Asianet Suvarna News Asianet Suvarna News

ಕಾರ್ಣಿಕರ ಭವಿಷ್ಯವಾಣಿ: ‘ನಂಬಿದ ಕಂದಮ್ಮಗಳಿಗೆ ಕರಿಕಂಬಳಿ ನೆರಳಾದೀತಲೇ ಪರಾಕ್‌’

*  ಕುರುಗೋಡು ತಾಲೂಕಿನ ಮೈಲಾರ ಲಿಂಗೇಶ್ವರ ದೇವಸ್ಥಾನ
*  ಮೂರು ವರ್ಷಗಳಿಂದ ಕಾರ್ಣಿಕ ನುಡಿಯುತ್ತಿರುವ ನವೀನ್‌ಬಡಿಗೇರ್‌
*  ಕಾರ್ಣಿಕೋತ್ಸವಕ್ಕೆ ಸಾಕ್ಷಿಯಾದ ಸಾವಿರಾರು ಜನರು 
 

Karnika Naveen Badiger Says Prophecy About Karnataka grg
Author
Bengaluru, First Published Oct 16, 2021, 2:35 PM IST

ಕುರುಗೋಡು(ಅ.16): ತಾಲೂಕಿನ(Kurugodu) ಸಮೀಪದ ಯರಿಂಗಳಿಗಿ ಗ್ರಾಮದ ಮೈಲಾರ ಲಿಂಗೇಶ್ವರ ದೇವಸ್ಥಾನದಲ್ಲಿ(Mylara Lingeshwara Temple) ದಸರಾ(Dasara) ಹಬ್ಬದ ಅಂಗವಾಗಿ ಶುಕ್ರವಾರ ಕಾರ್ಣಿಕೋತ್ಸವದಲ್ಲಿ ನವೀನ್‌ ಬಡಿಗೇರ್‌‘ ನಂಬಿದ ಕಂದಮ್ಮಗಳಿಗೆ ಕರಿಕಂಬಳಿ ನೆರಳಾದೀತಲೇ ಪರಾಕ್‌’ ಎಂದು ಭವಿಷ್ಯವಾಣಿ(Prophecy) ನುಡಿದರು.

ಏಳು ದಿನಗಳ ಕಾಲ ಉಪವಾಸ(Fasting) ವ್ರತ ಆಚರಿಸುವ ಧಾರವಾಡ(Dharwad) ಮೂಲಕ ನವೀನ್‌ ಬಡಿಗೇರ್‌ ಕಾರ್ಣಿಕ(Karnika) ನುಡಿದರು. ದೇವರನ್ನು(God) ನಂಬಿ ಬಿತ್ತಿದ ಬೆಳೆಯ(Crop) ರಕ್ಷಣೆಯಾಗುತ್ತದೆ ಎಂಬ ಅರ್ಥ ನೀಡುತ್ತದೆ ಎಂದು ಕಾರ್ಣಿಕರ ವಾಕ್ಯದ ಅರ್ಥ ಎಂದು ಜನರು ಮಾತನಾಡುತ್ತಿದ್ದರು. ಯರಿಂಗಳಿಗಿ ಗ್ರಾಮವೂ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿ ಉತ್ಸವದಲ್ಲಿ ಭಾಗವಹಿಸಿದ್ದ ಸಾವಿರಾರು ಜನರು ಕಾರ್ಣಿಕೋತ್ಸವಕ್ಕೆ ಸಾಕ್ಷಿಯಾದರು.

ದೇವರಗುಡ್ಡದ ಕಾರ್ಣಿಕ ನುಡಿದ ಗೊರವಪ್ಪ : ಹೇಗಿದೆ ನಾಡಿನ ಭವಿಷ್ಯ

ಗುರುವಾರ ದೇವಸ್ಥಾನದಲ್ಲಿ ಸರಪಳಿ ಸೇವೆ ಜರುಗಿತು. ನವೀನ್‌ಬಡಿಗೇರ್‌, ವಿಠ್ಠೋಬಪ್ಪ, ಕಾರ್ತಿಕ್‌ಮತ್ತು ರಾಜು ಸ್ವಾಮಿ ಇವರು ಕಬ್ಬಿಣದ ಸರಪಳಿ ಎಳೆದು ತುಂಡು ಮಾಡುವ ಮೂಲಕ ನೆರೆದ ಜನರನ್ನು ಮೂಕವಿಸ್ಮಿತರನ್ನಾಗಿ ಮಾಡಿದರು.

ಬಳ್ಳಾರಿಯ ಜಿಲ್ಲಾ ಪೊಲೀಸ್‌(Police) ವರಿಷ್ಠಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾಳಪ್ಪ ಆಚಾರಿ ಎನ್ನುವವರು ಪ್ರಾರಂಭದಿಂದ ಸರಪಳಿ ಪವಾಡ ಮತ್ತು ಕಾರ್ಣಿಕ ನುಡಿಯುತ್ತಿದ್ದರು. ಅವರು ಲಿಂಗೈಕ್ಯರಾದ ನಂತರ ಅವರ ಮಗ ನವೀನ್‌ ಬಡಿಗೇರ್‌ ಮೂರು ವರ್ಷಗಳಿಂದ ನಡೆಸಿಕೊಂಡುಬರುತ್ತಿದ್ದಾರೆ. ಕಾರ್ಣಿಕೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಗುರುವಾರ ಮತ್ತು ಶುಕ್ರವಾರ ವಿಶೇಷ ಪೂಜಾ(Puja) ವಿಧಿವಿಧಾನಗಳು ಜರುಗಿದವು.
 

Follow Us:
Download App:
  • android
  • ios