Asianet Suvarna News Asianet Suvarna News

ಹೊಡೆದಾಟ ಮರೆಮಾಚಿಕೊಳ್ಳಲು ಬಿಜೆಪಿಯಿಂದ ಸಲ್ಲದ ಆರೋಪ: ಸಚಿವ ಭೋಸರಾಜ್

ಕೊಡಗು ಉಸ್ತುವಾರಿ ಸಚಿವ ಭೋಸರಾಜ್ ಅವರು ಕೊಡಗಿನ ತಲಕಾವೇರಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಸಂಕಲ್ಪ ಪೂಜೆ ಮಾಡಿದರು.
 

Kodagu district  Incharge Minister NS boseraju Special Pooja   at  talacauvery temple for rain kannada news gow
Author
First Published Jun 27, 2023, 2:20 PM IST

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಜೂ.27): ಸೋಲಿಗೆ ನೀನು ಕಾರಣ, ಅವನು ಕಾರಣ ಎಂದು ಬಿಜೆಪಿಯವರು ಹೊಡೆದಾಡಿಕೊಳ್ಳುತ್ತಿದ್ದಾರೆ. ಈ ಹೊಡೆದಾಟವನ್ನು ಮರೆಮಾಚಿಕೊಳ್ಳಲು ಬಿಜೆಪಿಯವರು ನಮ್ಮ ಸರ್ಕಾರದ ವಿರುದ್ಧ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕೊಡಗು ಉಸ್ತುವಾರಿ ಸಚಿವ ಭೋಸರಾಜ್ ಅವರು ಕೊಡಗಿನ ತಲಕಾವೇರಿಯಲ್ಲಿ ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದ್ದಾರೆ.

ಕೊಡಗು ಜಿಲ್ಲೆ ಮತ್ತು ಕರ್ನಾಟಕ ರಾಜ್ಯದಲ್ಲಿ ಮಳೆ ಕೊರತೆಯಾಗಿರುವ ಹಿನ್ನೆಯಲ್ಲಿ ತಲಕಾವೇರಿಗೆ ಆಗಮಿಸಿ ಸಂಕಲ್ಪ ಪೂಜೆ ಸಲ್ಲಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಕಮಿಷನ್ಗಾಗಿ ಕಾಂಗ್ರೆಸ್ ಸರ್ಕಾರ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಯಾದ ಅಭಿವೃದ್ಧಿ ಕಾಮಗಾರಿಗಳನ್ನು ನಿಲ್ಲಿಸಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಹೇಳಿರುವುದಕ್ಕೆ ಸಚಿವ ಭೋಸರಾಜ್ ಅವರು ಪ್ರತಿಕ್ರಿಯಿಸಿದರು. ಜನರು ಗೋವಿಂದ ಕಾರಜೋಳ ಮತ್ತು ಬಿಜೆಪಿಯ ಇತರೆ ನಾಯಕರನ್ನು ನೋಡಿದ್ದಾರೆ. ಹೀಗಾಗಿಯೇ ಅವರನ್ನು ಜನರು ತಿರಸ್ಕರಿಸಿದ್ದಾರೆ ಎಂದರು.

ಕೇಸ್ ಬೈ ಕೇಸ್ ಮಾಹಿತಿ ಪಡೆದು ಬಿಜೆಪಿ ವಿರುದ್ಧ ತನಿಖೆಗೆ ಸರ್ಕಾರ ನಿರ್ಧಾರ: ಕೃಷ್ಣ ಬೈರೇಗೌಡ

ಇನ್ನು ಅಗತ್ಯ ವಸ್ತುಗಳ ಬೆಲೆಗಳು ಜಾಸ್ತಿಯಾಗಿರುವುದಕ್ಕೆ ಇದು ಮಧ್ಯವರ್ತಿಗಳ ಪರವಾದ ಸರ್ಕಾರ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಟ್ವಿಟ್ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವ ಬೋಸರಾಜ ಅವರು ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆಗಿದ್ದವರು. ಹಾಗೆ ಯಡಿಯೂರಪ್ಪನವರು ನಾಲ್ಕು ಬಾರಿ ಸಿಎಂ ಆಗಿದ್ದವರು. ಅವರು ತಾಳ್ಮೆ ತೆಗೆದುಕೊಳ್ಳಬೇಕು. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದಾಗ ಎಲ್ಲವೂ ಸರಿ ಹೋಗಬೇಕೆಂದರೆ ಕನಿಷ್ಠ 6 ತಿಂಗಳು ಬೇಕಾಗುತ್ತದೆ. ಆದರೆ ಸರ್ಕಾರ  ಬಂದು ತಿಂಗಳಷ್ಟೇ ಆಗಿದೆ. ಆಗಲೇ ಬುಲೆಟ್ ಹಾರಿಸಿದರೆ ಹೇಗೆ. ಈ ಇಬ್ಬರನ್ನು ಜನರು ಈಗಾಗಲೇ ತಿರಸ್ಕಾರ ಮಾಡಿದ್ದಾರೆ. ಇವರು ಹೀಗೆ ಆಡುತ್ತಿದ್ದರೆ, ಇನ್ನಷ್ಟು ತಿರಸ್ಕಾರಕ್ಕೆ ಒಳಗಾಗಬೇಕಾಗುತ್ತದೆ ಎಂದರು.

