Asianet Suvarna News Asianet Suvarna News

Raichur: ಬಿಸಿಲುನಾಡಿನಲ್ಲಿ ಸಾಹಿತ್ಯಶ್ರೀ ಪ್ರಶಸ್ತಿ ಸಮಾರಂಭ: ಕೃಷಿ ವಿವಿ ಸಭಾಂಗಣದಲ್ಲಿ ಸಮಾರಂಭ

ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಆಯೋಜನೆ ಮಾಡಿದ ಗೌರವ ಪ್ರಶಸ್ತಿ ಹಾಗೂ ಸಾಹಿತ್ಯಶ್ರೀ ಪ್ರಶಸ್ತಿ ಸಮಾರಂಭಕ್ಕೆ ಎಂಎಲ್‌ಸಿ ರವಿಕುಮಾರ್ ಚಾಲನೆ ನೀಡಿದರು.

karnataka sahitya academy award program in raichur gvd
Author
Bangalore, First Published Jun 13, 2022, 11:33 PM IST

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು

ರಾಯಚೂರು (ಜೂ.13): ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಆಯೋಜನೆ ಮಾಡಿದ ಗೌರವ ಪ್ರಶಸ್ತಿ ಹಾಗೂ ಸಾಹಿತ್ಯಶ್ರೀ ಪ್ರಶಸ್ತಿ ಸಮಾರಂಭಕ್ಕೆ ಎಂಎಲ್‌ಸಿ ರವಿಕುಮಾರ್ ಚಾಲನೆ ನೀಡಿದರು. ಆ ಬಳಿಕ ಸಮಾರಂಭ ಉದ್ದೇಶಿಸಿ ಮಾತನಾಡಿದ ರವಿಕುಮಾರ್ ರಾಜ್ಯದಲ್ಲಿ ಪಠ್ಯ ಪುಸ್ತಕದ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಇದರ ಬಗ್ಗೆ ಸಾಹಿತಿಗಳು ಬೆಳಕು ಚೆಲ್ಲುವ ಕೆಲಸ ಆಗಬೇಕು. ಸಾಹಿತ್ಯ ಆತಂಕ ಮತ್ತು ಬಾಹ್ಯ ಶುದ್ದೀಕರಣಕ್ಕೆ ಸಹಾಯವಾಗಿದೆ. ಶಾಸಕರ ಕ್ಷೇತ್ರಕ್ಕೆ ‌ನೀಡುವಷ್ಟು ಅನುದಾನವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ನೀಡಲು ನಾನು ಸಿಎಂ ಅವರ ಗಮನಕ್ಕೆ ತರುವ ಪ್ರಯತ್ನವನ್ನು ಮಾಡುವೆ ಎಂದ ಎಂಎಲ್ ಸಿ ರವಿಕುಮಾರ್ ಹೇಳಿದರು. 

ಐದು ಜನ ಸಾಹಿತಿಗಳಿಗೆ ಗೌರವ ಪ್ರಶಸ್ತಿ: 2021ನೇ ಸಾಲಿನಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಜಿನದತ್ತ ದೇಸಾಯಿ, ಡಾ.ನಾ ಮೊಗಸಾಲೆ, ಡಾ.ಸರಸ್ವತಿ ಚಿಮ್ಮಲಗಿ, ಡಾ. ಬಸವರಾಜ್ ಕಲ್ಗುಡಿ ಹಾಗೂ ಯಲ್ಲಪ್ಪ.ಕೆ.ಕೆ.ಪುರ ಅವರಿಗೆ ವೇದಿಕೆ ಮೇಲೆ ಗಣ್ಯರು ಸನ್ಮಾನಿಸಿ ಗೌರವಿಸಿದರು.

ಅಕ್ರಮ ಮರಳಿಗೆ ಬ್ರೇಕ್ ಹಾಕುವಂತೆ 89ರ ಅಜ್ಜನ ಹೋರಾಟ!

