Bengaluru: ಮಕ್ಕಳನ್ನು ಕದ್ದು ನಿದ್ದೆ ಮಾತ್ರೆ ನೀಡಿ ಭಿಕ್ಷಾಟನೆಗೆ ಬಳಕೆ: ಬಾಡಿಗೆ ಆಧಾರದಲ್ಲಿ ಮಹಿಳೆಯರ ಭಿಕ್ಷೆ

ಬೆಂಗಳೂರಿನಲ್ಲಿ ಮತ್ತೊಂದು ಕರಾಳ ದಂಧೆಯ ಮುಖ ಅನಾವರಣ
ಸಿಸಿಬಿ ಪೊಲೀಸರಿಂದ 55 ಭಿಕ್ಷುಕರ ರಕ್ಷಣೆ 
ಮಕ್ಕಳನ್ನು ಕದ್ದು ಮತ್ತು ಬರುವ ಔಷಧ ನೀಡಿ ಭಿಕ್ಷಾಟನೆ ದಂಧೆಗೆ ಬಳಕೆ

Bengaluru Steal children use them for begging women begging on basis of rent sat

ಬೆಂಗಳೂರು (ಫೆ.23): ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ವಿವಿಧ ರಸ್ತೆಗಳು, ಬೀದಿಗಳು, ಪ್ರಮುಖ ವೃತ್ತಗಳು ಹಾಗೂ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಚಿಕ್ಕ ಮಕ್ಕಳ ಕಳ್ಳ ಸಾಗಾಣಿಕೆ ಹಾಗೂ ದಿನಗೂಲಿ ಆಧಾರದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ 55ಕ್ಕೂ ಅಧಿಕ ಭಿಕ್ಷುಕರನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಮಹಿಳಾ ಸಂರಕ್ಷಣೆ ದಳದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಳೆದ ಹಲವು ದಿನಗಳಿಂದ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಪೊಲೀಸರು ಬೆಂಗಳೂರಿನ ವಿವಿಧೆಡೆ ಕಾರ್ಯಾಚರಣೆ ನಡೆಸಿ ಭಿಕ್ಷಾಟನೆಯಲ್ಲಿ ತೊಡಗಿದ್ದವರ ರಕ್ಷಣಾ ಕಾರ್ಯ ಮಾಡಿದ್ದಾರೆ. ಒಟ್ಟು 14 ತಂಡಗಳನ್ನ ರಚಿಸಿ ಭಿಕ್ಷಾಟನೆ ಮಾಡುವವರನ್ನು ರಕ್ಷಣಾ ಕಾರ್ಯ ಮಾಡಲಾಗಿದೆ. ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿದ್ದ ಸಿಸಿಬಿ ಸಿಬ್ಬಂದಿ 55 ಮಂದಿಯನ್ನು ರಕ್ಷಣೆ ಮಾಡಿ ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಈ ಪೈಕಿ 3 ಹುಡುಗರು, 5 ಹುಡುಗಿಯರು, ತಾಯಿ ಮತ್ತು ಮಕ್ಕಳು, 18 ಹೆಂಗಸರು, 5 ಗಂಡಸರು 7 ಸೇರಿ 55 ಮಂದಿ ಭಿಕ್ಷುಕರನ್ನು ರಕ್ಷಿಸಲಾಗಿದೆ. ರಕ್ಷಣೆ ಮಾಡಲ್ಪಟ್ಟ ಎಲ್ಲರನ್ನೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಪುನರ್ವಸತಿ ಕಲ್ಪಿಸಲಾಗಿದೆ.

Haveri: ಮದುವೆ ಸಾಲ ತೀರಿಸಲಾಗದೇ ತಂದೆ- ತಾಯಿ ನೇಣಿಗೆ ಶರಣು: ಮನನೊಂದು ಮದುವೆಯಾದ ಮಗಳೂ ಆತ್ಮಹತ್ಯೆ

ರಕ್ಷಣೆ ವೇಳೆ ಸ್ಪೋಟಕ ಮಾಹಿತಿ ಲಭ್ಯ: ಭಿಕ್ಷಾಟನೆಯನ್ನು ಮಾಡುತ್ತಿದ್ದ ಕೆಲ ಮಹಿಳೆಯರು, ತಮ್ಮ ಭಿಕ್ಷಾಟನೆ ಕಾರ್ಯಕ್ಕದಾಗಿ ಕಳ್ಳತನ ಮಾಡಿಕೊಂಡು ಬಂದಿದ್ದಾರೆ. ಬಹುತೇಕ ಮಕ್ಕಳು ಕಳ್ಳ ಸಾಗಾಣಿಕ ಮಾಡಿ ತಂದಿರುವ ಮಕ್ಕಳು ಆಗಿದ್ದಾರೆ. ಭಿಕ್ಷಾಟನೆ ಮಾಡುವಾಗ ಚಿಕ್ಕ ಕಂದಮ್ಮಗಳಿಗೆ ನಿದ್ದೆ ಔಷಧಿಯನ್ನು ಬಲವಂತವಾಗಿ ನೀಡಲಾಗುತ್ತಿತ್ತು. ಮಕ್ಕಳು ಎಚ್ಚರವಿಲ್ಲದೇ ಜೋಳಿಗೆಯಲ್ಲಿ ಮಲಗಿದ ನಂತರ ಟ್ರಾಫಿಕ್‌ ಸಿಗ್ನಲ್‌ಗಳು ಹಾಗೂ ಇತರೆ ಜನಸಂದಣಿ ಪ್ರದೇಶದಲ್ಲಿ ಮಕ್ಕಳನ್ನು ಮಲಗಿಸಿ ಭಿಕ್ಷೆ ಬೇಡುತ್ತಿದ್ದರು.

