Asianet Suvarna News Asianet Suvarna News

‘ನೋಂದಣಿ ಕಾರ‍್ಯಕ್ಕೆ ಕಾವೇರಿ ತಂತ್ರಾಂಶ ಉಪಯುಕ್ತ’

:  ನೋಂದಣಿ ಕಾರ್ಯಕ್ಕೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಾವೇರಿ 2.0 ತಂತ್ರಾಶ ಜನರಿಗೆ ಉಪಯುಕ್ತವಾಗಿದೆ ಎಂದು ಜಿಲ್ಲಾ ನೋಂದಣಾಧಿಕಾರಿಗಳಾದ ಶಶಿಕಲಾ ಹೇಳಿದರು.

 Kaveri software useful for registration snr
Author
First Published Jun 8, 2023, 5:22 AM IST

  ತುರುವೇಕೆರೆ :  ನೋಂದಣಿ ಕಾರ್ಯಕ್ಕೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಾವೇರಿ 2.0 ತಂತ್ರಾಶ ಜನರಿಗೆ ಉಪಯುಕ್ತವಾಗಿದೆ ಎಂದು ಜಿಲ್ಲಾ ನೋಂದಣಾಧಿಕಾರಿಗಳಾದ ಶಶಿಕಲಾ ಹೇಳಿದರು.

ಪಟ್ಟಣದ ಸಹಾಯಕ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೂತನ ತಂತ್ರಾಂಶ ಕಾವೇರಿ 2.0 ಗೆ ಚಾಲನೆ ನೀಡಿ ಮಾತನಾಡಿದ ಅವರು ಈ ತಂತ್ರಾಂಶದಿಂದ ಜನರಿಗೆ ಸಮಯ ಉಳಿತಾಯವಾಗಲಿದೆ. ಸರ್ಕಾರಕ್ಕೆ ಎಷ್ಟುಮೊತ್ತ ಜಮಾ ಮಾಡಬೇಕೆಂಬ ಮಾಹಿತಿಯೂ ತಮ್ಮ ಬೆರಳ ತುದಿಯಲ್ಲೆ ದೊರೆಯಲಿದೆ. ಯಾವುದೇ ಮಧ್ಯವರ್ತಿಗಳ ಅಗತ್ಯವಿಲ್ಲದೇ ಸುಗಮವಾಗಿ ನಡೆಯುವ ಕ್ರಿಯೆಯಾಗಿದೆ ಎಂದು ಶಶಿಕಲಾ ಹೇಳಿದರು.

ನೋಂದಣಾಧಿಕಾರಿಗಳಿಂದ ರಚಿಸಲಾಗಿರುವ ಆ್ಯಪ್‌ನ್ನು ಡೌನ್‌ಲೋಡ್‌ ಮಾಡಿಕೊಂಡು ತಮ್ಮ ಎಲ್ಲಾ ನೋಂದಣಿ ಕಾರ್ಯವನ್ನು ಸಾರ್ವಜನಿಕರು ಸುಲಭವಾಗಿ ನೋಂದಣಿ ಕಾರ್ಯ ಮಾಡಿಕೊಳ್ಳಬಹುದಾಗಿದೆ. ಜನಸ್ನೇಹಿಯಾಗಿರುವ ಈ ತಂತ್ರಾಂಶ ಬಹಳ ಸುಲಭವಾಗಿದೆ. ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದೂ ಸಹ ಶಶಿಕಲಾ ಹೇಳಿದರು.

ಇದೇ ವೇಳೆ ಕಾವೇರಿ 2.0 ತಂತ್ರಾಂಶದಿಂದ ಹೊರತೆಗೆಯಲಾದ ನೋಂದಣಿ ದಾಖಲೆಯನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ತುರುವೇಕೆರೆಯ ಉಪನೋಂದಣಾಧಿಕಾರಿ ಎಸ್‌.ಎಂ.ಪ್ರಗತಿ, ಮಧುಗಿರಿಯ ಉಪ ನೋಂದಣಾಧಿಕಾರಿ ಸತೀಶ್‌, ತಿಪಟೂರಿನ ಉಪ ನೋಂದಣಾಧಿಕಾರಿ ಎಂ.ರಾಜಶೇಖರ್‌, ಧನಲಕ್ಷ್ಮೇ ಸೇರಿದಂತೆ ಪಟ್ಟಣದ ಹಲವಾರು ಪತ್ರ ಬರಹಗಾರರು ಇದ್ದರು.

ನೋಂದಣಿ ವೇಗ ಹೆಚ್ಚಿದೆ

 ಮೈಸೂರು :  ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕಾವೇರಿ 2.0 ತಂತ್ರಾಂಶದಿಂದಾಗಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿನ ಕೆಲಸಗಳು ವೇಗ ಪಡೆದುಕೊಂಡಿವೆ ಎಂದು ಮುದ್ರಾಂಕ ಆಯುಕ್ತರು ಮತ್ತು ನೋಂದಣಿಯ ಇನ್‌ಸ್ಪೆಕ್ಟರ್‌ ಜನರಲ್‌ ಡಾ.ಬಿ.ಆರ್‌. ಮಮತಾ ತಿಳಿಸಿದ್ದಾರೆ.

ಕ್ರೆಡೈ ಸಂಸ್ಥೆಯು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾವೇರಿ 2.0 ತಂತ್ರಾಂಶ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕರು ನೋಂದಣಿಗೆ ಮುಂಚಿನ ಪ್ರಕ್ರಿಯೆಯನ್ನು ಈ ತಂತ್ರಾಂಶ ಸುಲಭ ಮಾಡಿಕೊಡುತ್ತದೆ. ಮನೆಯಲ್ಲಿಯೇ ಕುಳಿತು ಎಲ್ಲಾ ದಾಖಲಾತಿ ನೀಡಬಹುದು. ನೋಂದಣಿ ಸಮಯದಲ್ಲಿ ಹತ್ತು ನಿಮಿಷವಷ್ಟೆಕಚೇರಿಗೆ ಬಂದು ಹೋಗಬೇಕಾಗುತ್ತದೆ. ಉಳಿದಂತೆ ಎಲ್ಲಾ ಪ್ರಕ್ರಿಯೆ ಸುಲಭವಾಗಿದೆ ಎಂದರು.

ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾವೇರಿ 2.0 ತಂತ್ರಾಂಶವು ಒಂದು ಕ್ರಾಂತಿಕಾರಕವಾಗಿದೆ. ಇದು ನೋಂದಣಿ ಪ್ರಕ್ರಿಯೆ ಸುಲಭ ಮಾಡಿರುವುದಲ್ಲದೆ ಮಧ್ಯವರ್ತಿಗಳ ಹಾವಳಿ ತಡೆಗಟ್ಟಿದೆ. ಖರೀದಿಸುವವರು ಅಗತ್ಯ ದಾಖಲಾತಿಯನ್ನು ತಾವು ಇರುವ ಸ್ಥಳದಲ್ಲಿಯೇ ಅಪ್‌ಲೋಡ್‌ ಮಾಡಿದರೆ, ಅದನ್ನು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಪರಿಶೀಲಿಸಿ ನೋಂದಣಿ ದಿನಾಂಕ, ಸಮಯ ತಿಳಿಸಲಾಗುತ್ತದೆ. ಅಗತ್ಯವಿದ್ದರೆ ತಮಗೆ ಬೇಕಾದ ದಿನವೇ ನೋಂದಣಿ ದಿನಾಂಕ ಪಡೆಯಬಹುದು. ಈಗ ಮುದ್ರಾಂಕ ಶುಲ್ಕಪಾವತಿಸಿದರೆ ನಿಮ್ಮ ನೋಂದಣಿ ಪ್ರಕ್ರಿಯೆ ಮಧ್ಯವರ್ತಿಗಳಿಲ್ಲದೆ ಸುಲಭದರಲ್ಲಿ ಮುಗಿಯುತ್ತದೆ ಎಂದರು.

Follow Us:
Download App:
  • android
  • ios