ಕತ್ನಳ್ಳಿ ಮಠದಿಂದ ಹೊರಬಿತ್ತು ಭಯಂಕರ ಭವಿಷ್ಯ: ನಡೆಯಲಿದೆ ರಾಜಕೀಯ ಕ್ಷೀಪ್ರಕ್ರಾಂತಿ, ಕಾಡಲಿದೆ ವಿಚಿತ್ರ ರೋಗ!
ಸದ್ದಿಲ್ಲದ್ದು, ಸುದ್ದಿಯಲ್ಲಿರುವುದು, ನಿದ್ದೆಯಲ್ಲಿರುವುದು, ಬುದ್ದಿಯಲ್ಲಿರುವುದು ಎಂಬ ವಿಚಾಗಳಿವೆ. ಇವುಗಳ ಜೊತೆಗೆ ಈ ಬಾರಿ ಮತ್ತೊಂದು ಎದ್ದು ನಿಲ್ಲುತ್ತೆ, ಇದು ಯಾರ ಜೊತೆ ಎದ್ದು ನಿಲ್ಲುತ್ತೆ ಎಂಬುದು ಮುಖ್ಯ ಎನ್ನುವ ಮೂಲಕ ಎಲೆಕ್ಷನ್ ಹೊತ್ತಲ್ಲಿ ರಾಜಕೀಯ ಸಂಚಲನ ಮೂಡಿಸಿದ್ದಾರೆ.
- ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಮಾ.25) : ನಾಡಿನ ಶ್ರೇಷ್ಠ ಸಂತ ಹಾಗೂ ಪವಾಡ ಪುರುಷರಲ್ಲಿ ಒಬ್ಬರಾದ ಶ್ರೀ ಗುರುಚಕ್ರವರ್ತಿ ಸದಾಶಿವ ಉತ್ಯನ ಕಾಲಜ್ಞಾನದ ಹೇಳಿಕೆ ಈ ಬಾರಿ ಮತ್ತೆ ಸಂಚಲನ ಮೂಡಿಸಿದೆ.
ಯುಗಾದಿ(Ugadi)ಯ ಸಮಯದಲ್ಲಿ ನಡೆಯುವ ಈ ಹೇಳಿಕೆ ರಾಜಕೀಯ, ಮಳೆ-ಬೆಳೆ, ರೋಗ ರುಜಿನಗಳು, ದೇಶಕ್ಕೆ ಕಾಡುವ ಭೀತಿ, ಆಗುವ ಉನ್ನತಿ ಇತ್ಯಾದಿ ಸೇರಿದಂತೆ ಎಲ್ಲಾ ಆಯಾಮಗಳನ್ನು ಹೊಂದಿರುತ್ತದೆ. ಇದೀಗ ವಿಧಾನಸಭೆ ಚುನಾವಣೆ(karnataka assembly election)ಬೇರೆ ಹತ್ತಿರ ಬರ್ತಿದ್ದು ಈ ಬಾರಿಯ ಶ್ರೀಗಳ ಹೇಳಿಕೆ ತೀವ್ರ ಕುತೂಹಲ ಕೆರಳಿಸಿದೆ.
ಮುಂದಿನ ಚುನಾವಣೆಯಲ್ಲಿ ಪಕ್ಷಾಂತರಿಗಳಿಗೆ ಅಧಿಕಾರ ಯೋಗವಿಲ್ಲ; ಕೊಡೇಕಲ್ ಕಾಲಜ್ಞಾನಿಯ ಭವಿಷ್ಯನುಡಿ ನಿಜವಾಗುತ್ತಾ?
ಶ್ರೀಗಳ ಭವಿಷ್ಯವಾಣಿಯಿಂದ ರಾಜಕೀಯ ವ್ಯಕ್ತಿಗಳು ಹಾಗೂ ಪಕ್ಷಗಳಿಗೆ ಚಿಂತೆಗೀಡು ಮಾಡಿದ್ರೆ ಜನಸಮಾನ್ಯರಿಗೆ ವಿಚಿತ್ರ ಎನ್ನಿಸಿದೆ. ಯಾಕಂದ್ರೆ ಈಗಿರುವ ನಾಲ್ಕು ವಿಚಾರಗಳನ್ನು ಹೊರತುಪಡಿಸಿ ಮತ್ತೊಂದು ವಿಚಾರ ಎದ್ದು ಬರಲಿದೆ ಎಂದಿದ್ದಾರೆ. ಈ ಮೂಲಕ ರಾಜಕೀಯದಲ್ಲಿ ಭಾರೀ ಚಿತ್ರವಿಚಿತ್ರಗಳು ನಡೆಯುವ ಸೂಚನೆಯನ್ನು ಸ್ವಾಮೀಜಿಯ ಕಾಲಜ್ಞಾನ(chronology)ದ ಹೇಳಿಕೆ ನೀಡಿದೆ.