ಎಲ್ಲಾ ಗ್ಯಾರೆಂಟಿ ಯೋಜನೆಗಳನ್ನು ಸರ್ಕಾರ ಕೂಡಲೇ ಜಾರಿ ಮಾಡದಿದ್ದರೆ ಪ್ರತಿಭಟನಾ ಧರಣಿ ನಡೆಸುವುದಾಗಿ ಯಡಿಯೂರಪ್ಪ ಅವರು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವ ಬೋಸರಾಜ ಅವರು 2013 ರಲ್ಲಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಇರುವಾಗ 7 ಕೆ ಜಿ ಅಕ್ಕಿ ಕೊಡುತ್ತಿದ್ದೆವು. ಅದರೆ ಬಿಜೆಪಿ ಸರ್ಕಾರ ಬಂದ ಮೇಲೆ ಅದನ್ನು ಕಡಿಮೆ ಮಾಡಿ ಕೇವಲ 5 ಕೆ ಜಿ ಕೊಡುತ್ತಿದ್ದರು. ಇದರ ವಿರುದ್ಧ ಯಡಿಯೂರಪ್ಪ ಅವರು ಯಾಕೆ ಮಾತನಾಡಲಿಲ್ಲ. ಈಗ ನಮ್ಮ ಸರ್ಕಾರ 10 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೇವೆ. ಅದೇ ರೀತಿ ಕೊಡುತ್ತೇವೆ. ಆದರೆ ಅಕ್ಕಿ ಕೊಡುವುದಕ್ಕೆ ಐಎಫ್ಸಿಯವರು ಮೊದಲು ಒಪ್ಪಿಕೊಂಡಿದ್ದರು. ನಾವು ದುಡ್ಡುಕೊಟ್ಟು ಕೊಳ್ಳಲು ಮುಂದಾದರೆ ಕೇಂದ್ರ ಸರ್ಕಾರ ರಾಜಕಾರಣಕ್ಕಾಗಿ ಅಕ್ಕಿ ಕೊಡಲು ಬಿಡುತ್ತಿಲ್ಲ.

ಚಾಮರಾಜನಗರ ಆಕ್ಸಿಜನ್ ದುರಂತ ಮರು ತನಿಖೆಗೆ ಚಾರ್ಚ್ ಫ್ರೇಮ್ ರೆಡಿಯಾಗಿದೆ: ಸಚಿವ

ರಾಜ್ಯದಲ್ಲಿ 25 ಅವರ ಸಂಸದರು ಇದ್ದಾರೆ. ಅವರೆಲ್ಲಾ ಬಾಯಿ ಬಿಡಲಿ ಎಂದು ಒತ್ತಾಯಿಸಿದರು. ಪ್ರಧಾನಿ ಮೋದಿಯವರಾಗಲಿ, ಯಾರೆ ಆಗಲಿ ಅವರ ಮನೆಯಿಂದ ಅಕ್ಕಿ ತಂದು ಕೊಡುವುದಿಲ್ಲ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗಲೇ, ಕೇಂದ್ರದಲ್ಲಿ ಆಹಾರ ಹಕ್ಕು ಕಾಯ್ಕೆಯನ್ನು ಜಾರಿಗೆ ತರಲಾಗಿದೆ. ಆ ನಿಯಮದಂತೆ ನಾವು ಜನರಿಗೆ ಆಹಾರಧಾನ್ಯಗಳನ್ನು ಕೊಡಲು ಹೊರಟಿದ್ದೇವೆ. ಈಗಲೂ ನಾವು ಜನರಿಗೆ ಅಕ್ಕಿಕೊಟ್ಟೆ ಕೊಟ್ಟು ನುಡಿದಂತೆ ನಡೆಯುತ್ತೇವೆ ಎಂದಿದ್ದಾರೆ.

ಕೊಡಗು ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಮಳೆಯ ತೀವ್ರ ಕೊರತೆ ಇರುವ ಹಿನ್ನಲೆಯಲ್ಲಿ ತಲಕಾವೇರಿಯಲ್ಲಿ ಮಡಿಕೇರಿ ಶಾಸಕ ಮಂತರ್ ಗೌಡ, ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ, ಅಪರ ಜಿಲ್ಲಾಧಿಕಾರಿ ಡಾ ನಂಜುಂಡೇಗೌಡ, ಸಿಇಓ ಡಾ ಆಕಾಶ್ ಸೇರಿದಂತೆ ಎಲ್ಲರೊಂದಿಗೆ ಸಂಕಲ್ಪ ಪೂಜೆ ಸಲ್ಲಿಸಿದರು.

Follow Us:
Download App:
  • android
  • ios