ಬಾಡಿಗೆ ಆಧಾರದಲ್ಲಿ ಮಹಿಳೆಯರ ಬಳಕೆ:  ಕೂಲಿ ಕಾರ್ಮಿಕರು ಹಾಗೂ ಹೊರ ರಾಜ್ಯದಿಂದ ಬಂದು ಅಲ್ಪಸ್ವಲ್ಪ ಕನ್ನಡವನ್ನು ಕಲಿತ ಮಹಿಳೆಯರನ್ನು ಕೂಲಿ ಧಾರದಲ್ಲಿ, ಬಾಡಿಗೆ ಆಧಾರದಲ್ಲಿ ಪಡೆದುಕೊಂಡು ಅವರಿಗೆ ಮತ್ತು ಬರುವ ಔಷಧಿಯನ್ನು ನೀಡಿದ ಮಕ್ಕಳನ್ನು ಕೊಟ್ಟು ಭಿಕ್ಷಾಟನೆಗೆ ಕಳಿಸಲಾಗುತ್ತಿತ್ತು ಎಂಬ ಅನುಮಾನ ಬಂದಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. ಆದರೆ, ಮಕ್ಕಳು ಮತ್ತು ಅವರನ್ನು ಎತ್ತಿಕೊಂಡು ಭಿಕ್ಷಾಟನೆ ಮಾಡುತ್ತಿದ್ದ ತಾಯಂದಿರಿಗೂ ಹೋಲಿಕೆ ಇಲ್ಲದಿರುವುದು ಕಂಡುಬಂದಿದೆ. ಪ್ರಸ್ತುತ ಭಿಕ್ಷಾಟನೆಯಿಂದ ರಕ್ಷಣೆ ಮಾಡಿದವರನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಾಂತ್ವಾನ ಕೇಂದ್ರಕ್ಕೆ ಬಿಡಲಾಗಿದೆ.

ಭಿಕ್ಷೆ ಬೇಡುವುದು, ವಿದೇಶಿ ಸಾಲ ಕೇಳುವುದು ನಾಚಿಕೆಗೇಡಿನ ಸಂಗತಿ: ಪಾಕ್‌ ಪ್ರಧಾನಿ; ನಿಜವಾದ ಮೋದಿ ಭವಿಷ್ಯ..!

ಸಂಘಟನೆಗಳಿಂದ ಜಾಗೃತಿ ಅಭಿಯಾನ: ಈಗಾಗಲೇ ಬೆಂಗಳೂರಿನಲ್ಲಿ ನಮ್ಮ ಬೆಂಗಳೂರು ಫೌಂಡೇಶನ್‌, ವಿನೋದ್‌ ಕರ್ತವ್ಯ ಅವರ ನೇತೃತ್ವದ ಬೆಂಗಳೂರು ಹುಡುಗರು ತಂಡ ಸೇರಿ ಹಲವು ಸಂಘಟನೆಗಳು ಹಾಗೂ ಸಾರ್ವಜನಿಕರು ಭಿಕ್ಷಾಟನೆಯ ವಿರುದ್ಧ ಜಾಗೃತಿ ಮೂಡಿಸಿದ್ದರು. ಈ ವೇಳೆ ಮಕ್ಕಳ ಕಳ್ಳಸಾಗಾಣಿಕೆ, ಮತ್ತು ಬರುವ ಔಷಧ ನೀಡುವುದು, ಮಕ್ಕಳ ಕೈ- ಕಾಲುಗಳಿಗೆ ಗಾಯ ಮಾಡಿ ಅಳಿಸುವ ಭಿಕ್ಷಾಟನೆ ಪ್ರಕರಣಗಳನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೂ, ನಿರಂತರವಾಗಿ ಪೊಲೀಸರು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಭಿಕ್ಷಾಟನೆ ದಂಧೆ ಈಗಲೂ ಮುಂದುವರೆಯುತ್ತಿದೆ.

Latest Videos
Follow Us:
Download App:
  • android
  • ios