Asianet Suvarna News Asianet Suvarna News

ಭಾರತೀಯ ಸಂಸ್ಕೃತಿ ತಿಳಿಯಲು ಸಂಸ್ಕೃತ ಗೊತ್ತಿರಬೇಕು, ನಾನೂ ಕಲಿಯುತ್ತೇನೆ: ಸದಾನಂದಗೌಡ!

*ನಾನೂ ಕೂಡ ಸಂಸ್ಕೃತ ಕಲಿಯುತ್ತಿದ್ದೇನೆ: ಕೇಂದ್ರದ ಮಾಜಿ ಸಚಿವ
*ಸಂಸ್ಕೃತ ಭಾಷೆಯು ನಮ್ಮ ಭಾರತೀಯ ಭಾಷೆಗಳ  ಜನನಿ
*ಸಂಸ್ಕೃ ಕಲಿಯುವುದರಿಂದ ನಾವೆಲ್ಲರೂ ಭಾರತೀಯರು ಎಂಬ ಭಾವನೆ

Knowing Sanskrit Langauge will help in Understanding Indian Tradition says DV Sadananda Gowda mnj
Author
Bengaluru, First Published Feb 21, 2022, 9:14 AM IST

ಬೆಂಗಳೂರು (ಫೆ. 21): ಸಂಸ್ಕೃತ ಭಾಷೆಯು ನಮ್ಮ ಭಾರತೀಯ ಭಾಷೆಗಳ (Language) ಜನನಿಯಾಗಿದೆ. ಭಾರತೀಯ ಸಂಸ್ಕೃತಿಯನ್ನು ತಿಳಿಯಬೇಕಾದರೆ ಸಂಸ್ಕೃತ ಭಾಷೆಯನ್ನು ತಿಳಿಯಬೇಕು. ನಮ್ಮ ದೇಶದ ಸಾಹಿತ್ಯ ಸಂಸ್ಕೃತ ಭಾಷೆಯಲ್ಲಿ ಅಡಗಿದೆ. ಸಂಸ್ಕೃತವನ್ನು ಕಲಿಯುವುದರಿಂದ ನಾವೆಲ್ಲರೂ ಭಾರತೀಯರು ಎಂಬ ಭಾವನೆ ಬರುತ್ತದೆ. ಭಾರತದ ಆತ್ಮ ಸಂಸ್ಕೃತ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ (DV Sadananda Gowda) ಹೇಳಿದ್ದಾರೆ.

ಅವರು ಸಮ್ಯಕ್‌ ಪ್ರತಿಷ್ಠಾನ ಹೆಬ್ಬಾಳದ ಸಿಂಧಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸಂಸ್ಕೃತೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸಂಸ್ಕೃತ-ಸೇವಾವ್ರತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮ ಸರ್ಕಾರ ಪ್ರಾಚೀನ ಸಂಸ್ಕೃತ ಭಾಷೆಯನ್ನು ಉಳಿಸಿ ಬೆಳೆಸಲು ಹೆಚ್ಚಿನ ಆದ್ಯತೆಯನ್ನು ನೀಡಿದೆ. ಸಂಸ್ಕೃತ ವಿಶ್ವವಿದ್ಯಾನಿಲಯಗಳ ಅಭಿವೃದ್ಧಿಗೆ ಸಾಕಷ್ಟುಅನುದಾನಗಳನ್ನು ಬಿಡುಗಡೆ ಮಾಡಿದೆ, ಇದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು.

ಇದನ್ನೂ ಓದಿ: Sanskrit University In Karnataka : ನಮ್ಮ ನೆಲದ ತುಳು, ಕೊಡವ ಭಾಷೆಯ ಮೇಲೂ ನಿಮ್ಮ ಮಮತೆ ತೋರಿಸಿ!

ಸಮ್ಯಕ್‌ ಪ್ರತಿಷ್ಠಾನವು ಕಳೆದ ಎಂಟು ವರ್ಷಗಳಿಂದ ಸಂಸ್ಕೃತ ಪ್ರಚಾರ ಮತ್ತು ಪ್ರಸಾರದ ಕೆಲಸವನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯ. ಈ ಕಾರ್ಯಕ್ರಮದ ಮುಖಾಂತರ ಸಂಸ್ಕೃತ ಭಾಷೆಯು ಮನೆ ಮನೆಗಳಲ್ಲಿ, ಮನ-ಮನದಲ್ಲಿ ಬೆಳಗಲಿ. ನಾನು ಕೂಡ ಈ ಕಾರ್ಯಕ್ರಮದಿಂದ ಪ್ರೇರಣೆಗೊಂಡಿದ್ದು, ಸಂಸ್ಕೃತವನ್ನು ಕಲಿಯಲು ಪ್ರಾರಂಭಿಸುತ್ತೇನೆ. ಸಂಸ್ಕೃತ ಭಾಷೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನನ್ನ ಕ್ಷೇತ್ರದಲ್ಲಿ ಮಾಡಲು ಸದಾ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಆಶೀರ್ವಚನ ನೀಡಿದ ಬೆಳಗಾವಿಯ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವ್ಯಕ್ತಿ ಪರಿಪೂರ್ಣನಾಗಲು ಭಾಷಾಜ್ಞಾನ ಅವಶ್ಯಕವಾಗಿದ್ದು, ಸಂಸ್ಕೃತದಿಂದ ಪರಿಪೂರ್ಣ ವ್ಯಕ್ತಿಯಾಗುತ್ತಾನೆ. ಪರಿಪೂರ್ಣ ಸಮಾಜಕ್ಕೆ ಸಂಸ್ಕೃತ ಕಲಿಕೆ ಅತಿ ಮುಖ್ಯ ಎಂದರು.

ಸಂಸ್ಕೃತ ಸೇವಾವ್ರತಿ ಪ್ರಶಸ್ತಿ ಸ್ವಿಕರಿಸಿ ಮಾತನಾಡಿದ ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಶ್ರೀನಿವಾಸ ವರಖೇಡಿ, ಒಂದು ಕಾಲದಲ್ಲಿ ಸಂಸ್ಕೃತ ಯಾಕೆ ಎನ್ನುತ್ತಿದ್ದವರು ಈಗ ಸಂಸ್ಕೃತ ಕಲಿಕೆ ಹೇಗೆ ಎಂದು ಯೋಚಿಸುತ್ತಿದ್ದಾರೆ. ದೇಶದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ ಅಧ್ಯಯನ ಮಾಡಲು ಅವಕಾಶವಿದೆ ಎಂದು ಹೇಳಿದರು. ಸಂಸ್ಕೃತ ಭಾಷೆಯಲ್ಲಿ ಹೆಚ್ಚು ಅಂಕ ಪಡೆದ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಇದನ್ನೂ ಓದಿ: Hijab Row: ಸಂಸ್ಕೃತ ವಿವಿಯಂತೆ ಕರ್ನಾಟಕದಲ್ಲಿ ಉರ್ದು ವಿಶ್ವವಿದ್ಯಾಲಯಕ್ಕೆ SDPI ಡಿಮಾಂಡ್!

ಸಮ್ಯಕ್‌ ಪ್ರತಿಷ್ಠಾನ ಹೆಬ್ಬಾಳದ ಸಿಂಧಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸಂಸ್ಕೃತೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸಂಸ್ಕೃತ-ಸೇವಾವ್ರತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ಉದ್ಘಾಟಿಸಿದರು. ಬೆಳಗಾವಿಯ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

 

 

ಮಾಗಡಿಯಲ್ಲಿ ಸಂಸ್ಕೃತ ವಿವಿ: ರಾಮನಗರ (Ramanagara) ಜಿಲ್ಲೆಯ ಮಾಗಡಿ (Magadi) ತಾಲೂಕಿನಲ್ಲಿ ನೂರು ಎಕರೆ ವಿಸ್ತಾರದಲ್ಲಿ ತಲೆ ಎತ್ತಲಿದೆ ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾನಿಲಯ (Karnataka Sanskrit University). ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು  ಶಂಕುಸ್ಥಾಪನೆ ನೆರವೇರಿಸಿದ್ದಾರೆ. 

ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿಯಲ್ಲಿ ಈ ವಿಶ್ವ ವಿದ್ಯಾಲಯ (University) ಕ್ಯಾಂಪಸ್ ಸ್ಥಾಪನೆಯಾಗಲಿದೆ. ವೇದ, ವಿಜ್ಞಾನ, ಗಣಿತ ಹಾಗೂ ವಿಜ್ಞಾನ ತಂತ್ರಜ್ಞಾನಕ್ಕೆ ಸಂಸ್ಕೃತ ಭಾಷೆಯ ಕೊಡುಗೆ ಅನನ್ಯ. ಇದರ ಕುರಿತು ಜಗತ್ತಿನ ವಿವಿಧ ಮೂಲೆಗಳಿಂದ ಅಧ್ಯಯನ ಮಾಡಲು ಭಾರತಕ್ಕೆ ಸಾವಿರಾರು ವಿದ್ಯಾರ್ಥಿಗಳು ಬರುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಸಂಸ್ಕೃತ ಭಾಷೆಯ ಜೊತೆಗೆ ಆಧುನಿಕ ಶಿಕ್ಷಣ ಪಡೆಯುವಂತಹ ಕೇಂದ್ರಗಳನ್ನು ಇದೇ ವಿಶ್ವವಿದ್ಯಾಲಯ ಅಡಿಯಲ್ಲಿ ಪ್ರಾರಂಭಿಸಲಾಗುತ್ತಿದೆ.

Follow Us:
Download App:
  • android
  • ios