ಹೋಂ ಐಸೋಲೇಶನ್‌ ಆರೈಕೆ ಪ್ಯಾಕೇಜ್‌ ಆರಂಭ..!

ದಿನೇದಿನೇ ಹೆಚ್ಚುತ್ತಿರುವ ಕೊರೋನಾ ಸೋಂಕನ್ನು ತಡೆಗಟ್ಟಲು ಸಾರ್ವಜನಿಕರಿಗೆ ನೆರವಾಗುವ ಉದ್ದೇಶದಿಂದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಬುಧವಾರ ಹೋಂ ಐಸೋಲೇಷನ್‌ ಆರೈಕೆ ಯೋಜನೆ ಮತ್ತು ಕಿಟ್‌ ಬಿಡುಗಡೆಗೊಳಿಸಿದೆ.

KMC Manipal introduces home isolation covid19 treatment kit

ಮಣಿಪಾಲ(ಜು.30): ದಿನೇದಿನೇ ಹೆಚ್ಚುತ್ತಿರುವ ಕೊರೋನಾ ಸೋಂಕನ್ನು ತಡೆಗಟ್ಟಲು ಸಾರ್ವಜನಿಕರಿಗೆ ನೆರವಾಗುವ ಉದ್ದೇಶದಿಂದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಬುಧವಾರ ಹೋಂ ಐಸೋಲೇಷನ್‌ ಆರೈಕೆ ಯೋಜನೆ ಮತ್ತು ಕಿಟ್‌ ಬಿಡುಗಡೆಗೊಳಿಸಿದೆ.

ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಜಿ. ಮುತ್ತಣ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿಅವರು ಮೊದಲ ಕಿಟ್‌ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಮಾರುಕಟ್ಟೆಮುಖ್ಯಸ್ಥ ಸಚಿನ್‌ ಕಾರಂತ ಮತ್ತು ಕಾರ್ಯಾಚರಣೆ ಮುಖ್ಯಸ್ಥ ಜಿಬು ಥಾಮಸ್‌ ಉಪಸ್ಥಿತರಿದ್ದರು.

ಕೊರೋನಾ ಸೋಂಕಿತೆಯ ಅಂತ್ಯಕ್ರಿಯೆಯಲ್ಲಿ150 ಮಂದಿ ಭಾಗಿ..! ಆತಂಕ

ಎರಡು ಬಗೆಯ ಪ್ಯಾಕೇಜ್‌ ಮತ್ತು ಕಿಟ್‌ ಸೌಲಭ್ಯವಿದ್ದು, 10 ದಿನಗಳ ಸಾಮಾನ್ಯ ಪ್ಯಾಕೇಜ್‌ಗೆ 4000 ರು., ಇದರಲ್ಲಿ ಥರ್ಮಾಮೀಟರ್‌, ಪಲ್ಸ್‌ ಒಕ್ಸಿಮೀಟರ್‌, 10 ಮಾಸ್ಕ್, 1 ಪಿಪಿಇ ಕಿಟ್‌, 500 ಎಂಎಲ್‌ ಸ್ಯಾನಿಟೈಝರ್‌, ವೈಟಲ್‌ ಚಾರ್ಟ್‌ ಇರುತ್ತದೆ.

3 ಬಾರಿ ವೈದ್ಯರೊಂದಿಗೆ, ಒಮ್ಮೆ ಪಥ್ಯಾಹಾರ ತಜ್ಞರೊಂದಿಗೆ ಉಚಿತ ಸಮಾಲೋಚನೆ ಮತ್ತು ಪ್ರತಿದಿನ ದಾದಿಯಾರೊಂದಿಗೆ ವಿಡಿಯೋ ಸಮಾಲೋಚನೆ ಒಳಗೊಂಡಿದೆ. 10 ದಿನಗಳ ಸಮಗ್ರ ಪ್ಯಾಕೆಜ್‌ಗೆ 6000 ರು.ಗಳಾಗಿದ್ದು ಹೆಚ್ಚುವರಿಯಾಗಿ ಬಿ.ಪಿ. ಅಪರೇಟೀಸ್‌ ದೊರೆಯಲಿದೆ. ಹೆಚ್ಚಿನ ಮಾಹಿತಿಗೆ 0820- 2922761 ಗೆ ಸಂಪರ್ಕಿಸಬಹುದು.

Latest Videos
Follow Us:
Download App:
  • android
  • ios