ಕೋಲಾರ [ಆ.28] : ಕೋಲಾರದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದಮಾಜಿ ಸಚಿವ ಕೆ.ಎಚ್ ಮುನಿಯಪ್ಪ ಇದೀಗ ಸೋಲಿನ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ.

ಕೋಲಾರದಲ್ಲಿ ಮಾತನಾಡಿದ ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಕಾರ್ಯಕರ್ತರಿಗೆ ಖಡಕ್  ಸೂಚನೆ ನೀಡಿದ್ದಾರೆ. ಬಿಜೆಪಿ ಪರವಾಗಿ ಕೆಲಸ ಮಾಡಿರುವವರನ್ನು ಉಚ್ಛಾಟನೆ ಮಾಡಬೇಕು ಎಂದು ಹೇಳಿದ್ದಾರೆ. ಯಾರೇ ಬಿಜೆಪಿ ಪರ ಕೆಲಸ ಮಾಡಿದರೂ ತಿಳಿಸುವಂತೆ ಈ ವೇಳೆ ಬಹಿರಂಗ ಸೂಚನೆ ನೀಡಿದ್ದಾರೆ.

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನೀವು ಕೊಡುವ ಅಭಿಪ್ರಾಯ ದೆಹಲಿಗೆ ಹೋಗುತ್ತದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವರದಿಯಲ್ಲಿ ದೆಹಲಿಗೆ ಕಳುಹಿಸುತ್ತಾರೆ. ಆದ್ದರಿಂದ ಎಲ್ಲವನ್ನು ಧೈರ್ಯವಾಗಿ ಹೇಳಿ ಎಂದು ಮುನಿಯಪ್ಪ ಹೇಳಿದರು.

ಪರೋಕ್ಷವಾಗಿ ಇಲ್ಲಿನ ಪ್ರಭಾವಿ ಕಾಂಗ್ರೆಸ್ ಮುಖಂಡರಾದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೋಲಾರ ಶಾಸಕ ಶ್ರೀನಿವಾಸ್ ಗೌಡ, ಮಾಜಿ ಶಾಸಕರಾದ ಕೊತ್ತೂರು ಮಂಜು ಹಾಗೂ ಮಂಜುನಾಥ್ ಗೌಡ ವಿರುದ್ಧ ಅಖಾಡಕ್ಕೆ ಇಳಿದರಾ ಎನ್ನುವ ಶಂಕೆ ಮೂಡಿದೆ.