ಬೆಂಗಳೂರು[ಆ. 12] ಕಳೆದ 24 ಗಂಟೆಗಳ ಮಳೆ ನಕ್ಷೆಯನ್ನು ಮೊದಲು ನೋಡಿಕೊಂಡು ಬನ್ನಿ..ಯಾವ ಜಿಲ್ಲೆಯಲ್ಲಿ ಯಾವ ಭಾಗದಲ್ಲಿ ಅಧಿಕ ಮಳೆಯಾಗಿದೆ? ಸಾಮಾನ್ಯ ಮಳೆ ಎಲ್ಲಾಗಿದೆ? ಎಂಬೆಲ್ಲ ವಿಚಾರ ನಿಮ್ಮ ಗಮನಕ್ಕೆ ಬರುತ್ತದೆ. ಮೊದಲು ಈ ನಕಾಶೆ ನೋಡಿ.. ಇದು ಕಳೆದ ಒಂದು ದಿನದ ಅವಧಿಯ ಮಳೆ ಲೆಕ್ಕಾಚಾರ..

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಅತ್ಯಧಿಕ  ಅಂದರೆ147 ಮಿಮೀ ಮಳೆಯಾಗಿದೆ. ನಕಾಶೆ ನೋಡುವವರಿಗೆ ಸೂಚನೆ ಗಮನಿಸಿ.. ಬಿಳಿ ಬಣ್ಣ ಅಂದರೆ ಮಳೆ ಇಲ್ಲ, ಕೇಸರಿ ಬಣ್ಣ ಅಂದರೆ ಅತಿ ಕಡಿಮೆ ಮಳೆ[0.1 ರಿಂದ 2.4 ಮಿಮೀ], ಹಳದಿ ತುಂತುರು ಮಳೆ [ 2.5 ರಿಂದ 7.5 ಮಿಮೀ], ಹಸಿರು ಸಾಧಾರಣ ಮಳೆ [7.6 ರಿಂದ 35 ಮಿಮೀ], ಆಕಾಶ ನೀಲಿ ಸಾಧಾರಣದಿಂದ ಭಾರೀ ಮಳೆ[35.6 ರಿಂದ 64 ಮಿಮೀ], ನೀಲಿ ಭಾರೀ ಮಳೆ[64.5 ರಿಂದ  124ಮಿಮೀ], ಕಡುನೀಲಿ ಅತಿ ಹೆಚ್ಚು ಮಳೆ[125.5 ಮೀಮೀಗೂ ಅಧಿಕ]..

ಮನೆ ಕಳೆದುಕೊಂಡವರಿಗೆ ಪರಿಹಾರ ಹಣ ಘೋಷಿಸಿದ ಯಡಿಯೂರಪ್ಪ

ಹಾಗಾದರೆ ಮುಂದೇನು ಆಗುತ್ತದೆ? ಸುರಿಯುತ್ತಿರುವ ಮಳೆ ಕಡಿಮೆಯಾಗಲಿದೆಯಾ?  ಮುಂದಿನ 48 ಗಂಟೆಗಳ ಅವಧಿಯಲ್ಲಿ ಮಳೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.  ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗಬಹುದು. 

ದಕ್ಷಿಣ ಕನ್ನಡ ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಭಾರೀ ಮಳೆಯಾಗಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಇಳಿಮುಖವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.