ಮಂಡ್ಯ(ಡಿ.20): ದೇಶದಲ್ಲಿ ಜಾರಿಯಾಗಿರುವ ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ಪೌರತ್ವ ತಿದ್ದುಪಡಿ ಕಾನೂನು 2019 ರದ್ದತಿಗೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾದ ಭಾರತ ಕಮ್ಯೂನಿಸ್ವ್‌ ಪಕ್ಷ (ಸಿಪಿಐಎಂ) ಜಿಲ್ಲಾ ಸಮಿತಿ ಸೇರಿದಂತೆ ವಿವಿಧ ಸಂಘಟನೆ ಮುಖಂಡರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಸೇರಿದ ಮುಖಂಡರು ಬೆಂಗಳೂರು-ಮೈಸೂರು ಹೆದ್ದಾರಿ ತಡೆ ನಡೆಸಿ ಪ್ರತಿಭಟನೆಗೆ ಮುಂದಾದ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೃತಜ್ಞತಾ ಸಭೆಯಲ್ಲಿ ಸೋಲಿನ ಕಾರಣ ಬಿಚ್ಚಿಟ್ಟ ವಿಶ್ವನಾಥ್‌..!

ಜಿಲ್ಲಾದ್ಯಂತ ಸೆಕ್ಷನ್‌ 144 ಜಾರಿಯಲ್ಲಿರುವುದರಿಂದ ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಚರ್ಚೆ, ಸಭೆ, ಪ್ರತಿಭಟನೆ ನಡೆಸಬಾರದೆಂದು ತಿಳಿವಳಿಕೆ ನೀಡಿದ್ದರೂ ನಿಷೇಧಾಜ್ಞೆ ಜಾರಿ ಆದೇಶವನ್ನು ಉಲ್ಲಂಘಿಸಿ ಪ್ರತಿಭಟನೆಗೆ ಮುಂದಾದ ಸಂಘಟನೆ ಮುಖಂಡರಾದ ಎಂ.ಪುಟ್ಟಮಾದು, ಟಿ.ಯಶವಂತ್‌, ಸಿ.ಕುಮಾರಿ, ಟಿ.ಎಲ್‌.ಕೃಷ್ಣೇಗೌಡ, ಜನವಾದಿಯ ದೇವಿ, ಜಿ.ರಾಮಕೃಷ್ಣ, ಶೋಭಾ, ಸುರೇಂದ್ರ, ಆನಂದ್‌, ಚಂದ್ರಮ್ಮ, ಲತಾ, ಮಹದೇವಮ್ಮ, ಬಸವರಾಜ್‌, ಜನಶಕ್ತಿಯ ಪೂರ್ಣಿಮಾ , ಶಂಕರ್‌ ಸೇರಿದಂತೆ 20ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ.

ಮೈಸೂರಿನ ಯುವಕ ಮಲೇಷ್ಯಾದಲ್ಲಿ ನೀರು ಪಾಲು

ಬಂಧನಕ್ಕೊಳಗಾದ ಪ್ರತಿಭಟನಕಾರರು ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಧಿಕ್ಕಾರ ಕೂಗಿದರು. ಪೌರತ್ವ ತಿದ್ದುಪಡಿ ಕಾನೂನು ದೇಶದ ಸಂವಿಧಾನದ ಮೂಲಭೂತ ರಚನೆಯನ್ನು ಉಲ್ಲಂಘಿಸುತ್ತದೆ. ದೇಶದ ಸಾಮಾಜಿಕ ಸಾಮರಸ್ಯಕ್ಕೂ ಗಂಭೀರವಾದ ಅಪಾಯ ಒಡ್ಡುತ್ತದೆ ಎಂದು ದೂರಿದ್ದಾರೆ.

ನೋಟು ರದ್ದತಿ ಮಾಡಿದ ರೀತಿಯಲ್ಲೇ ಅಕ್ರಮ ನಿವಾಸಿಗಳನ್ನು ಪತ್ತೆ ಮಾಡಲು ಇಡೀ ದೇಶದ ಪೌರತ್ವವನ್ನೆ ಎನ್‌ಆರ್‌ಸಿ ಮತ್ತು ಸಿಎಎ ಕಾನೂನುಗಳ ಮೂಲಕ ಸೆದೆಬಡಿಯಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಕರ್ಫ್ಯೂ ವಿಸ್ತರಣೆ

ಎನ್‌ಆರ್‌ಸಿ ಹಾಗೂ ಸಿಎಎಗಳನ್ನು ಹಿಂದೂ -ಮುಸ್ಲಿಂ ಸಮುದಾಯದ ಪ್ರಶ್ನೆಯೆಂಬಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಿಂಬಿಸುತ್ತಿದೆ. ಈ ಮೂಲಕ ನಮ್ಮ ಸಂವಿಧಾನದ ಧರ್ಮ ನಿರಪೇಕ್ಷ ಹಂದರವನ್ನು ನುಚ್ಚುನೂರು ಮಾಡುವ ದುರುದ್ದೇಶವನ್ನು ಜಗಜ್ಜಾಹೀರುಗೊಳಿಸಿದೆ. ಸ್ವತಃ ಪ್ರಧಾನ ಮಂತ್ರಿಯವರೇ, ಅವರ ಹುದ್ದೆಯ ಘನತೆಯನ್ನು ಮರೆತು, ಪ್ರತಿಭಟನಾನಿರತರನ್ನು ಬಟ್ಟೆಮೇಲೆ ಗುರುತಿಸಬಹುದು ಎಂದು ಬಾಲಿಶ ಹೇಳಿಕೆ ನೀಡಿರುವುದನ್ನು ಖಂಡಿಸಿದ್ದಾರೆ.

ಭಾರತೀಯರನ್ನು ಧರ್ಮದ ಆಧಾರದ ಮೇಲೆ ವಿಭಜಿಸುವುದು ಆತಂಕಕಾರಿಯಾಗಿದೆ. ಪೌರತ್ವ ತಿದ್ದುಪಡಿ ಕಾನೂನು ನಮ್ಮ ಸಂವಿಧಾನದ ಮೂಲಭೂತ ರಚನೆಯನ್ನು ಉಲ್ಲಂಘಿಘಿಘಿಘಿಸುತ್ತದೆ. ಧರ್ಮದ ಆಧಾರದಲ್ಲಿ, ದೇಶಗಳ ಆಧಾರದಲ್ಲಿ ತಾರತಮ್ಯ ಎಸಗುವುದು ಹಾಗೂ ನಿರ್ದಿಷ್ಟಬಗೆಯ ದೌರ್ಜನ್ಯಕ್ಕೆ ಒಳಗಾಗಿದ್ದರೆ ಮಾತ್ರ ಪೌರತ್ವ ನೀಡಲಾಗುವುದು ಎಂದು ಘೋಷಿಸುವ ಈ ಕಾನೂನು, ಸದುದ್ದೇಶ ಹಾಗೂ ಮಾನವೀಯತೆಯಿಂದ ಕೂಡಿರದೇ ಭಾರತ ದೇಶದ ಹೆಗ್ಗುರುತಾದ ವಿವಿಧತೆಯಲ್ಲಿ ಏಕತೆಯನ್ನು, ಕೋಮು ಸಾಮರಸ್ಯವನ್ನು ಹಾಳುಗೆಡವಿ ತನ್ನ ಸಂಕುಚಿತ ರಾಜಕೀಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಹೀನ ಪ್ರಯತ್ನವಾಗಿದೆ ಎಂದು ಕಿಡಿಕಾರಿದ್ದಾರೆ.