ಗಡಿನಾಡ ಶಾಲಾ ಮಕ್ಕಳಿಗೆ ಆನ್‌ಲೈನ್ ಕ್ಲಾಸ್: ಶಿಕ್ಷಣದಲ್ಲೂ ಕೇರಳ ಮಾಡೆಲ್ ಯತ್ನ!
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ಶಾಲಾ ಶೈಕ್ಷಣಿಕ ವರ್ಷ ಯಾವಾಗ ಪ್ರಾರಂಭಿಸುವುದು ಎಂಬ ಲೆಕ್ಕಾಚಾರದಲ್ಲೇ ತೊಡಗಿರುವಾಗಲೇ ಕೇರಳದಲ್ಲಿ ಈಗಾಗಲೇ ಆನ್‌ಲೈನ್ ಮೂಲಕ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಲಾಗಿದೆ. ಜೂ. 1ರಿಂದ ಫಸ್ಟ್$ಬೆಲ್ ಹೆಸರಿನಲ್ಲಿ ಮಲಯಾಳಂ ಭಾಷೆಯ ಆನ್‌ಲೈನ್ ತರಗತಿಗಳು ಆರಂಭವಾದರೆ, ಜೂ.17ರಿಂದ ಕಾಸರಗೋಡಿನ ಗಡಿನಾಡ ಕನ್ನಡಿಗ ಮಕ್ಕಳಿಗೆ ಕನ್ನಡ ಭಾಷೆಗಳಲ್ಲಿ ಆನ್‌ಲೈನ್ ಕ್ಲಾಸ್ ಆರಂಭಿಸಲಾಗಿದೆ.
ಮಂಗಳೂರು(ಜೂ.20): ಮಹಾಮಾರಿ ಕೊರೋನಾ ವೈರಸ್ ಕೇಕೆ ಹಾಕುತ್ತಿದ್ದರೆ, ಇಲ್ಲಿನ ಮಕ್ಕಳು ಅದಕ್ಕೆ ಸೆಡ್ಡುಹೊಡೆದು ಆನ್‌ಲೈನ್ ಕಲಿಕೆಯಲ್ಲಿ ಬ್ಯೂಸಿ ಆಗಿದ್ದಾರೆ! ನಾಲ್ಕು ಗೋಡೆಗಳ ತರಗತಿ ಕೊಠಡಿ ಇಲ್ಲ, ಹಾಜರಿ ಕರೆಯುವುದಿಲ್ಲ, ಆದರೆ ದಿನವೂ ನಿಗದಿತ ವೇಳೆಯಲ್ಲಿ ಆನ್‌ಲೈನ್ ಮುಂದೆ ಕೂತು ಪಾಠ ಕೇಳಬೇಕು.
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ಶಾಲಾ ಶೈಕ್ಷಣಿಕ ವರ್ಷ ಯಾವಾಗ ಪ್ರಾರಂಭಿಸುವುದು ಎಂಬ ಲೆಕ್ಕಾಚಾರದಲ್ಲೇ ತೊಡಗಿರುವಾಗಲೇ ಕೇರಳದಲ್ಲಿ ಈಗಾಗಲೇ ಆನ್‌ಲೈನ್ ಮೂಲಕ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಲಾಗಿದೆ. ಜೂ. 1ರಿಂದ ಫಸ್ಟ್$ಬೆಲ್ ಹೆಸರಿನಲ್ಲಿ ಮಲಯಾಳಂ ಭಾಷೆಯ ಆನ್‌ಲೈನ್ ತರಗತಿಗಳು ಆರಂಭವಾದರೆ, ಜೂ.17ರಿಂದ ಕಾಸರಗೋಡಿನ ಗಡಿನಾಡ ಕನ್ನಡಿಗ ಮಕ್ಕಳಿಗೆ ಕನ್ನಡ ಭಾಷೆಗಳಲ್ಲಿ ಆನ್‌ಲೈನ್ ಕ್ಲಾಸ್ ಆರಂಭಿಸಲಾಗಿದೆ. ಸಾಕ್ಷರ ರಾಜ್ಯ ಕೇರಳ ಕೊರೋನಾದಂತಹ ಪ್ರತಿಕೂಲ ಸನ್ನಿವೇಶದಲ್ಲೂ ಶೈಕ್ಷಣಿಕ ಹಿನ್ನಡೆಗೆ ಅವಕಾಶ ನೀಡದೆ ಹೊಸ ಮೈಲುಗಲ್ಲು ಸ್ಥಾಪಿಸಲು ಹೊರಟಿದೆ.