ಕತ್ನಳ್ಳಿ ಮಠ(Katnalli Mutt)ದಲ್ಲಿ ರಾಜಕೀಯ, ಹೊಸ ರೋಗದ ಭವಿಷ್ಯ..!
ಪ್ರತಿ ವರ್ಷದಂತೆ ಈ ವರ್ಷವೂ ಸಹ ಯುಗಾದಿಯ ವೇಳೆ ಸದಾಶಿವ ಮುತ್ಯಾನ ಜಾತ್ರೆ(sadashiva mutt jatre) ನಡೆಯಿತು. ವಿಜಯಪುರ ತಾಲೂಕಿನ ಸುಕ್ಷೇತ್ರ ಕತಕನಹಳ್ಳಿ(Katakanahalli)ಯಲ್ಲಿ ಶ್ರೀಗುರು ಚಕ್ರವರ್ತಿ ಸದಶಿವ ಮುತ್ಯ(shree sadashiva mutya) ನೆಲೆಸಿದ್ದಾನೆ. ಈ ಪವಾಡ ಪುರುಷನ ಜಾತ್ರೆಯನ್ನು ಪ್ರತಿವರ್ಷ ಯುಗಾದಿಯ ವೇಳೆ ಒಂದು ವಾರದ ವರೆಗೆ ನಡೆಸಲಾಗುತ್ತದೆ. ಈ ವೇಳೆ ಇಲ್ಲಿನ ಪೀಠಾಧಿಪತಿಗಳಾದ ಶಿವಯ್ಯ ಮಹಾಸ್ವಾಮೀಜಿಗಳು ಮುಂದಿನ ವರ್ಷದ ಭವಿಷ್ಯ ನುಡಿಯುತ್ತಾರೆ. ಈ ಬಾರಿ ನುಡಿದ ಭವಿಷ್ಯ ಜನಸಾಮಾನ್ಯರನ್ನು ಹಿಡಿದು ರಾಜಕೀಯದ ವರೆಗೂ ಹುಚ್ಚು ಹಿಡಿಸುವಂತಾಗಿದೆ. ಯಾಕಂದ್ರೆ ಇಲ್ಲಿ ನುಡಿದಿದ್ದ ಭವಿಷ್ಯ ಎಂದೂ ಸುಳ್ಳಾಗಿಲ್ಲ ಎಂಬುದು ಅಷ್ಟೆ ನಂಬಿಕೆಯಿದೆ.
ರಾಜಕೀಯ ಸಂಚಲನ ಮೂಡಿಸಿದ ಕಾಲಜ್ಞಾನ ಹೇಳಿಕೆ..!
ಈ ಬಾರಿ ನುಡಿದಿರುವ ಭವಿಷ್ಯದಲ್ಲಿ ಮಳೆಗಾಲ ಮೂರು ಭಾಗಗಳಾಗಿದ್ದು, ಮುಂಗಾರು, ಮಧ್ಯಮ ಹಾಗೂ ಹಿಂಗಾರು ಮಳೆಗಳಲ್ಲಿ ಮಧ್ಯಮ ಮಳೆಯಲ್ಲಿ ಗೊಂದಲವಿದೆ ಎಂದಿದ್ದಾರೆ. ಬಳಿಕ ರಾಜಕೀಯ ವಿಚಾರವಾಗಿ ಕಾಲಜ್ಞಾನ ನುಡಿದ ಶಿವಯ್ಯ ಸ್ವಾಮೀಜಿ(Shivaiah swamiji)ಗಳು ಸದ್ದಿಲ್ಲದ್ದು, ಸುದ್ದಿಯಲ್ಲಿರುವುದು, ನಿದ್ದೆಯಲ್ಲಿರುವುದು, ಬುದ್ದಿಯಲ್ಲಿರುವುದು ಎಂಬ ವಿಚಾಗಳಿವೆ. ಇವುಗಳ ಜೊತೆಗೆ ಈ ಬಾರಿ ಮತ್ತೊಂದು ಎದ್ದು ನಿಲ್ಲುತ್ತೆ, ಇದು ಯಾರ ಜೊತೆ ಎದ್ದು ನಿಲ್ಲುತ್ತೆ ಎಂಬುದು ಮುಖ್ಯ ಎನ್ನುವ ಮೂಲಕ ಎಲೆಕ್ಷನ್ ಹೊತ್ತಲ್ಲಿ ರಾಜಕೀಯ ಸಂಚಲನ ಮೂಡಿಸಿದ್ದಾರೆ.
