ಬೆಂಗಳೂರಲ್ಲಿ ನಾಳೆ ಕಾವೇರಿ ನೀರು ಪೂರೈಕೆ ಸ್ಥಗಿತ: ನಿಮ್ಮ ಏರಿಯಾ ಇದೆಯೇ ಪರಿಶೀಲಿಸಿ
ರಜಾದಿನವಾದ ಭಾನುವಾರ ಬೆಂಗಳೂರಿನ ಬಹುತೇಕ ಕಡೆ ನೀರು ಸ್ಥಗಿತ
ಕಾವೇರಿ ಕೊಳವೆ ದುರಸ್ತಿ ಹಿನ್ನೆಲೆಯಲ್ಲಿ ನೀರು ಪೂರೈಕೆ ವ್ಯತ್ಯಯ
ನೀರನ್ನು ಶೇಖರಿಸಿ ಇಟ್ಟುಕೊಂಡು ಬಳಸುವಂತೆ ಮನವಿ
ಬೆಂಗಳೂರು (ಫೆ.23): ಬೆಂಗಳೂರು ಜಲಮಂಡಳಿಯು ಕಾವೇರಿ 1 ಹಂತದಡಿಯಲ್ಲಿ ಬರುವ ದಕ್ಷಿಣ ಪೂರ್ವ-1 ಉಪವಿಭಾಗದ ವ್ಯಾಪ್ತಿಯಲ್ಲಿ ಮೆಟ್ರೋ ಪಿಂಕ್ ಲೈನ್ ಕಾಮಗಾರಿಯು (ಕೋನೇನ ಅಗ್ರಹಾರದಿಂದ ನಾಗವಾರದವರೆಗೆ) ಪ್ರಗತಿಯಲ್ಲಿದೆ. ಈ ಮಾರ್ಗ ಹಾದು ಹೋಗಿರುವ ನೀರಿನ ಕೊಳವೆಗಳನ್ನು ಉನ್ನತೀಕರಿಸಿ ಸ್ಥಳಾಂತರಿಸುವ ಹಾಗೂ ಹೊಸದಾಗಿ ನಿರ್ಮಿಸಿರುವ ಕೊಳವೆ ಮಾರ್ಗಗಳನ್ನು ನೀರು ಸರಬರಾಜು ಮಾರ್ಗಗಳ ಜಾಲಕ್ಕೆ ಮರುಜೋಡಣೆ ಮಾಡುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಆದ್ದರಿಂದ ಫೆ.26ರ (ಭಾನುವಾರ) ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
Bengaluru: ಮಕ್ಕಳನ್ನು ಕದ್ದು ನಿದ್ದೆ ಮಾತ್ರೆ ನೀಡಿ ಭಿಕ್ಷಾಟನೆಗೆ ಬಳಕೆ: ಬಾಡಿಗೆ ಆಧಾರದಲ್ಲಿ ಮಹಿಳೆಯರ ಭಿಕ್ಷೆ
ಎಲ್ಲೆಲ್ಲಿ ನೀರು ಪೂರೈಕೆ ಇರುವುದಿಲ್ಲ:
ನೇತಾಜಿ ನಗರ, ನಾಗಮ್ಮ ನಗರ, ಕೇಶವ ನಗರ, ಕೆ.ಪಿ.ಅಗ್ರಹಾರ, ರಾಘವೇಂದ್ರ ಕಾಲೋನಿ, ಟಿಪ್ಪುನಗರ, ಆನಂದಪುರ, ಚಾಮರಾಪೇಟೆ, ರಾಮಚಂದ್ರ ಅಗ್ರಹಾರ, ಆದರ್ಶನಗರ, ಕನ್ನೀರ್ ಕಾಲೋನಿ, ನಂಜಾಂಬ ಅಗ್ರಹಾರ, ವಾಲ್ಮೀಕಿ ನಗರ, ವಿ.ಎಸ್ ಗಾರ್ಡನ್, ಹರಿಕುಂಟೆ, ಪಾದರಾಯನಪುರ ಪ್ಲವರ್ ಗಾರ್ಡನ್, ಬನ್‌ಗೆ ಕಾಲೋನಿ, ಆಂಜನಪ್ಪ ಗಾರ್ಡನ್, ಬಿನ್ನಿ ಲೇಔಟ್. ನ್ಯೂ ಬಿನ್ನಿ ಲೇಔಟ್, ವಿದ್ಯಾಪೀಠ, ಶ್ರೀನಿವಾಸ ನಗರ, ಬ್ಯಾಂಕ್ ಕಾಲೋನಿ, ಐಟಿಐ ಲೇಔಟ್, ಗುರುರಾಜ್ ಲೇಔಟ್, ವಿವೇಕಾನಂದ ನಗರ, ಕಾದಿವಿಷನ್ ಲೇಔಟ್, ಕತ್ರಿಗುಪ್ಪೆ, ತ್ಯಾಗರಾಜನಗರ, 'ಬಸವನಗುಡಿ, ಶಾಸ್ತ್ರೀನಗರ, ಎನ್.