ಯೂಟ್ಯೂಬ್, ಕೇಬಲ್ ಚಾನೆಲ್‌ನಲ್ಲೇ ಪಾಠ:
ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿ 194 ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿದ್ದು, ಕಳೆದ ಸಾಲಿನಲ್ಲಿ ಸುಮಾರು 45 ಸಾವಿರದಷ್ಟುಕನ್ನಡ ಮಾಧ್ಯಮ ವಿದ್ಯಾರ್ಥಿಗಳಿದ್ದರು. ಪ್ರಸಕ್ತ ಸಾಲಿನಿಂದ 1-10ನೇ ತರಗತಿವರೆಗಿನ ಎಲ್ಲ ವಿದ್ಯಾರ್ಥಿಗಳು ಈಗ ಆನ್‌ಲೈನ್ ಕಲಿಕೆಗೆ ತೆರೆದುಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಕೇರಳ ಸರ್ಕಾರದ ಕೈಟ್ ಯೂಟ್ಯೂಬ್ ಕಾಸರಗೋಡು ಹೆಸರಿನ ಚಾನೆಲ್ ಹಾಗೂ ಕೇರಳ ವಿಷನ್ ಕಾಸರಗೋಡು ಕೇಬಲ್‌ನೆಟ್‌ವರ್ಕ್ನ 46ನೇ ಚಾನೆಲ್ ಮೂಲಕ ಪ್ರಸಾರ ಮಾಡುತ್ತಿದೆ.
SSLC ಪರೀಕ್ಷೆಗೆ ಮೊಬೈಲ್‌ನಲ್ಲಿ ಕೊಠಡಿ ಸಂಖ್ಯೆ
ಪ್ರತಿದಿನ ಬೆಳಗ್ಗೆ 11ರಿಂದ ಸಂಜೆ 3 ಗಂಟೆವರೆಗೆ ಒಟ್ಟು ಒಂಭತ್ತು ಪಿರಿಯಡ್‌ಗಳ ತಲಾ ಅರ್ಧ ಗಂಟೆಯ ಪಾಠ ಪ್ರಸಾರ ಮಾಡಲಾಗುತ್ತದೆ. ಮೊದಲು ಕೇಬಲ್ ನೆಟ್‌ವರ್ಕ್ನಲ್ಲಿ ಪ್ರಸಾರವಾದ ಬಳಿಕ ಅದನ್ನೇ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಕೇಬಲ್ ಅಥವಾ ಯೂಟ್ಯೂಬ್ ಲಿಂಕ್ ಬಳಸಿ ಪಾಠ ವೀಕ್ಷಿಸಬಹುದು. ವಿದ್ಯಾರ್ಥಿಗಳು ಪಾಠ ಕಲಿಯುತ್ತಿರುವುದನ್ನು ಆಗಾಗ ಖಾತರಿಪಡಿಸುವ ಹೊಣೆಗಾರಿಕೆಯೂ ಶಿಕ್ಷಣ ಇಲಾಖೆ ಮೇಲಿದೆ.
ದಕ್ಷಿಣ ಕನ್ನಡದಲ್ಲಿ 206 ಮಂದಿ ಕೊರೋನಾ ಗುಣಮುಖರು ಬಿಡುಗಡೆ
ಮೊದಲೇ ರೆಕಾರ್ಡ್ ಮಾಡಿದ ಪಾಠ ವೀಕ್ಷಿಸುತ್ತಾ ಸಂದೇಹಗಳಿದ್ದರೆ, ಅದನ್ನು ನೋಟ್ಸ್ ಮಾಡಿಕೊಳ್ಳಬೇಕು. ಬಳಿಕ ಶಾಲಾ ಶಿಕ್ಷಕರನ್ನು ಸಂಪರ್ಕಿಸಿ ಸಂದೇಹ ಪರಿಹರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಒಂದೊಂದು ತರಗತಿಗೆ ನಿರ್ದಿಷ್ಟಸಮಯ ನಿಗದಿಪಡಿಸಲಾಗಿದ್ದು, ಚಾನೆಲ್ ವೀಕ್ಷಿಸಲು ಅಸಾಧ್ಯವಾದರೆ ಯೂಟ್ಯೂಬ್ ಲಿಂಕ್‌ನಲ್ಲಿ ನೋಡಬಹುದು. ವೈಟ್‌ಬೋರ್ಡ್ ಹೆಸರಿನಲ್ಲಿ ವಿಶೇಷ ಮಕ್ಕಳಿಗೂ ಆನ್‌ಲೈನ್‌ನಲ್ಲಿ ಪಾಠ ಕಲಿಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಒಬ್ಬಳೇ ಬಾಲಕಿಗೆ 2 ದಿನ ತಿರುಗಾಡಿದ 70 ಜನ ಸಾಮರ್ಥ್ಯದ ಬೋಟ್!