ಕಾಡಲಿದೆ ವಿಚಿತ್ರ ರೋಗ, ವೈದ್ಯರೇ ದಂಗಾಗ್ತಾರೆ..!
ಇನ್ನು ಕರೋನಾದಂತೆ ಈ ಬಾರಿಗೂ ಸಹ ಹೊಸ ರೋಗವೊಂದು ಕಾಡಲಿದೆ ಎಂದು ಶಿವಯ್ಯ ಅಜ್ಜ ಭವಿಷ್ಯ ನುಡಿದಿದ್ದಾರೆ. ಈ ಭವಿಷ್ಯವನ್ನ ಕೇಳಿ ಮತ್ತೆ ಭಕ್ತರು ಶಾಕ್ ಆಗಿದ್ದಾರೆ. ಈ ವಿಚಿತ್ರ ರೋಗ ಮನೆಯಲ್ಲಿ ಕಾಣಿಸಿಕೊಂಡರೆ, ಒಬ್ಬರಿಗೆ ಒಂದೊಂದು ತರಹದಲ್ಲಿ ತೊಂದರೆ ಕೊಡಲಿದೆ. ಒಬ್ಬರಿಗೆ ಚಳಿಯಾದ್ರೆ, ಒಬ್ಬರಿಗೆ ಕಾವು ಅನುಭವಕ್ಕೆ ಬರುತ್ತೆ. ಒಬ್ಬರಿಗೆ ತಂಪು ಕುಡಿಯುವ ಆಸೆಯಾದ್ರೆ, ಒಬ್ಬರಿಗೆ ಬಿಸಿ ನೀರು ಕುಡಿಯುವ ಬಯಕೆ ಬರುತ್ತೆ. ಈ ರೀತಿಯಲ್ಲಿ ಹೊಸ ರೋಗ ವಿಚಿತ್ರ ರೀತಿಯಲ್ಲಿ ಕಾಡುತ್ತದೆ ಎಂದಿದ್ದಾರೆ.
ವಾತ-ಪಿತ್ತ-ಕಫದ ರೂಪದಲ್ಲಿ ಕಾಡಲಿದೆ ರೋಗ..!
ಮುಂದುವರಿದು ಭವಿಷ್ಯ ನುಡಿದಿರುವ ಶಿವಯ್ಯ ಅಜ್ಜನವರು ವಾತ, ಪಿತ್ತ ಹಾಗೂ ಕಫ ಈ ಮೂರು ರೂಪದಲ್ಲಿ ಜನರನ್ನ ವ್ಯಾಧಿ ಕಾಡಲಿದೆ ಎಂದಿದ್ದಾರೆ. ಮೂರು ರೋಗಗಳು ಒಟ್ಟೊಟ್ಟಿಗೆ ಅಟ್ಯಾಕ್ ಮಾಡಲಿದ್ದು ವೈದ್ಯರಿಗೂ ಇದರ ಶಮನ ಹೇಗೆ ಮಾಡುವುದು ಎಂದು ತಿಳಿಯದಂತಾಗುತ್ತೆ. ಮನುಷ್ಯನಿಗೆ ವಾತ-ಪಿತ್ತ-ಕಫ ಮೂರು ಒಮ್ಮಿಗೆ ಸೇರಿಕೊಂಡ ಬಹಳಷ್ಟು ಬಾಧೆ ಕೊಡಲಿದೆ ಎಂದಿದ್ದಾರೆ.
ರೋಗಕ್ಕೆ ಪರಿಹಾರವನ್ನು ಸೂಚಿಸಿದ ಅಜ್ಜ..!
