ಲಾಕ್‌ಡೌನ್‌ ವೇಳೆ ಯೋಗಾಸನ ಮಾಡಿ ಮೋದಿ ಗಮನ ಸೆಳೆದ ಇಫ್ರಾ| ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ಸದ್ದು ಮಾಡಿದ ಹುಬ್ಬಳ್ಳಿ ಹುಡುಗಿ| ಮನೆಯಲ್ಲಿಯೇ ಟಿವಿ ನೋಡುತ್ತಾ ಸರ್ವಾಂಗಾಸನ ಮಾಡುತ್ತಿರುವ ಬಾಲಕಿ|

ಮಯೂರ ಹೆಗಡೆ

ಹುಬ್ಬಳ್ಳಿ(ಏ.20): ಕೊರೋನಾ ಲಾಕ್‌ಡೌನ್‌ನಲ್ಲಿ ಈ ವೇಳೆ ಮನೆಯಲ್ಲಿಯೇ ಉಳಿದು ಯೋಗ ನಿರತಳಾದ ಹುಬ್ಬಳ್ಳಿಯ ಬಾಲಕಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ಸದ್ದು ಮಾಡಿದ್ದಾಳೆ.

ಹುಬ್ಬಳ್ಳಿಯ ಆರು ವರ್ಷದ ಬಾಲಕಿ ಇಫ್ರಾ ಮುಲ್ಲಾ ಪ್ರಧಾನಿ ಮೋದಿ ಅವರನ್ನು ಆ ಮೂಲಕ ದೇಶದ ಗಮನವನ್ನು ಸೆಳೆದಿದ್ದಾಳೆ. ಕೊರೋನಾ ಕಾರಣದಿಂದ ಜನತೆ ಮನೆಯಲ್ಲಿದ್ದೇ ಫಿಟ್‌ ಆಗಿರಲು ಯತ್ನಿಸಿ, ಪ್ರತಿನಿತ್ಯ ಯೋಗ, ಪ್ರಾಣಾಯಾಮ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಅದರಂತೆ ಈಕೆ ಆನಂದ ನಗರದ ಸಂಗಮ್‌ ಕಾಲನಿಯಲ್ಲಿ ಮನೆಯಲ್ಲಿ ಟಿವಿ ನೋಡುತ್ತಾ ಸರ್ವಾಂಗಾಸನ ಮಾಡುತ್ತಿದ್ದಳು. ಇದನ್ನು ವಿಡಿಯೋ ಮಾಡಿರುವ ಬಾಲಕಿ ತಾಯಿ, ಪತಿ ಇಮ್ತಿಯಾಜ್‌ ಅಹಮದ್‌ ಮುಲ್ಲಾ ಅವರಿಗೆ ಕಳಿಸಿದ್ದು, ಅವರು ಟ್ವೀಟ್‌ ಮಾಡಿದ್ದಾರೆ.

Scroll to load tweet…

ಅಲ್ಲದೆ ಜನರು ಲಾಕ್‌ಡೌನ್‌ ಸಮಯದಲ್ಲಿ ಫಿಟ್‌ ಆಗಿರಲು ಯೋಗ ಮಾಡಿ ಎಂದು ಬರೆದು ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್‌ ನಟ ಅಕ್ಷಯ್‌ ಕುಮಾರ ಅವರನ್ನು ಟ್ಯಾಗ್‌ ಮಾಡಿದ್ದರು. ಇದನ್ನು ಗಮನಿಸಿದ ಪ್ರಧಾನಿ ರಿಟ್ವಿಟ್‌ ಮಾಡಿದ್ದಾರೆ. ಅಲ್ಲದೆ ‘ಗ್ರೇಟ್‌, ಸ್ಟೇ ಹೋಂ ಸ್ಟೇ ಹೆಲ್ದಿ ಆ್ಯಂಡ್‌ ಫಿಟ್‌’ ಎಂದು ಬರೆದರು. ಅದನ್ನು 2.41 ಲಕ್ಷ ಮಂದಿ ವೀಕ್ಷಣೆ ಮಾಡಿದ್ದು 2,943 ಮಂದಿ ರಿಟ್ವೀಟ್‌ ಮಾಡಿ 26 ಸಾವಿರ ಮಂದಿ ಲೈಕ್‌ ಮಾಡಿದ್ದಾರೆ.

ಇಫ್ರಾ ಮುಲ್ಲಾ ಓರಿಯಂಟಲ್‌ ಸ್ಕೂಲ್‌ನಲ್ಲಿ ಒಂದನೇ ತರಗತಿ ಮುಗಿಸಿ ಎರಡನೇ ತರಗತಿಗೆ ಹೋಗುತ್ತಿದ್ದಾಳೆ. ಶಾರೀರಿಕ ಶಿಕ್ಷಣ ಮತ್ತು ಯೋಗವನ್ನು ಬಹಳ ಇಷ್ಟ ಪಡುತ್ತಾಳೆ. ಶನಿವಾರ ಶಾಲೆಯಲ್ಲಿ ಯೋಗ ತರಗತಿಯನ್ನು ಒಂದು ದಿನ ಕೂಡ ತಪ್ಪಿಸುವುದಿಲ್ಲ. ಯೋಗ ತರಗತಿ ಮೂಲಕ ಕಲಿಯದಿದ್ದರೂ ಸ್ವ ಆಸಕ್ತಿಯಿಂದ ಟಿವಿ ನೋಡಿ, ವಿಡಿಯೊ ನೋಡಿ ಮಾಡುತ್ತಾಳೆ ಎಂದು ಬಾಲಕಿ ತಂದೆ ಇಮ್ತಿಯಾಜ್‌ ಅಹಮದ್‌ ಮುಲ್ಲಾ ಹೇಳುತ್ತಾರೆ.ಇವರು ಹುಬ್ಬಳ್ಳಿಯಲ್ಲಿ ನೈರುತ್ವ ರೈಲ್ವೆ ಪ್ರಧಾನ ಮುಖ್ಯ ವೈದ್ಯಕೀಯ ನಿರ್ದೇಶಕರ ಕಚೇರಿಯಲ್ಲಿ ಸೂಪರಿಂಟೆಂಡೆಂಟ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಹುಬ್ಬಳ್ಳಿ ಸೋಂಕಿತನ ಬೆಚ್ಚಿಬೀಳಿಸುವ ಟ್ರಾವೆಲ್ ಹಿಸ್ಟರಿ, ಯಲ್ಲಾಪುರದಲ್ಲಿಯೂ ಆತಂಕ

ನನ್ನ ಮಗಳಿಗೆ ಇದರಿಂದ ಜನಪ್ರಿಯತೆ ಸಿಕ್ಕಿದ್ದು ನಮ್ಮ ಇಡೀ ಕುಟುಂಬಕ್ಕೆ ಸಂತೋಷವಾಗಿದೆ. ಈಗ ನನ್ನ ದೊಡ್ಡ ಮಗಳು ಸಹ ವಿಡಿಯೊ ಮಾಡಿ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿ ಪ್ರಧಾನಿ ಮೋದಿ ಅದನ್ನು ಹಂಚಿಕೊಳ್ಳುವಂತೆ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾಳೆ ಎಂದು ಇಮ್ತಿಯಾಜ್‌ ಅಹಮದ್‌ ಮುಲ್ಲಾ ಅವರು ಹೇಳಿದ್ದಾರೆ.