ಆರ್.ಕಾಲೋನಿ, ಬೈರಪ್ಪ ಬ್ಲಾಕ್, ಮೌಂಟ್ ಜಾಯ್ ಎಕ್ಸ್ ಟೆನ್‌ಷನ್, ಅಶೋಕ್ ನಗರ, ಬನಂಶಂಕರಿ ಒಂದನೇ ಹಂತ, ಶ್ರೀನಗರ, ಬೃಂದಾವನನಗರ, ಸುಂಕೇನಹಳ್ಳಿ, ಕುಮಾರಸ್ವಾಮಿ ಲೇಔಟ್ 1ನೇ ಹಂತ ಮತ್ತು 2 ನೇ ಹಂತ, ಇಸ್ರೋ ಲೇಔಟ್, ಸಮೃದ್ಧಿ ಲೇಔಟ್, ಲಿಯಾಸ್ ನಗರ, ರಾಜ್ಯೋತ್ಸವ ನಗರ, ವಿಠಲ್ ನಗರ, ಶಾಂತಲಾ ನಗರ, ಶಾಂತಿನಗರ, ವಿನಾಯಕನಗರ, ಆನೆಪಾಳ್ಯ, ಎಲ್.ಆರ್.ನಗರ, ಅಂಬೇಡ್ಕರ್ ನಗರ, ನೀಲಸಂದ್ರ, ಆಸ್ಟಿನ್ ಟೌನ್, ಈಜೀಪುರ, ವಿವೇಕ್ ನಗರ, ಅಶೋಕ್ ನಗರ, ರಿಚ್‌ಮಂಡ್ ಟೌನ್ ಪ್ರದೇಶಗಳಲ್ಲಿ ನೀರು ಸರಬರಾಜು ಆಗುವುದಿಲ್ಲ.
ಪ್ರತಿಷ್ಠಿತ ವಾಣಿಜ್ಯ ಪ್ರದೇಶಗಳಲ್ಲಿ ನೀರಿಲ್ಲ:
ಉಳಿದಂತೆ ಎಂಜಿ ರೋಡ್, ಬ್ರಿಗೇಡ್ ರಸ್ತೆ, ಜೆ.ಕೆ ಪುರಂ, ಎಂ.ವಿ ಗಾರ್ಡನ್, ವಿಕ್ಟೋರಿಯಾ ಲೇಔಟ್, ಮಾಯಾ ಬಜಾರ್, ದೊಮ್ಮಲೂರು, ದೊಮ್ಮಲೂರು ವಿಲೇಜ್, ದೊಮ್ಮಲೂರು ಲೇಔಟ್, ಕಮಾಂಡ್ ಆಸ್ಪತ್ರೆ, ದೊಮ್ಮಲೂರು 2ನೇ ಹಂತ, ಎಚ್‌ಎಎಲ್ 2ನೇ ಹಂತ ಅಮರಜ್ಯೋತಿ ಲೇಔಟ್, ಕಾರ್ಪೋರೇಷನ್ ಕ್ವಾಟ್ರಸ್, ಕೊಡಿಹಳ್ಳಿ, ಹನುಮಂತಪ್ಪ ಲೇಔಟ್, ಗಂಗಾಧರ್ ಚೆಟ್ರಿ ರಸ್ತೆ, ಬಜಾರ್ ಸ್ಟ್ರೀಟ್, ಹಲಸೂರು, ಮರ್ಫಿ ಟೌನ್, ಜೋಗು ಪಾಳ್ಯ, ಕೇಂಬ್ರಿಡ್ಜ್ ಲೇಕೌಟ್, ಗೌತಮಪುರ, ಧೀನಬಂಧುನಗರ, ರಾಜೇಂದ್ರ ನಗರ, ರಾಜೇಂದ್ರ ನಗರ ಸಮ್, ವೆಂಕಟಸ್ವಾಮಿ ರೆಡ್ಡಿ ಲೇಔಟ್, ಮಲ್ಲಪ್ಪ ರೆಡ್ಡಿ ಲೇಔಟ್, ನಂಜಪ್ಪ ರೆಡ್ಡಿ ಲೇಔಟ್, ಕೆ.ಆರ್. ನಂಜಪ್ಪ ಲೇಔಟ್, ಎನ್.ಆರ್.ಡಿ.