ಹೀಗೆ ವಿಚಿತ್ರವಾಗ ಕಾಡುವ ರೋಗ ಕೊರೊನಾ ಡೆಲ್ಟಾ, ಡೆಲ್ಟಾ ಪ್ಲಸ್ ನಂತೆ ಮಾರಣಾಂತಿಕ ಅಲ್ಲವಾದ್ರು, ತುಂಬಾನೇ ತೊಂದರೆಯನ್ನ ಕೊಡಲಿದೆ. ಆದ್ರೆ ಇದಕ್ಕ ಪರಿಹಾರವು ಇದೆ ಎಂದು ಶಿವಯ್ಯ ಅಜ್ಜ ತಿಳಿಸಿದ್ದಾರೆ. ಕಾಲಜ್ಞಾನಿ ಬಬಲಾದಿ ಸದಾಶಿವ ಮುತ್ಯಾನ ಅಂಗಾರ ಪ್ರಸಾದವೇ (ಹಣೆಗೆ ಹಚ್ಚುವ ಬೂದಿ) ಪರಿಹಾರ ಎಂದಿದ್ದಾರೆ. ಸದಾಶಿವ ಅಜ್ಜನಿಗೆ ನಿಷ್ಠೆಯಿಂದ ನಡೆದುಕೊಂಡು ಅಂಗಾರ ಧರಿಸಿದರೆ, ಅಂಗಾರ ಬೇರೆ ತರಹದಲ್ಲಿ ಊಪಯೋಗಿಸದರೆ ರೋಗ ಶಮನವಾಗಲಿದೆ ಎಂದಿದ್ದಾರೆ. ಹೊಸ ರೋಗದ ಭವಿಷ್ಯದಿಂದ ಕಂಗಾಲಾಗಿದ್ದ ಭಕ್ತರು ಈ ಮಾತನ್ನ ಕೇಳಿ ಸಮಾಧಾನಗೊಂಡಿದ್ದಾರೆ. ಇದರ ಜೊತೆಗೆ ಜಾನುವಾರುಗಳಿಗೂ ರೋಗಭಾದೆ ಕಾಡಲಿದೆ ಎಂದಿದ್ದಾರೆ.
ವಿಶ್ವಗುರುವಾಗಲಿದೆ ಭಾರತ, ವಿದೇಶಗಳನ್ನು ಆಳಲಿದೆಯಂತೆ..!
ಈ ಹಿಂದೆ ಭಾರತವನ್ನು ಬೇರೆಯವರು ಆಳಿದ್ರು, ಆದ್ರೆ ಇನ್ಮುಂದೆ ಭಾರತದವರು ಬೇರೆ ದೇಶಗಳನ್ನ ಆಳುವ ಸಮಯ ಬರಲಿದೆ ಎಂದಿದ್ದಾರೆ. ಅದು ಹೆದರಿಸಿ ಭಾರತ ವಿದೇಶಗಳನ್ನ ಆಳುವುದಿಲ್ಲ. ಪ್ರೀತಿಯಿಂದ ವಿದೇಶಗಳನ್ನ ಭಾರತ ಆಳಲಿದೆ ಎಂದಿದ್ದಾರೆ. ಅದೊಂದು ಸೂತ್ರ ಜಾರಿಗೆ ಬಂದರೇ ಭಾರತ ವಿಶ್ವಕ್ಕೆ ಗುರುವಾಗುತ್ತೆ ಎಂದಿದ್ದಾರೆ..
ಇಷ್ಟರಲ್ಲೆ ಜಾರಿಯಾಗಲಿದೆಯಂತೆ ಸೂತ್ರ..!
ಇನ್ನು ಭಾರತದಲ್ಲಿ ಆ ಸೂತ್ರ ಜಾರಿಯಾದರೇ ಭಾರತ ವಿಶ್ವಗುರುವಾಗಲಿದೆ. ಆ ಸೂತ್ರ ಜಾರಿಯಿಂದ ಭಾರತದಲ್ಲಿ ಬಡವ-ಶ್ರೀಮಂತ ಎನ್ನುವ ಬೇದ-ಭಾವ ಇರೋದಿಲ್ಲ. ಆ ಸೂತ್ರ ಜಾರಿಯಾಗಲು ವಿಘ್ನಗಳು ಎದುರಾಗಿವೆ. ಎಷ್ಟೆ ಅಡೆ ತಡೆ ಬಂದರು ಭಾರತದಲ್ಲಿ ಆ ಸೂತ್ರ ಜಾರಿಗೆ ಬರಲಿದೆ ಎಂದಿದ್ದಾರೆ. ಇದು ಸಮಾನ ನಾಗರಿಕ ಸಂಹಿತೆಯಾ? ಎಂದು ಭಕ್ತರು ಚರ್ಚಿಸುತ್ತಿದ್ದಾರೆ.
ದವಸ-ಧಾನ್ಯ ಚೆನ್ನಾಗಿವೆ, ಮಳೆ ಮೂರು ಭಾಗ..!
ಇದರೊಟ್ಟಿಗೆ ಈ ಬಾರಿ ಧವಸ ಧಾನ್ಯಗಳು ಚೆನ್ನಾಗಿವೆ ಎಂಬ ಸಂದೇಶವೂ ಸಿಕ್ಕಿದೆ. ಆದ್ರೆ ಮಳೆ ಮೂರು ಭಾಗ ಆಗಲಿದೆ. ಮೊದಲೇ ಮಳೆ ಮಧ್ಯದ ಮಳೆ, ಮೂರನೇ ಮಳೆ. ನಡುವಿನ ಮಳೆ ಒಂದನೇ ಮಳೆಯ ಜೊತೆಗೆ ಹೋಗಬೇಕಾ? ಮೂರನೇ ಮಳೆಯ ಜೊತೆಗೆ ಹೋಗಬೇಕಾ ಎನ್ನುವಾಗ ಮೊದಲ ಹಾಗೂ ಮೂರನೇ ಮಳೆ ನನ್ನ ಜೊತೆಗೆ ಬಾ, ನನ್ನ ಜೊತೆಗೆ ಬಾ ಎಂದು ಕರೆಯುತ್ತಿವೆ ಎಂದಿದ್ದಾರೆ. ಮಳೆಯಾಗುವ ಸೂಚನೆಯಂತು ರೈತರಿಗೆ ಸಿಕ್ಕಿದೆ. ಅಷ್ಟೆ ಅಲ್ಲೆ ಕಳೆದ ಬಾರಿ ಹೇಳಿದ್ದ ಮಳೆ-ಬೆಳೆಯ ಹಾಗೂ ಮಹಾಮಾರಿಯ ಮತ್ತು ಭೂಕಂಪನದ ಅಷ್ಟೆ ಅಲ್ಲದೆ ದೇಶ-ದೇಶಗಳ ಮದ್ಯೆ ಆಗುವ ಯುದ್ದದ ಬಗ್ಗೆ ನುಡಿದಿದ್ದದ ಭವಿಷ್ಯ ನಿಜವಾಗಿದ್ದು ಕಣ್ಮುಂದೆ ಕಟ್ಟಿದಂತಿದೆ.
ವಿಜಯಪುರ: ಮತ್ತೆ ಬಬಲಾದಿ ಮುತ್ಯಾನ ಸ್ಫೋಟಕ ಭವಿಷ್ಯ, ರಾಜ್ಯ ರಾಜಕಾರಣದಲ್ಲಿ ತಿರುವು..!
ಜರುಗಿದ ವಿವಿಧ ಕಾರ್ಯಕ್ರಮಗಳು..!
ಸದಾಶಿವನ ಜಾತ್ರೆಯ ವೇಳೆ ಪುರಾಣ, ದಿಪೋತ್ಸವ, ರಥೋತ್ಸವ, ಕುಂಭಮೇಳ, ಸಾಮೂಹಿಕ ವಿವಾಹ, ಅನ್ನದಾಸೋಹ ಸೇರಿದಂತೆ ಹಲವು ಆಚರಣೆಗಳು ನಡೆಯುತ್ತವೆ. ಒಟ್ಟಿನಲ್ಲಿ ಈ ಜಾತ್ರೆಗೆ ಬೇರೆ ಬೇರೆ ಜಿಲ್ಲೆಗಳಿಂದ ಬರುವ ಲಕ್ಷಾಂತರ ಭಕ್ತರು ಕಾಲಜ್ಞಾನದ ಹೇಳಿಕೆಯಿಂದಲೇ ತಮ್ಮ ಬೆಳೆಗಳನ್ನು ಬೆಳೆಯುವುದು ಸಾಮಾನ್ಯವಾಗಿದೆ.