ಹುಬ್ಬಳ್ಳಿ(ಏ.23): ಲಾಕ್‌ಡೌನ್‌ ನಡುವೆ ಅಂಜುಮನ್ ಸಂಸ್ಥೆ ಏ. 9ರಂದು ಶಾಬ್-ಇ-ಬರಾತ್ ಆಚರಿಸಲು ಸ್ಮಶಾನಕ್ಕೆ ಭೇಟಿ ನೀಡಿದ ಬಗ್ಗೆ ಹುಬ್ಬಳ್ಳಿ ಅಂಜುಮಾನ್-ಇ-ಇಸ್ಲಾಂ ಸಂಸ್ಥೆಯ ಪದಾಧಿಕಾರಿಗಳಿಗೆ ಕರ್ನಾಟಕ ವಕ್ಫ್ ಬೋರ್ಡ್ ಕಾರಣ ಕೇಳಿ ಶೋಕಾಸ್ ನೋಟಿಸ್ ನೀಡಿದ್ದು, ಅದಕ್ಕೆ ಉತ್ತರವನ್ನೂ ಅಂಜುಮನ್ ಸಂಸ್ಥೆ‌ ಕಳಿಸಿದೆ.

ಕೋವಿಡ್-19 ಸಾಂಕ್ರಾಮಿಕ ಮತ್ತು ಸರ್ಕಾರವು ವಿಧಿಸಿರುವ ಲಾಕ್‌ಡೌನ್ ದೃಷ್ಟಿಯಿಂದ ಸಭೆಯ ಪ್ರಾರ್ಥನೆಯನ್ನು ಸ್ಥಗಿತಗೊಳಿಸುವ ಸೂಚನೆ ಹೊರತಾಗಿ ಅಂಜುಮಾನ್-ಇ-ಇಸ್ಲಾಂನ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಸದಸ್ಯರು ಸ್ಮಶಾನಕ್ಕೆ ಭೇಟಿ ನೀಡಿದ್ದರು.

ಯೋಗ ಮಾಡಿ ಮೋದಿ ಗಮನ ಸೆಳೆದ ಬಾಲಕಿ: ಹುಬ್ಬಳ್ಳಿ ಹುಡುಗಿ ಇಫ್ರಾಗೆ ಭೇಷ್‌ ಎಂದ ಪ್ರಧಾನಿ..!

ಇದು 1995ರ ವಕ್ಫ್ ಕಾಯ್ದೆಯ ಸೆಕ್ಷನ್ 65(5)ರ ಅಡಿಯಲ್ಲಿ ವ್ಯವಸ್ಥಾಪನಾ ಸಮಿತಿಯ ತಪ್ಪಾದ ಕೃತ್ಯವಾಗಿದ್ದು,ಕೂಡಲೇ ಅಂಜುಮಾನ್-ಇ-ಇಸ್ಲಾಂನ ಪದಾಧಿಕಾರಿಗಳು ಮೂರು ದಿನಗಳಲ್ಲಿ ನೋಟಿಸ್‌ಗೆ ಉತ್ತರಿಸುವಂತೆ ರಾಜ್ಯ ವಕ್ಫ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಟಿಸ್ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಂಜುಮನ್ ಸಂಸ್ಥೆ ಅಧ್ಯಕ್ಷ ಯುಸೂಫ್ ಸವಣೂರು, ಶೋಕಾಸ್ ನೋಟೀಸ್ ಬಂದಿದ್ದು, ಅದಕ್ಕೆ ಉತ್ತರವನ್ನು ನಾವು ನೀಡಿದ್ದೇವೆ. ಶಾಬ್ ಇ ಬಾರಾತ್ ದಿನ ನಾವು ಸಾವಿರಾರು ಜನರು ಸೇರುವುದನ್ನು ತಪ್ಪಿಸಿದ್ದೇವೆ ಎಂದರು.