವರಿ ಕರ್ತವ್ಯದ ಮೇಲೆ ನಿಯೋಜನೆ ಮಾಡಲಾಗಿದೆ. 

ಶೆಟ್ಟರ್‌ ಪಕ್ಷ ಬಿಡುವಾಗ ಸಮಾಜವನ್ನು ಕೇಳಿದ್ದಾರೆಯೇ?: ಶಾಸಕ ಮಹೇಶ ಟೆಂಗಿನಕಾಯಿ

ಈ 24 ಶಾಲೆಗಳಲ್ಲಿ ಒಬ್ಬರು ಶಿಕ್ಷಕರು ಇಲ್ಲದಿರುವುದು ಅಷ್ಟೇ ಅಲ್ಲ, ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳಿರುವುದು 1412. ಆದರೆ ಈಗ 1025 ಹುದ್ದೆಗಳು ಮಾತ್ರವೇ ಭರ್ತಿಯಾಗಿವೆ. ಅವರಲ್ಲಿ 279 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅಂದರೆ ಇನ್ನೂ 108 ಶಿಕ್ಷಕರ ಹುದ್ದೆಗಳು ಖಾಲಿ ಇವೆ. 24 ಶಾಲೆಗಳಲ್ಲಿ ಒಬ್ಬ ಶಿಕ್ಷಕರೂ ಇಲ್ಲದಿರುವುದು ಒಂದೆಡೆಯಾದರೆ ಮತ್ತೊಂದೆಡೆ ಉಳಿದ ಶಾಲೆಗಳಲ್ಲೂ 108 ಶಿಕ್ಷಕರ ಕೊರತೆ ಇರುವುದು ಜಿಲ್ಲೆಯ ಶೈಕ್ಷಣಿಕ ಸ್ಥಿತಿಯ ದುಸ್ಥಿತಿ ಎಂತಹದ್ದು ಎನ್ನುವುದನ್ನು ಸಾರಿ ಹೇಳುತ್ತಿದೆ. 

ಇನ್ನು ಪ್ರೌಢಶಾಲೆಗಳ ಸ್ಥಿತಿಯೇನು ಉತ್ತಮವಾಗಿಲ್ಲ ಬಿಡಿ. 185 ಪ್ರೌಢಶಾಲೆಗಳಿಗೆ 412 ಶಿಕ್ಷಕರ ಹುದ್ದೆಗಳಿದ್ದು, ಅವುಗಳ ಪೈಕಿ ಭರ್ತಿಯಾಗಿರುವುದು 292 ಹುದ್ದೆಗಳು ಮಾತ್ರ. ಉಳಿದ 120 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇವುಗಳಲ್ಲಿ 80 ಕ್ಕೂ ಹೆಚ್ಚು ಸಹಶಿಕ್ಷಕರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ಪ್ರಭಾರ ಡಿಡಿಪಿಐ ಸೌಮ್ಯಪೊನ್ನಪ್ಪ. ಇನ್ನು 17 ಪ್ರೌಢಶಾಲೆಗಳಲ್ಲಿ ಮುಖ್ಯ ಶಿಕ್ಷಕರೇ ಇಲ್ಲ ಎನ್ನುವುದು ಅಚ್ಚರಿಯ ವಿಷಯ. ಇದೆಲ್ಲವೂ ಒಂದೆಡೆಯಾದರೆ ಮತ್ತೊಂದೆಡೆ ಶೈಕ್ಷಣಿಕ ಸಾಧನೆಗಳನ್ನು ಪರಿಶೀಲಿಸಿ ಶಾಲೆಗಳಿಗೆ ಮಾರ್ಗದರ್ಶನ ನೀಡಬೇಕಾಗಿರುವ ಸಿಆರ್ಪಿ, ಬಿಆರ್ಪಿ ಹುದ್ದೆಗಳು ಸಾಕಷ್ಟು ಖಾಲಿ ಇವೆ.

ಭಾರತ, ಇಂಡಿಯಾ ವಿಚಾರದಲ್ಲಿ ಬಿಜೆಪಿಗೆ ಜನರಿಂದಲೇ ಪಾಠ: ಸಚಿವ ಮಧು ಬಂಗಾರಪ್ಪ

ಶಿಕ್ಷಣ ಇಲಾಖೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹುದ್ದೆಗಳು ಮತ್ತು ಶಿಕ್ಷಕರ ಹುದ್ದೆಗಳು ಖಾಲಿ ಇರುವುದಕ್ಕೆ ಸಾರ್ವಜನಿಕರು, ಪೋಷಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ನಮ್ಮ ಮಕ್ಕಳೆಲ್ಲರೂ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಇಲ್ಲಿ ಶಿಕ್ಷಕರ ಕೊರತೆ ಇಷ್ಟೊಂದು ಎದುರಾದರೆ ನಮ್ಮ ಮಕ್ಕಳ ಕಲಿಕೆ, ಭವಿಷ್ಯ ಏನಾಗಬೇಕು. ಇದೆಲ್ಲಾ ಸರ್ಕಾರಿ ಶಾಲೆಗಳ ಬಗ್ಗೆ ಅಸಡ್ಡೆ ತೋರಿಸಿ, ಶಿಕ್ಷಣದ ಖಾಸಗೀಕರಣಕ್ಕೆ ಅವಕಾಶ ನೀಡುವ ಹುನ್ನಾರ ಎಂದು ಪೋಷಕರಾದ ಮಹದೇವ ಅವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Latest Videos
Follow Us:
Download App:
  • android
  • ios