Asianet Suvarna News Asianet Suvarna News

ಮಡಿಕೇರಿ : ಕೊರೋನಾ ಸೋಂಕು ಮುಕ್ತ ಹಳ್ಳಿ ಅಭಿಯಾನ

  • ‘ನಮ್ಮ ವಾರ್ಡ್‌ ಕೊರೋನಾ ಮುಕ್ತ ವಾರ್ಡ್‌’ ಮತ್ತು ‘ನಮ್ಮ ಗ್ರಾಮ ಕೊರೋನಾ ಮುಕ್ತ ಗ್ರಾಮ’ ಎಂಬ ಕಾರ್ಯಕ್ರಮಕ್ಕೆ ಚಾಲನೆ
  • ಕೊಡಿನಲ್ಲಿ ಕೊರೋನಾ ಮುಕ್ತ ಗ್ರಾಮಕ್ಕಾಗಿ ಅಭಿಯಾನ
  • ಅಭಿಯಾನಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ 
Kodagu DC Charulatha Begin Campaign For Covid Control in Villages snr
Author
Bengaluru, First Published May 23, 2021, 9:16 AM IST

ಮಡಿಕೇರಿ (ಮೇ.23):  ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಹಿನ್ನೆಲೆಯಲ್ಲಿ ನಗರದ ಭಾರತೀಯ ಜೀವ ವಿಮಾ ಕಚೇರಿ ಬಳಿ ‘ನಮ್ಮ ವಾರ್ಡ್‌ ಕೊರೋನಾ ಮುಕ್ತ ವಾರ್ಡ್‌’ ಮತ್ತು ‘ನಮ್ಮ ಗ್ರಾಮ ಕೊರೋನಾ ಮುಕ್ತ ಗ್ರಾಮ’ ಎಂಬ ಕಾರ್ಯಕ್ರಮಕ್ಕೆ ಜಿಲ್ಲಾಧಿ​ಕಾರಿ ಚಾರುಲತಾ ಸೋಮಲ್‌ ಶನಿವಾರ ಚಾಲನೆ ನೀಡಿದರು.

ಜಿಲ್ಲಾಧಿ​ಕಾರಿಗಳೊಂದಿಗೆ ಇತ್ತೀಚೆಗೆ ಪ್ರಧಾನಿ ಮೋದಿ ಸಂವಾದದ ವೇಳೆ ಕೊರೋನಾ ಮುಕ್ತ ಗ್ರಾಮ, ವಾರ್ಡ್‌ ಅಭಿಯಾನಕ್ಕೆ ಕರೆ ನೀಡಿದ್ದರು. ಅದರಂತೆ ಕೊಡಗು ಜಿಲ್ಲೆಯಲ್ಲಿ ಅಭಿಯಾನ ಶುರುವಾಗಿದೆ. ಜನತೆಯಲ್ಲಿ ಜಾಗೃತಿ ಮೂಡಿಸಿ ಸೋಂಕು ನಿಯಂತ್ರಣಕ್ಕೆ ಕ್ರಮ ವಹಿಸಲಾಗುತ್ತಿದೆ.

ಮೇ.22ರ ರಿಪೋರ್ಟ್: ರಾಜ್ಯದಲ್ಲಿ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ದುಪ್ಪಟ್ಟು ...

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ​ಧಿಕಾರಿ ಡಾ.ಕೆ.ಮೋಹನ್‌, ಡಾ.ಆನಂದ, ಡಾ.ಮಹೇಶ್‌, ತಹಸೀಲ್ದಾರ್‌ ಮಹೇಶ್‌, ಪೌರಾಯುಕ್ತರಾದ ರಾಮದಾಸ, ಕಾರ್ಮಿಕ ಅಧಿ​ಕಾರಿ ಅನೀಲ್‌ ಬಗಟಿ, ತಾಲೂಕು ವೈದ್ಯಾಧಿ​ಕಾರಿ ಡಾ.ಮಂಜುನಾಥ, ನಗರಸಭೆ ಸದಸ್ಯರು ಇತರರು ಇದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios