ದೇವರಗುಡ್ಡದ ಕಾರ್ಣಿಕ ನುಡಿದ ಗೊರವಪ್ಪ : ಹೇಗಿದೆ ನಾಡಿನ ಭವಿಷ್ಯ
- ಹಾವೇರಿ ಜಿಲ್ಲೆಯ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಕ್ಷೇತ್ರ ದೇವರಗುಡ್ಡದ ಮಾಲತೇಶ ಸ್ವಾಮೀಜಿ ಕಾರ್ಣಿಕ
- ಮುಂದಾಗುವ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ
ಹಾವೇರಿ (ಅ.15): ಹಾವೇರಿ (Haveri) ಜಿಲ್ಲೆಯ ಐತಿಹಾಸಿಕ (Historical) ಹಿನ್ನೆಲೆಯುಳ್ಳ ಶ್ರೀ ಕ್ಷೇತ್ರ ದೇವರಗುಡ್ಡದ ಮಾಲತೇಶ ಸ್ವಾಮೀಜಿ ಕಾರ್ಣಿಕ ನುಡಿದಿದ್ದು, ಮುಂದಾಗುವ ಬಗ್ಗೆ ಭವಿಷ್ಯವನ್ನು (Prediction) ನುಡಿದಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೇನ್ನೂರು (Ranebennur) ತಾಲೂಕಿನ ಶ್ರೀ ಕ್ಷೇತ್ರ ದೇವರಗುಡ್ಡದ ಮಾಲತೇಶ ಸ್ವಾಮೀಜಿ ಕಾರ್ಣಿಕವನ್ನು ಗೊರವಪ್ಪ ನಾಗಪ್ಪಜ್ಜ ದುರಗಪ್ಪ ಉರ್ಮಿ ಗುರುವಾರ ನುಡಿದಿದ್ದು, ಸದ್ದಲೇ , ಎರೆ ದೊರೆ ಆಯಿತಲೇ, ದೈವ ದರ್ಬಾರ್ ಆಯಿತಲೇ ಪರಾಕ್ ಎಂದು ಕಾರ್ಣಿಕ ಹೇಲುವ ಮೂಲಕ ಶುಭ ಸಂದೇಶವನ್ನೇ (Good Message) ನೀಡಿದ್ದಾರೆ.
ದೇವರಗುಡ್ಡ ಕ್ಷೇತ್ರದಲ್ಲಿ ನಡೆದ ಕಾರ್ಣಿಕದಲ್ಲಿ ಭಕ್ತರನೇಕರು ಆಗಮಿಸಿದ್ದು, ಕಾರ್ಣಿಕವನ್ನು (karanika) ಕಣ್ತುಂಬಿಕೊಂಡಿದ್ದಾರೆ. ಪ್ರತಿವರ್ಷ ದಸರಾ ಹಬ್ಬದ ಆಯುಧ ಪೂಜೆಯ (Ayudha Pooja) ದಿನ ದೇವರಗುಡ್ಡದಲ್ಲಿ ಕಾರ್ಣಿಕ ನುಡಿಯಲಾಗುತ್ತದೆ.
ಕೊರೋನಾ ರೂಲ್ಸ್ ಕೇಳೋರಿಲ್ಲ.. ಮದ್ದು ಗುಂಡಿನ ಹಾವಳಿ ಎಂದ ಕಾರಣಿಕ!
ನಾಡಿನ ಸುಭಿಕ್ಷೆಯ ಕುರಿತು ಹಾಗೂ ರಾಜಕೀಯ (politics) ಬೆಳೆವಣಿಗೆಯ ಕುರಿತ ಕಾರ್ಣಿಕ ನುಡಿ ನುಡಿದಿದ್ದು, ಭವಿಷ್ಯ ವಾಣಿಯ ವಿಶ್ಲೇಷಣೆ ಹೀಗಿದೆ.
ಎರೆ ದೊರೆ ಆತಲೇ. ರೈತರು (Farmers) ಬೆಳೆದ ಬೆಳೆಗಳಿಗೆ ಒಳ್ಳೆಯ ಬೆಲೆ ಸಿಗಲಿದೆ. ಹಾಗೂ ಉತ್ತಮವಾದ ಫಲವತ್ತು ಈ ಬಾರಿ ಬರಲಿದೆ ಎಂದು ಹೇಳಿದ್ದಾರೆ.
ದೈವ ದೊರೆ ಅದೀತಲೇ ಪರಾಕ್. ಇದರ ಅರ್ಥ ಈ ವರ್ಷ ಕೊರೋನಾದಂತ ಯಾವ ರೋಗದ ಬಾದೆಯೂ ಅಷ್ಟಾಗಿ ಜನರನ್ನು ಕಾಡುವದಿಲ್ಲ ಎಂಬ ಅರ್ಥವಿದೆ.
ಅತ್ಯಂತ ಶ್ರದ್ಧಾ ಭಕ್ತಿಯಿಂದ ಭಕ್ತರು ನಂಬುವ ಈ ಕಾರ್ಣಿಕರು ಈ ಬಾರಿ ಶುಭವನ್ನೇ ನುಡಿದಿದ್ದು ಇದರಿಂದ ಕೊಂಚ ನಿಟ್ಟುಸಿರು ಬಿಡುವಂತೆ ಆಗಿದೆ.
ಕೆಲ ದಿನಗಳ ಹಿಂದೆ ನುಡಿದಿದ್ದ ಕಮ್ಮಾರಗಟ್ಟೆ ಕಾರ್ಣಿಕ
ಐತಿಹಾಸಿಕ ಪ್ರಸಿದ್ಧವಾದ ಹೆಳವನಕಟ್ಟೆ ಗಿರಿಯಮ್ಮನ ಪವಿತ್ರ ಕ್ಷೇತ್ರ ತಾಲೂಕಿನ ಕಮ್ಮಾರಗಟ್ಟೆಯಲ್ಲಿ ಪ್ರತಿ ವರ್ಷ ನಾಗರ ಪಂಚಮಿ ಸಂದರ್ಭದಲ್ಲಿ ನಡೆಯಲಿರುವ ಕಾರ್ಣಿಕ ಉತ್ಸವ ನಾಡಿನಲ್ಲೇ ಅತ್ಯಂತ ಪ್ರಸಿದ್ಧಿಯಾಗಿದೆ. ಆದರೆ ಈ ಬಾರಿ ಕೋವಿಡ್ ಹಿನ್ನೆಲೆ ಕೆಲವೇ ಜನರ ಸಮ್ಮುಖದಲ್ಲಿ ಪದ್ಧತಿ ಆಚರಣೆ ಕಾರಣಕ್ಕಾಗಿ ಕಾರ್ಣಿಕ ಕಾರ್ಯಕ್ರಮ ಜರುಗಿತು.
ವ್ರತನಿರತ ಗಣಮಗ ಪುಜಾ ವಿಧಿಗಳನ್ನು ಪೂರೈಸಿದ ನಂತರ ಹಸುಳಿನ ಕೂಗು ಗೋಳಾಡಿತಲೇ, ಭೂ ಲೋಕ ನಡುಗಿತಲೇ ಎಚ್ಚರ ಎಂದು ಕಾರ್ಣಿಕ ನುಡಿಯಲಾಯಿತು.
ಗಡ್ಡಧಾರಿ ಸಿಎಂ ಸುಳ್ಳು, ಅದು ರಾಜಕೀಯ ಪ್ರೇರಿತ ಹೇಳಿಕೆ: ಗೊರವಯ್ಯ
ಸಾಮಾನ್ಯವಾಗಿ ಕಮ್ಮಾರಗಟ್ಟೆ ಕಾರ್ಣಿಕ ನಾಡಿನಲ್ಲಿಯೇ ಅತ್ಯಂತ ಪ್ರಸಿದ್ದಿಯಾಗಿದ್ದು ಈ ನುಡಿಯನ್ನು ಇಡಿ ವರ್ಷದ ಭವಿಷ್ಯವನ್ನು ಕೆಲವೇ ಪದಗಳಲ್ಲಿ ಹೇಳುವ ಕಾರ್ಣಿಕ ನುಡಿ ಕೇಳಲು ಹಲವಾರು ಜಿಲ್ಲೆ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರು. ಜೊತೆಗೆ ಸುತ್ತ ಮುತ್ತಲಿನ ಗ್ರಾಮಗಳ ಗ್ರಾಮ ದೇವತೆಗಳು ಆಗಮಿಸಿ ಪೂಜೆ ಸಲ್ಲಿಸಲಾಗುತಿತ್ತು. ವಿಶೇಷವಾಗಿ ಈ ಉತ್ಸವಕ್ಕೆ ಆಗಮಿಸಿ ದೆವರಿಗೆ ಪೂಜೆ ಸಲ್ಲಿಸಿದರೆ ನವವಿವಾಹಿತ ಜೋಡಿಗಳಿಗೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ.