ಬುಕ್‌ ಮಾಡಿದ್ದನ್ನು ಬಿಟ್ಟು ಗ್ರಾಹಕನಿಗೆ ಬೇರೆ ಕಾರು ನೀಡಿದ Kia showroom ಗೆ ದಂಡ

ಬುಕ್‌ ಮಾಡಿದ ಹೊಸ ಮಾದರಿಯ ವಾಹನ ಬಿಟ್ಟು ಹಳೆಯ ಮಾದರಿಯ ವಾಹನ ನೀಡಿದ ಹುಬ್ಬಳ್ಳಿಯ ಕಾರ್‌ ಶೋರೂಂಗೆ ಜಿಲ್ಲಾ ಗ್ರಾಹಕರ ನ್ಯಾಯಾಲಯ ಪರಿಹಾರದೊಂದಿಗೆ ದೊಡ್ಡ ಮೊತ್ತದ ದಂಡವನ್ನು ವಿಧಿಸಿದೆ.

Kia showroom fined for cheating customers dharwad rav

ಧಾರವಾಡ (ಮಾ.2) : ಬುಕ್‌ ಮಾಡಿದ ಹೊಸ ಮಾದರಿಯ ವಾಹನ ಬಿಟ್ಟು ಹಳೆಯ ಮಾದರಿಯ ವಾಹನ ನೀಡಿದ ಹುಬ್ಬಳ್ಳಿಯ ಕಾರ್‌ ಶೋರೂಂಗೆ ಜಿಲ್ಲಾ ಗ್ರಾಹಕರ ನ್ಯಾಯಾಲಯ ಪರಿಹಾರದೊಂದಿಗೆ ದೊಡ್ಡ ಮೊತ್ತದ ದಂಡವನ್ನು ವಿಧಿಸಿದೆ.

ಇಲ್ಲಿಯ ವಿದ್ಯಾಗಿರಿಯ ಜೆಎಸ್‌ಎಸ್‌ ಕಾಲೇಜಿ(JSS Collage)ನ ಉಪನ್ಯಾಸಕ ನಾಗರಾಜ ಪಾಟೀಲ(Nagaraj patil) ಎಂಬುವರು 2020ರ ಮೇ ತಿಂಗಳಲ್ಲಿ . 14,85,110 ಮೊತ್ತವನ್ನು ನವನಗರದ ‘ನಾಗಶಾಂತಿ ಕಿಯಾ ಡೀಲರ್‌(Nagashanthi Kia Dealer)’ಗೆ ತುಂಬಿ ಫೇಸ್‌ ಲಿಫ್ಟ್‌ + ಮಫರ್‌ ಬಂಪರ್‌ ಸೌಲಭ್ಯ(Facelift + Muffler Bumper feature)ದ ಎಚ್‌.ಟಿ.ಕೆ. + ಜಿ. ಸ್ಮಾರ್ಟ್ ಸ್ಟ್ರೀಮ್‌(HTC + G. Smart Stream) 1.5 ಲೀಟರ್‌ ವಾಹನವನ್ನು ಬುಕ್‌ ಮಾಡಿದ್ದರು.

ಧಾರವಾಡ: ಕೆಐಎಡಿಬಿ ಹಗರಣ, ಸಿಐಡಿಯಿಂದ ಮೊದಲ ಬಂಧನ

ಆ ವಾಹನ ಜೂ. 2ರಂದು ಬಿಡುಗಡೆಯಾಗುವುದಿತ್ತು. ಆದರೆ, ನಾಗಶಾಂತಿ ಕಿಯಾ ಡೀಲರ್‌ ಬಿಡುಗಡೆಯ ದಿನವೇ ಸೆಲ್ಟೋಸ್‌ ಎಚ್‌.ಟಿ.ಕೆ(Seltos HTK). + 1.5 ಪೆಟ್ರೋಲ್‌ ಹಳೆಯ ಮಾದರಿಯ ವಾಹನವನ್ನು ದೂರುದಾರರಿಗೆ ಕೊಟ್ಟಿದ್ದರು. ಒಂದು ತಿಂಗಳ ಆನಂತರ ತಾನು ಬುಕ್‌ ಮಾಡಿದ ವಾಹನದ ಬದಲಿಗೆ ಹಳೆಯ ಮಾದರಿ ಕಾರು ನೀಡಲಾಗಿದೆ ಎಂಬ ವಿಷಯ ನಾಗರಾಜ ಅವರಿಗೆ ತಿಳಿದಿದೆ. ಈ ಕುರಿತು ನಾಗಶಾಂತಿ ಕಿಯಾ ಡೀಲರ್‌ ಜನರಲ್‌ ಮ್ಯಾನೇಜರ್‌ ವಿಜಯ ಪಿಳ್ಳೆ(Vijay Pillai) ಹಾಗೂ ಇತರರನ್ನು ಸಂಪರ್ಕಿಸಿದ್ದಾರೆ. ವಾಹನ ಬದಲಾವಣೆ ಮಾಡಿಕೊಡಲು ಆಗುವುದಿಲ್ಲ. ಆದರೆ, ಹೊಸ ವಾಹನಕ್ಕೆ ಇರುವ ಸೌಲಭ್ಯಗಳನ್ನು ಈಗ ಕೊಟ್ಟಿರುವ ವಾಹನಕ್ಕೆ ಅಳವಡಿಸಿ ಕೊಡುವುದಾಗಿ ಹೇಳಿದ್ದರು.