ಐ, ಕ್ಯಾಂಪಸ್, ಆಡುಗೋಡಿ, ಕಾವೇರಿ ಸಂಕಿರ್ಣ, ಪೋಲಿಸ್ ಕ್ವಾಟರ್ಸ್, ನೇತ್ರಾವತಿ 1 ರಿಂದ 10 ಬ್ಲಾಕ್‌ಗಳು, ನಂದಿ ಸಂಕೀರ್ಣ1 ರಿಂದ 32 ಬ್ಲಾಕ್ಗಳು ಮತ್ತು ಟಿಪ್ಪು ಬ್ಲಾಕ್‌ಗಳು, ಕೋರಮಂಗಲ 6ನೇ ಮತ್ತು 7ನೇ ಬ್ಲಾಕ್, ಕೆ.ಆರ್.ಗಾರ್ಡನ್, ಕೆ.ಹೆಚ್.ಬಿ ಕಾಲೋನಿ, ಜಾನ್ ನಗರ, ಕೋರಮಂಗಲ ವಿಲೇಜ್, ಕೋರಮಂಗಲ 8ನೇ ಬ್ಲಾಕ್, ಪಾಯಲ್ ಎನ್.ಜಿ.ವಿ, ಜಯನಗರ 3ನೇ ಬ್ಲಾಕ್, 4ನೇ ಬ್ಲಾಕ್ ಮತ್ತು 4ನೇ 'ಟಿ' ಬ್ಲಾಕ್, ತಿಲಕ್ ಎಸ್.ಆರ್ ನಗರ, ಚಂದ್ರಪ್ಪ ನಗರ, ಈರಮ್ಮ ಲೇಔಟ್ ಮತ್ತು ಆಡುಗೋಡಿ, ವೆಂಕಟೇಶ್ವರ ಲೇಔಟ್, ಎಸ್.ಜಿ.ಪಾಳ್ಯ, ಭುವನಪ್ಪ ಲೇಔಟ್, ಕಾವೇರಿ ಲೇಔಟ್, ಜೋಗಿ ಕಾಲೋನಿ, ಸೆಂಟ್ ವುಡ್ ಅಪಾರ್ಟ್ ಮೆಂಟ್, ಚಿಕ್ಕ ಆಡುಗೋಡಿ, ಬೃಂದಾವನ ನಗರ.ಸೆಂಟ್ ಜಾನ್ಸ್ ಕ್ವಾಟರ್ಸ್, ಮಾರುತಿ ನಗರ, ವಿ.ಪಿ ರೋಡ್, ಎ.ಕೆ ಕಾಲೋನಿ, ಭೋವಿ ಕಾಲೋನಿ, ಕಲ್ಲಹಳ್ಳಿ, ಕದಿರಯ್ಯನ ಪಾಳ್ಯ, ಲಕ್ಷ್ಮೀಪುರ, ಜಯರಾಜನಗರ, ಜೀವನ್ ಭೀಮಾನಗರ, ಜೋಗುಪಾಳ್ಯ ಹಾಗೂ ಸುತ್ತಮುತ್ತಲಿನ ಪುದೇಶಗಳಲ್ಲಿ ನೀರು ಸರಬರಾಜು ಆಗುವುದಿಲ್ಲ.
Bengaluru: 9000 ಕೋಟಿ ಗಾತ್ರದ ಬಿಬಿಎಂಪಿ ಬಜೆಟ್: ಆಸ್ತಿ ತೆರಿಗೆದಾರರಿಗೆ ಸಿಹಿ ಸುದ್ದಿ
ನೀರು ಸಂಗ್ರಹಿಸಿಟ್ಟು ಉಪಯೋಗಿಸಿ: ಭಾನುವಾರ ರಜಾ ದಿನದ ವೇಳೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಸಾರ್ವಜನಿಕರು ಒಂದು ದಿನ ಮೊದಲೇ ನೀರನ್ನು ಸಂಗ್ರಹಿಸಿ ಇಟ್ಟುಕೊಂಡು ಮಿತವಾಗಿ ನೀರು ಬಳಸುವಂತೆ ಬಿಡಬ್ಲ್ಯೂಎಸ್‌ಎಸ್‌ಬಿ ಮನವಿ ಮಾಡಿದೆ. ಜೊತೆಗೆ, ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸಲು ಕೋರಿದೆ. ಯಾವುದೇ ತುರ್ತು ಸಂದರ್ಭಗಳಲ್ಲಿ ನೀರಿನ ಸಮಸ್ಯೆಯ ಬಗ್ಗೆ ಜಲಮಂಡಳಿ ಸಹಾಯವಾಣಿಗೆ ಸಂಪರ್ಕಿಸುವಂತೆ ಸೂಚಿಸಿದೆ.