ಕಾಸರಗೋಡು ಜಿಲ್ಲಾಧಿಕಾರಿ ಸಜಿತ್ ಬಾಬು ಗಂಟಲು ದ್ರವ ಸ್ಯಾಂಪಲ್ ವರದಿ| ಕಾಸರಗೋಡಿನಲ್ಲಿ ಬುಧವಾರ ದೃಶ್ಯಮಾಧ್ಯಮ ವರದಿಗಾರರೊಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿತ್ತು| ವರದಿಗಾರ ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಯ ಸಂದರ್ಶನ ನಡೆಸಿದ್ದರು| ಗನ್‌ಮ್ಯಾನ್ ಮತ್ತು ಕಾರು ಚಾಲಕನನ್ನು ಕ್ವಾರಂಟೈನ್ ಮಾಡಲಾಗಿತ್ತು|
ಮಂಗಳೂರು(ಮೇ.01): ಕೊರೋನಾ ಸೋಂಕಿತ ಪತ್ರಕರ್ತನಿಗೆ ಸಂದರ್ಶನ ನೀಡಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್‌ಗೊಳಗಾಗಿರುವ ಕಾಸರಗೋಡು ಜಿಲ್ಲಾಧಿಕಾರಿ ಸೇಫ್ ಆಗಿದ್ದಾರೆ. ಜಿಲ್ಲಾಧಿಕಾರಿ ಸಜಿತ್ ಬಾಬು ಅವರ ಗಂಟಲು ದ್ರವ ಸ್ಯಾಂಪಲ್ ವರದಿ ನೆಗೆಟಿವ್ ಬಂದಿದೆ.
Add Asianetnews Kannada as a Preferred Source

ಕಾಸರಗೋಡಿನಲ್ಲಿ ಬುಧವಾರ ದೃಶ್ಯಮಾಧ್ಯಮ ವರದಿಗಾರರೊಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಇದೇ ವರದಿಗಾರ ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಯ ಸಂದರ್ಶನ ನಡೆಸಿದ್ದರು. ಅವರ ಗನ್‌ಮ್ಯಾನ್ ಮತ್ತು ಕಾರು ಚಾಲಕನನ್ನು ಕ್ವಾರಂಟೈನ್ ಮಾಡಲಾಗಿತ್ತು.
ಲಾಕ್‌ಡೌನ್ ಎಫೆಕ್ಟ್: ಹಣ ಪಾವತಿಸಲು ಅಸಮರ್ಥರಾದ ಕುಟುಂಬಗಳಿಗೆ ಒಂದು ಸಿಲಿಂಡರ್‌ಗೆ ಸಬ್ಸಿಡಿ
ಉಳಿದವರ ಸ್ಯಾಂಪಲ್ ವರದಿ ಬಂದಿಲ್ಲ. ಕೊರೋನಾ ಸೋಂಕಿತರ ಸಂಪರ್ಕ ಹಿನ್ನೆಲೆಯಲ್ಲಿ ಮಂಜೇಶ್ವರ ಶಾಸಕ ಎಂ.ಸಿ. ಖಮರುದ್ದಿನ್ ಹಾಗೂ ಐಜಿಪಿ ವಿಜಯ್ ಸಾಕಾರೆ ಅವರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