ಅದಕ್ಕೆ ಒಪ್ಪದ ದೂರುದಾರ ನಾಗರಾಜ ಅವರು, ನಾಗಶಾಂತಿ ಕಿಯಾ ಡೀಲರ್‌ನಿಂದಾಗಿ ತನಗೆ ಮೋಸವಾಗಿದೆ ಹಾಗೂ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ(Under the Consumer Protection Act) ಸೇವಾ ನ್ಯೂನತೆ ಆಗಿದೆ ಎದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಆದರೆ, ಶೋರೂಂನವರು ಬುಕ್‌ ಮಾಡಿದ ವಾಹನವನ್ನೇ ದೂರುದಾರರಿಗೆ ನೀಡಿದ್ದೇವೆ ಎಂದು ಪ್ರಕರಣ ವಜಾ ಮಾಡುವಂತೆ ಆಕ್ಷೇಪಣೆ ಎತ್ತಿದ್ದರು. ದೂರು ಮತ್ತು ಆಕ್ಷೇಪಣೆಯನ್ನು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿ.ಅ. ಬೋಳಶೆಟ್ಟಿಮತ್ತು ಪಿ.ಸಿ. ಹಿರೇಮಠ ಲಭ್ಯವಿರುವ ಸಾಕ್ಷ್ಯಾಧಾರಗಳನ್ನು ಆಧರಿಸಿ ದೂರುದಾರ ಬುಕ್‌ ಮಾಡಿರುವ ಕಾರಿನ ಬದಲು ಹಳೇ ಮಾದರಿ ಕಾರು ನೀಡಿರುವುದು ಖಚಿತಪಡಿಸಿಕೊಂಡು ಡೀಲರ್‌ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನತೆ ಎಸಗಿದ್ದಾರೆ ಎಂದು ತೀರ್ಪು ನೀಡಿದೆ.

ಯಾವುದೇ ವ್ಯವಹಾರದಲ್ಲಿ ನಂಬಿಕೆ ಮುಖ್ಯ. ಆದರೆ ನಾಗಶಾಂತಿ ಕಿಯಾ ಡೀಲರ್‌ರವರು ಈ ಪ್ರಕರಣದಲ್ಲಿ ದೂರುದಾರ ಬುಕ್‌ ಮಾಡಿದ ವಾಹನ ಬಿಟ್ಟು ಬೇರೆ ಹಳೆಯ ಮಾದರಿಯ ವಾಹನವನ್ನು ಕೊಟ್ಟು ಗ್ರಾಹಕರ ನಂಬಿಕೆಗೆ ಮೋಸ ಮಾಡಿದ್ದಾರೆ ಎಂದು ತೀರ್ಮಾನಿಸಿ ದೂರುದಾರರಿಗೆ ಕೊಟ್ಟಿರುವ ಹಳೆಯ ಮಾದರಿ ವಾಹನ ವಾಪಸ್‌ ಪಡೆದು ಅವರು ಬುಕ್‌ ಮಾಡಿದ ಫೇಸ್‌ ಲಿಫ್ಟ್‌ + ಮಫರ್‌ ಬಂಪರ್‌ ಸೌಲಭ್ಯದ ಎಚ್‌.ಟಿ.ಕೆ. +ಜಿ. ಸ್ಮಾರ್ಚ್‌ ಸ್ಟ್ರೀಮ್‌ 1.5 ಲೀಟರ್‌ ಹೊಸ ಮಾದರಿಯ ವಾಹನವನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ನೀಡುವಂತೆ ಆದೇಶಿಸಿದೆ. ದೊಡ್ಡ ಮೊತ್ತದ ಹಣ ನೀಡಿ ವಾಹನ ಖರೀದಿಸುವಾಗ ಗ್ರಾಹಕರು ಸಹ ಎಚ್ಚರಿಕೆಯಿಂದ ವ್ಯವಹರಿಸುವಂತೆ ಆಯೋಗ ತನ್ನ ತೀರ್ಪಿನಲ್ಲಿ ಚರ್ಚಿಸಿದೆ.

ಶೇ.90ರಷ್ಟು ರೋಡ್ ಫಂಡಿಂಗ್, ಸುಲಭ ಸಾಲದ ಜೊತೆ ಆಕರ್ಷಕ ಕೊಡುಗೆ ಘೋಷಿಸಿದ ಟೊಯೋಟಾ!

ಇದಕ್ಕೆ ತಪ್ಪಿದ್ದಲ್ಲಿ ವಾಹನ ಖರೀದಿಸಲು ದೂರುದಾರ ಕೊಟ್ಟಿರುವ ₹14,85,110ವನ್ನು 2020ರ ಜುಲೈದಿಂದ ಶೇ. 8ರಂತೆ ಬಡ್ಡಿ ಲೆಕ್ಕ ಹಾಕಿ ದೂರುದಾರನಿಗೆ ಹಿಂದಿರುಗಿಸುವಂತೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನನುಕೂಲ ಹಾಗೂ ಮಾನಸಿಕ ತೊಂದರೆಗಾಗಿ .1 ಲಕ್ಷ ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚ .10,000ಗಳನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ನೀಡುವಂತೆ ಜಿಲ್ಲಾ ಗ್ರಾಹಕರ ಆಯೋಗ ಹುಬ್ಬಳ್ಳಿಯ ನಾಗಶಾಂತಿ ಕಿಯಾ ಡೀಲರ್‌ಗೆ ಆದೇಶಿಸಿದೆ.

Latest Videos
Follow Us:
Download App:
  • android
  • ios