ಮಂಗಳೂರು(ಡಿ.20): ಕೆ. ಆರ್. ಪೇಟೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಕೆ. ಸಿ. ನಾರಾಯಣ ಗೌಡ ಅವರು ಚಾಮುಂಡಿ ಬೆಟ್ಟದಲ್ಲಿ 1001 ಮೆಟ್ಟಿಲುಗಳನ್ನು ಹತ್ತುವ ಮೂಲಕ ಗೆಲುವಿನ ಹರಕೆ ತೀರಿಸಿದ್ದಾರೆ.

ಚಾಮುಂಡಿ ಬೆಟ್ಟಕ್ಕೆ ನೂತನ ಶಾಸಕ ನಾರಾಯಣ ಗೌಡ ಭೇಟಿ ನೀಡಿ ಹರಕೆ ತೀರಿಸಿದ್ದಾರೆ. 1001 ಮೆಟ್ಟಿಲು ಹತ್ತುವ ಮೂಲಕ ಹರಕೆ ತೀರಿಸಿದ ನಾರಾಯಣ ಗೌ ಪೂಜೆ ಸಲ್ಲಿಸಿದ್ದಾರೆ. ಕೆ.ಆರ್.ಪೇಟೆ ಉಪಚುನಾವಣೆ ಗೆಲುವಿಗಾಗಿ ಹರಕೆ ಕಟ್ಟಿಕೊಂಡಿದ್ದ ನಾರಾಯಣಗೌಡ ಬೆಂಬಲಿಗರೊಂದಿಗೆ ಬೆಟ್ಟದ ಪಾದಕ್ಕೆ ಆಗಮಿಸಿದ್ದಾರೆ.

ಮಂಗಳೂರು ಹಿಂಸಾಚಾರ ಪೊಲೀಸರ ಪ್ಲಾನ್‌ ಎಂದ ಎಂಎಲ್‌ಸಿ

ಪಾದದ ಬಳಿ ಪೂಜೆ ಸಲ್ಲಿಸಿದ ನಂತರ ನಾರಾಯಣಗೌಡ ಅವರು  ಮೆಟ್ಟಿಲು ಹತ್ತಿದ್ದಾರೆ. ನೂತನ ಶಾಸಕ ನಾರಾಯಣ ಗೌಡ ಅವರಿಗೆ ದೇಗುಲ ಸಿಬ್ಬಂದಿ ಮೈಸೂರು ಪೇಟ ತೊಡಿಸಿ ಸನ್ಮಾನಿಸಿದ್ದಾರೆ.

ಮಂಡ್ಯ: ನಿಷೇಧಾಜ್ಞೆ ನಡುವೆ ಪ್ರತಿಭಟನೆಗೆ ಮುಂದಾದವರ ಬಂಧನ