Asianet Suvarna News Asianet Suvarna News

Kodagu: ಅನೈತಿಕ ಚಟುವಟಿಕೆ ತಾಣವಾಯ್ತಾ ಗಾಂಧಿ ಭವನ, ಕಾಮಗಾರಿ ಮುಗಿದರೂ ಉದ್ಘಾಟನೆಯಿಲ್ಲ

ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಗಾಂಧಿ ಭವನ   ಕುಂಟುತ್ತವಾದರೂ ಕಾಮಗಾರಿ ಮುಗಿಸಿದರೂ, ಲೋಕಾರ್ಪಣೆಗೊಳ್ಳದೆ ಇದೀಗ ಅದು ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ ಎನ್ನುವುದು ನಿಜಕ್ಕೂ ಬೇಸರದ ಸಂಗತಿ.

Kodagu Gandhi Bhavan has become a immoral activities gow
Author
First Published Dec 18, 2022, 10:00 PM IST

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಡಿ.18): ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ತತ್ವಾದರ್ಶಗಳನ್ನು ಇಂದಿನ ಯುವಜನತೆಗೆ ತಿಳಿಸಬೇಕೆಂಬ ಉದ್ದೇಶದಿಂದ ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಗಾಂಧಿ ಭವನ ನಿರ್ಮಿಸಲು ಮುಂದಾಗಿತ್ತು. ಕುಂಟುತ್ತವಾದರೂ ಕಾಮಗಾರಿ ಮುಗಿಸಿದರೂ, ಲೋಕಾರ್ಪಣೆಗೊಳ್ಳದೆ ಇದೀಗ ಅದು ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ ಎನ್ನುವುದು ನಿಜಕ್ಕೂ ಬೇಸರದ ಸಂಗತಿ. ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಸಂದೇಶಗಳನ್ನು ಯುವಜನತೆಗೆ ಪರಿಚಯ ಮಾಡಿಕೊಡಲು 2019 ರಲ್ಲಿ ಅಂದಿನ ಮುಖ್ಯಮಂತ್ರಿ ಆಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ವಿವಿಧೆಡೆಗಳಲ್ಲಿ ಗಾಂಧಿ ಭವನ ನಿರ್ಮಾಣ ಮಾಡುವುದಕ್ಕೆ ಚಾಲನೆ ನೀಡಿದ್ದರು. ಒಂದುವರೆ ವರ್ಷದೊಳ್ಳಗೆ ಭವನದ ಕಾಮಗಾರಿ ಮುಗಿಸಿ ಲೋಕಾರ್ಪಣೆಗೊಳಿಸುವುದಾಗಿ ಘೋಷಿಸಿದ್ದರು. ಆದರೆ ಕಾಮಗಾರಿ ಕಾಮಗಾರಿಗೆ ಚಾಲನೆ ನೀಡಿ ಮೂರು ವರ್ಷಗಳಾದ ಮಡಿಕೇರಿಯಲ್ಲಿ ಗಾಂಧಿ ಭವನದ ಕಾಮಗಾರಿ ಮುಗಿದ್ದಿದ್ದರು ಉದ್ಘಾಟನೆ ಭಾಗ್ಯ ಮಾತ್ರ ಕಂಡಿಲ್ಲ. 

ಗಾಂಧಿ ಭವನವನ್ನು ಅದ್ಭುತವಾಗಿಯೇ ನಿರ್ಮಿಸಲಾಗಿದೆ. ಭವನದ ಆವರಣಕ್ಕೆ ಎಂಟ್ರಿ ಆಗುತ್ತಿದ್ದಂತೆ ದೊಣ್ಣೆ ಹಿಡಿದು ನಡೆಯುತ್ತಿರುವ ಗಾಂಧಿ ಅವರು ನಮ್ಮ ಮುಂದೆ ನಿಲ್ಲುತ್ತಾರೆ. ಒಳಗೆ ಹೋದರೆ ಅಮೃತಶಿಲೆಯಲ್ಲಿ ಕೆತ್ತನೆ ಮಾಡಿರುವ ಮಹಾತ್ಮನ ಪ್ರತಿಮೆ ಇದೆ. ಹಾಗೆ  ಕೈಯ್ಯಲ್ಲಿ ಮಗು ಎತ್ತಿಕೊಂಡು ಮುದ್ದಾಡುತ್ತಿರೋ ಗಾಂಧಿ, ಮಂದಸ್ಮಿತವಾಗಿ ಪುಸ್ತಕ ಓದುತ್ತಿರುವುದರಲ್ಲಿ ಮಗ್ನರಾಗಿರುವ ಗಾಂಧಿ, ಚರಕದಲ್ಲಿ ನೂಲು ನೇಯುತ್ತಿರುವ ರಾಷ್ಟ್ರಪಿತ ಹೀಗೆ ಹಲವು ಸಂದರ್ಭಗಳ ಗಾಂಧೀಜಿಯವರ ಕ್ಷಣಗಳು ಅನಾವರಣಗೊಳ್ಳುತ್ತವೆ. ಜೊತೆಗೆ ಗಾಂಧಿಜಿಯವರು ಬಾಲ್ಯದಿಂದ ಹಿಡಿದು ಸ್ವಾತಂತ್ರ್ಯ ಹೋರಾಟದವರೆಗಿನ ವಿವಿಧ ಸಂದರ್ಭಗಳ ಫೋಟೋಗಳು ಭವನದ ಒಳಗೋಡೆಗಳನ್ನು ಅಲಂಕರಿಸಿವೆ.

 ಈ ವಿಶಿಷ್ಟ ಶೈಲಿಯ ನೂತನ ಗಾಂಧಿ ಭವನ ಕಾಮಗಾರಿ ಮುಗಿದು ಮೂರು ತಿಂಗಳು ಕಳೆದಿದೆ. ಆದರೆ ಕಾಮಗಾರಿ ಮುಗಿದ್ರು ಉದ್ಘಾಟನೆ ಭಾಗ್ಯ ಮಾತ್ರ ಕಾಣದೆ ಎಲ್ಲವೂ ದೂಳು ಹಿಡಿಯುತ್ತಿವೆ ಎಂದು  ಸರ್ವೋದಯ ಸಮಿತಿ ಸದಸ್ಯ ನವೀನ್ ಅಂಬೇಕಲ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೂ ಕೊಡಗು ಮಹಾತ್ಮ ಗಾಂಧೀಜಿಯವರ ನೆಚ್ಚಿನ ಸ್ಥಳವಾಗಿತ್ತು ಕೂಡಾ. ಜಿಲ್ಲೆಯಲ್ಲಿ ಗಾಂಧಿ ಭವನ ನಿರ್ಮಾಣವಾಗ್ಬೇಕು ಅನ್ನೋದು ಅದೆಷ್ಟೋ ದಶಕಗಳಿಂದ ಇದ್ದ ಬೇಡಿಕೆ. ಹೀಗಾಗಿಯೇ ಮಡಿಕೇರಿಯ ಸುದರ್ಶನ ವೃತ್ತದ ಬಳಿ 80 ಸೆಂಟ್ ಜಾಗ ಗುರುತಿಸಿ, ಕಳೆದ ಮೂರು ವರ್ಷಗಳಿಂದ ಭವನ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. ಎಲ್ಲವೂ ಅಂದ್ಕೊಂಡಂತೆ ಆಗಿದ್ರೆ ಕಳೆದ ಗಾಂಧಿ ಜಯಂತಿ ವೇಳೆಗೆ ಈ ಭವನವು ಲೋಕಾರ್ಪಣೆಗೊಳ್ಳಬೇಕಿತ್ತು. ಆದರೆ ಇಂದಿಗೂ ಈ ಭವನ ಉದ್ಘಾಟನೆ ಭಾಗ್ಯಕಂಡಿಲ್ಲ ಹೀಗಾಗಿ ಗಾಂಧಿ ಭವನದ ಸುತ್ತಮುತ್ತ ಪುಂಡಪೋಕರಿಗಳ ಅಡ್ಡವಾಗುತ್ತಿದೆ.

Gandhi Jayanti 2022: ಲೈಫ್‌ನಲ್ಲಿ ಅಳವಡಿಸಿಕೊಳ್ಳಬೇಕಾದ ಗಾಂಧೀಜಿಯವರ ಮಾತುಗಳು

ಕಾಮಗಾರಿ ಮುಗಿಸಿ ಗೇಟಿಗೆ ಬೀಗ ಹಾಕಲಾಗಿದ್ದು ಗೇಟ್ ಮುಂಭಾಗವೇ ನಿತ್ಯ ರಾತ್ರಿ ಮದ್ಯಸಮಾರಾಧಾನೆ ಕಾರ್ಯಕ್ರಮ ನಡೆಯುತ್ತಿದೆ. ಗೇಟಿನ ಮುಂಭಾಗ ನಿತ್ಯ ಎಣ್ಣೆ ಕುಡಿದು ಬಾಟೆಲ್‍ಗಳನ್ನು ಹಾಕುತ್ತಿದ್ದು ಬಾಟೆಲ್‍ಗಳ ರಾಶಿ ಬಿದ್ದಿವೆ. ಕೊಡಗು ಜಿಲ್ಲೆಯಲ್ಲಿ ಗಾಂಧೀಜಿಯವರ ಹೆಜ್ಜೆ ಗುರುತ್ತುಗಳು, ಜಿಲ್ಲೆಯೊಂದಿಗೆ ಗಾಂಧೀಜಿಯವರ ನಂಟು, ಅವರ ಸಾಹಿತ್ಯ ಕಲಾ ಪ್ರದರ್ಶನ ಕೊಠಡಿ, ಸ್ವಾತಂತ್ರ್ಯ ಹೋರಾಟದ ಹೆಜ್ಜೆಗಳು, ಗಾಂಧೀಜಿಯ ವಿಚಾರಧಾರೆಗಳನ್ನು ಪ್ರತಿಬಿಂಬಿಸುವ ವಿಷಯಗಳು, ಗ್ರಂಥಾಲಯ, ಮುಂತಾದವುಗಳನ್ನು ಒಳಗೊಂಡಂತೆ ಮೂರು ಕೋಟಿ ವೆಚ್ಚದಲ್ಲಿ ತಲೆ ಎತ್ತಿದು ಲೋಕಾರ್ಪಣೆಗೊಳ್ಳದೆ ಇರುವುದರಿಂದ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಗಾಂಧಿ ಬದಲು ದೇಶದ ಕರೆನ್ಸಿ ನೋಟುಗಳಲ್ಲಿ ನೇತಾಜಿ ಚಿತ್ರ ಬಳಸಿ: ಹಿಂದು ಮಹಾಸಭಾ ಆಗ್ರಹ!

ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಚಿನ್ನಸ್ವಾಮಿ ಅವರನ್ನು ಕೇಳಿದ್ರೆ ಕಾಮಗಾರಿ ಸಂಪೂರ್ಣವಾಗಿ ಮುಗಿದಿದೆ. ಆದಷ್ಟು ಬೇಗಾ ಉದ್ಘಾಟನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.  ಒಟ್ಟಿನಲ್ಲಿ ರಾಷ್ಟ್ರಪಿತನ ಭವನವು ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಲೋಕಾರ್ಪಣೆಗೊಳ್ಳುತ್ತದೆ ಎಂದು ಕಾಯುತ್ತಿದ್ದ ಯುವ ಜನತೆಗೆ ಇಂದಿಗೂ ಈ ಗಾಂಧಿಭವನ ಉದ್ಘಾಟನೆಗೊಳ್ಳದೆ ಪುಂಡಪೋಕರಿಗಳ ಅಡ್ಡವಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Follow Us:
Download App:
  • android
  • ios