ತರಗತಿಯಲ್ಲೇ ಪಾಠ ಮಾಡುವ ಸನ್ನಿವೇಶವನ್ನು ಅಧ್ಯಾಪಕರೇ ರೆಕಾರ್ಡ್ ಮಾಡಿಕೊಂಡು ಅದನ್ನು ಎಡಿಟ್ ಕೂಡ ಮಾಡಿದ್ದಾರೆ. ಸುಮಾರು ಶೇ.30ರಷ್ಟುಪ್ರಾಥಮಿಕ ಹಾಗೂ ಶೇ.40ರಷ್ಟುಹೈಸ್ಕೂಲ್ ಅಧ್ಯಾಪಕರು ಆನ್‌ಲೈನ್ ಪಾಠ ಸಿದ್ಧಪಡಿಸಿದ್ದಾರೆ. ಡಯೆಟ್‌ನ ಶಿಕ್ಷಕರು ಹಾಗೂ ಇತರೆ ಸಂಪನ್ಮೂಲ ವ್ಯಕ್ತಿಗಳು ಇದಕ್ಕೆ ಕೈಜೋಡಿಸಿದ್ದಾರೆ. ಇನ್ನು ಪಿಯುಸಿ ಹಾಗೂ ಪದವಿ ತರಗತಿಗೂ ಇದೇ ಮಾದರಿಯ ಆನ್‌ಲೈನ್ ಪಾಠ ಸಿದ್ಧವಾಗಲಿದೆ.
ಸ್ಥಳಕ್ಕೆ ತೆರಳಿ ಸ್ಕ್ರೀನ್ ಮೂಲಕ ಪಾಠ
ಕೇಬಲ್ ಚಾನೆಲ್, ಯೂಟ್ಯೂಬ್, ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇದ್ದರೆ, ಅಥವಾ ಆನ್‌ಲೈನ್ ತಾಂತ್ರಿಕತೆ ಹೊಂದಲು ಅಸಾಧ್ಯವಾಗಿರುವಲ್ಲಿಗೆ ತೆರಳಿ ಸ್ಕ್ರೀನ್ ಮೂಲಕ ಆನ್‌ಲೈನ್ ಪಾಠ ಪ್ರದರ್ಶಿಸುವಂತೆ ರಾಜ್ಯ ಸರ್ಕಾರ ತಾಕೀತು ಮಾಡಿದೆ. ಅಲ್ಲದೆ ಅಂತಹವರ ಪಟ್ಟಿಸಿದ್ಧಪಡಿಸಿ ಅವರಿಗೆ ಚಾನೆಲ್ ಅಥವಾ ಮೊಬೈಲ್ ಸಂಪರ್ಕ ಕೊಡಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ.
ದೇವರ ಸ್ವಂತ ನಾಡಿನಲ್ಲೊಂದು ಸ್ಮಾರ್ಟ್ ಐಡಿಯಾ..! ಕೇರಳದಲ್ಲಿ ಹೀಗಿದೆ ಕ್ವಾರೆಂಟೈನ್
ತಪ್ಪಿದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವ ಎಚ್ಚರಿಕೆಯನ್ನೂ ನೀಡಲಾಗಿದೆ. ಹೀಗಾಗಿ ತೀರಾ ಹಿಂದುಳಿದ ಪ್ರದೇಶಗಳಲ್ಲಿ ಸಣ್ಣ ಗ್ರಂಥಾಲಯ, ಅಂಗನಾಡಿ ಅಥವಾ ನಿರಂತರ ಕಲಿಕಾ ಕೇಂದ್ರಗಳನ್ನು ಇದಕ್ಕಾಗಿ ಗುರುತಿಸುವ ಕೆಲಸ ನಡೆಯುತ್ತಿದೆ. ಇಲ್ಲಿ ಕೋವಿಡ್ ಮಾರ್ಗಸೂಚಿಯಂತೆ ಆನ್‌ಲೈನ್ ಪಾಠವನ್ನು ಪ್ರದರ್ಶಿಸಲಾಗುತ್ತದೆ.
ರಾತ್ರೋ ರಾತ್ರಿ ಬಂತು ಫೋನ್: ಬೆಳ್ತಂಗಡಿಯ ಸಮಾನ್ಯ ಕಾರ್ಯಕರ್ತ ಎಂಲ್ಸಿ ಅಭ್ಯರ್ಥಿ
ಕೇರಳ ಸರ್ಕಾರದ ಶಿಕ್ಷಣದ ಪ್ರಮುಖ ಚಾನೆಲ್ ಕೈಟ್ ವಿಕ್ಟರ್ಸ್‌ನಲ್ಲಿ ಮಲಯಾಳಂ ಜೊತೆಗೆ ಕನ್ನಡ ಮಾಧ್ಯಮ ಪಾಠದ ಪ್ರಸಾರವೂ ಆಗಬೇಕು. ಇದರಿಂದ ಹೆಚ್ಚಿನವಿದ್ಯಾರ್ಥಿಗಳಿಗೆ ಪಾಠ ತಲುಪಲು ಸಾಧ್ಯವಾಗಲಿದೆ. ಈ ಬಗ್ಗೆ ಕೇರಳ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಕನ್ನಡ ಪೋಷಕ ಡಾ.ನರೇಶ್ ಮುಳ್ಳೇರಿಯಾ ತಿಳಿಸಿದ್ದಾರೆ.
-ಆತ್ಮಭೂಷಣ್