'ನಮ್ಮದೇ ಸರ್ಕಾರ ಇದ್ರೂ ಅಧಿಕಾರಿಗಳು ಮಾತು ಕೇಳ್ತಿಲ್ಲ': ಕಾರವಾರ ಶಾಸಕ ಕಿಡಿ
ಬಿಜಿಎಸ್ಎಸ್ ಸುಮತಿ ನಾಯಕ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ನ ವಿದ್ಯಾರ್ಥಿಗಳಿಗೆ ಕ್ಲಿನಿಕಲ್ ಸೌಲಭ್ಯ ನೀಡಲು ವೈದ್ಯಕೀಯ ಕಾಲೇಜ್ ನಿರ್ದೆಶಕರಿಂದ ನಿರಾಕರಣೆ ಸಂಬಂಧಿಸಿ ಕಾರವಾರ ವೈದಕೀಯ ಶಿಕ್ಷಣ ಸಂಸ್ಥೆ ನಿರ್ದೇಶಕರ ವಿರುದ್ಧ ಕಾರವಾರ ಶಾಸಕ ಸತೀಶ್ ಸೈಲ್ ಆಕ್ರೋಶ ಹೊರ ಹಾಕಿದ್ದಾರೆ.
ಕಾರವಾರ (ಜೂ.13): ಬಿಜಿಎಸ್ಎಸ್ ಸುಮತಿ ನಾಯಕ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ನ ವಿದ್ಯಾರ್ಥಿಗಳಿಗೆ ಕ್ಲಿನಿಕಲ್ ಸೌಲಭ್ಯ ನೀಡಲು ವೈದ್ಯಕೀಯ ಕಾಲೇಜ್ ನಿರ್ದೆಶಕರಿಂದ ನಿರಾಕರಣೆ ಸಂಬಂಧಿಸಿ ಕಾರವಾರ ವೈದಕೀಯ ಶಿಕ್ಷಣ ಸಂಸ್ಥೆ ನಿರ್ದೇಶಕರ ವಿರುದ್ಧ ಕಾರವಾರ ಶಾಸಕ ಸತೀಶ್ ಸೈಲ್ ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯದಲ್ಲಿ ತಮ್ಮದೇ ಸರ್ಕಾರ ಇದ್ರೂ ಜಿಲ್ಲೆಯ ಕೆಲವು ಅಧಿಕಾರಿಗಳು ನಮ್ಮ ಮಾತು ಕೇಳ್ತಾ ಇಲ್ಲ ಅನ್ನೋ ಮೂಲಕ ಸುದ್ದಿಗೋಷ್ಠಿಯಲ್ಲಿ ತನ್ನ ಅಸಹಾಯಕತೆಯನ್ನು ಕಾರವಾರ ಶಾಸಕ ಸತೀಶ್ ಸೈಲ್ ಬಿಚ್ಚಿಟ್ಟಿದ್ದಾರೆ. ಆಸ್ಪತ್ರೆಯಲ್ಲಿ ರೋಗಿಗಳು ಬಹಳ ನರಕ ಯಾತನೆ ಅನುಭವಿಸುತ್ತಿದ್ದಾರೆ. ನಾನೇ ಎಷ್ಟೋ ರೋಗಿಗಳನ್ನು ಉಡುಪಿ, ಮಂಗಳೂರು ಹಾಗೂ ಪಣಜಿ ಕಳುಹಿಸಿಕೊಡುತ್ತಿದ್ದೇನೆ. ಕಾರವಾರ ಸರ್ಕಾರಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಕೆಲವೇ ಕೆಲವು ವಿಭಾಗಗಳು ಮಾತ್ರ ಇಲ್ಲಿ ಚೆನ್ನಾಗಿ ಕೆಲಸ ಮಾಡುತ್ತಿವೆ. ಸಭೆಯಲ್ಲಿ ನಾವು ಏನೇ ಹೇಳಿದ್ರೂ ಎಸ್ ಎಸ್ ಅಂತಾ ತಲೆ ಮೇಲೆ ಇಟ್ಕೊಳ್ತಾರೆ. ಆದ್ರೆ, ಯಾವುದೇ ಕೆಲಸವನ್ನು ಆರೋಗ್ಯಾಧಿಕಾರಿಗಳು ಮಾಡುತ್ತಿಲ್ಲ. ಡೀನ್, ಡಿಎಸ್ ಹಾಗೂ ಡಿಎಚ್ ಓ ಸರಕಾರಿ ಆಸ್ಪತ್ರೆಯಲ್ಲಿ ರೌಂಡ್ಸ್ ಹಾಕಲ್ಲ. ಕ್ರಿಮ್ಸ್ ಸಂಸ್ಥೆಯ ನಿರ್ದೇಶಕ ಗಜಾನನ ನಾಯ್ಕ್ ಈ ವರ್ಷ ಕ್ಲಿನಿಕ್ ಸೌಲಭ್ಯ ಕೊಡಲು ನಿರಾಕರಿಸಿದ್ದಾರೆ.
ಗೋಕರ್ಣ: ಅಕ್ರಮವಾಗಿ ಗೋವಾ ಮದ್ಯ ಮಾರಾಟ ಪೊಲೀಸ್ ಪೇದೆ ಬಂಧನ
ಕಳೆದ 22 ವರ್ಷಗಳಿಂದ ಕಾರವಾರ ಸರ್ಕಾರಿ ಆಸ್ಪತ್ರೆಯಲ್ಲೆ ಪ್ರಾಕ್ಟಿಕಲ್ ಮಾಡುತ್ತಿದ್ದರು. ಆದ್ರೆ, ಈ ವರ್ಷ ಒಮ್ಮಿಂದೊಮ್ಮೆಲೇ ಸರಕಾರದ ಹೊಸ ನಿಯಮ ಪ್ರಕಾರ ಅವಕಾಶ ನೀಡಲಾಗಲ್ಲ ಅಂತಿದ್ದಾರೆ. ಈ ಬಗ್ಗೆ ನಾನು ವೈದಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗೆ ಕರೆ ಮಾಡಿದ್ದೆ. ಆಸ್ಪತ್ರೆಯಲ್ಲಿರೋ ರೋಗಿಗಳು ಮತ್ತು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅವಕಾಶ ಕೊಡುವಂತೆ ಹೇಳಿದ್ದಾರೆ. ಆದ್ರೆ, ನಮ್ಮ ಕ್ರಿಮ್ಸ್ ನಿರ್ದೇಶಕರು ಮಾತ್ರ ಇದಕ್ಕೆ ಅವಕಾಶನೆ ಕೊಡುತ್ತಿಲ್ಲ. ಈ ಬಗ್ಗೆ ಮಂಗಳವಾರ ಸಚಿವರನ್ನು ಭೇಟಿ ಮಾಡಿ ಅವರ ಗಮನಕ್ಕೆ ತರುತ್ತೇನೆ. ವಿದ್ಯಾರ್ಥಿಗಳಿಗೆ ಯಾವುದೇ ಅನ್ಯಾಯ ಆಗದಂತೆ ನಾನು ನೊಡಿಕೊಳ್ಳುತ್ತೇನೆ ಎಂದ ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.