10 ಜನರಿಗೆ ಸಾಹಿತ್ಯಶ್ರೀ ಪ್ರಶಸ್ತಿ: ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ 2021ನೆಯ ವರ್ಷದ ಸಾಹಿತ್ಯಶ್ರೀ ಪ್ರಶಸ್ತಿಯನ್ನ ಡಾ.ಚಂದ್ರಕಲಾ ಬಿದರಿ, ಪ್ರೊ.ಎಂ.ಎನ್‌. ವೆಂಕಟೇಶ್ , ಡಾ. ಚನ್ನಬಸವಯ್ಯ ಹಿರೇಮಠ, ಡಾ.ಮ ರಾಮಕೃಷ್ಣ, ಅಬ್ದುಲ್ ರಶೀದ್, ಡಾ.ವೈ.ಎಂ. ಭಜಂತ್ರಿ, ಕನ್ನಡಪ್ರಭ ಪುರವಣಿ ವಿಭಾಗದ ಸಂಪಾದಕರಾದ ಶ್ರೀ ಜೋಗಿ (ಗಿರೀಶ್ ಹಲ್ವಾರ್),  ಮೈಸೂರು ಕೃಷ್ಣಮೂರ್ತಿ, ಗಣೇಶ ಅಮೀನಗಡ ಹಾಗೂ ಆಲೂರು ದೊಡ್ಡನಿಂಗಪ್ಪ ಅವರಿಗೆ ಗಣ್ಯರು ಪ್ರಶಸ್ತಿ ನೀಡಿ ಗೌರವಿಸಿದರು.

19 ಸಾಹಿತಿಗಳಿಗೆ 2020ನೆಯ ವರ್ಷದ ಪುಸ್ತಕ ಬಹುಮಾನ ವಿತರಣೆ: ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ 19ಸಾಹಿತಿಗಳಿಗೆ 2020ನೇ ಸಾಲಿನ ಪುಸ್ತಕ ಬಹುಮಾನ ವಿತರಣೆ ಮಾಡಿ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ವೇದಿಕೆ ಮೇಲೆ 19 ಸಾಹಿತಿಗಳ ಪರಿಚಯ ಮತ್ತು ಕ್ಷೇತ್ರಕ್ಕೆ ಅವರ ನೀಡಿದ ಕೊಡುಗೆಗಳ ಪರಿಚಯ ಮಾಡಿಸಲಾಯಿತು.

10 ಪುಸ್ತಕಗಳಿಗೆ 2020ನೆಯ ವರ್ಷದ ಪುಸ್ತಕ ದತ್ತಿ ಬಹುಮಾನ: ಕರ್ನಾಟಕ ಸಾಹಿತ್ಯ ಅಕಾಡೆಮಿ ‌ನೀಡುವ 2020ನೆಯ ವರ್ಷದ ಪುಸ್ತಕ ದತ್ತಿ ಬಹುಮಾನಕ್ಕೆ 10 ಪುಸ್ತಕಗಳು ಆಯ್ಕೆ ಆಗಿವೆ..ಪದ್ಮಜಾ ಜಯತೀರ್ಥ ಉಮರ್ಜಿ ಬರೆದ ಬೆಳದಿಂಗಳ ಚೆಲುವು, ಎಂ.ಎಸ್. ವೇದಾ ಅವರು ಬರೆದ ದೊಡ್ಡತಾಯಿ, ಆರುತಿ ಘಟಿಕಾರ್ ಬರೆದ ವಠಾರ ಮೀಮಾಂಸೆ, ಪುರುಷೋತ್ತಮ ಬಿಳಿಮಲೆ ಬರೆದ ಕಾಗೆ ಮುಟ್ಟಿದ ನೀರು, ತಾರಿಣಿ ಶುಭದಾಯಿನಿ ಅವರ ಕುವೆಂಪು ಸ್ತ್ರೀ ಸಂವೇದನೆ, ಪದ್ಮರಾಜ ದಂಡಾವತಿ ಬರೆದ ಸೀತಾ, ಕುಶ್ವಂತ್ ಕೋಳಿಬೈಲು ಬರೆದ ಕೃತಿ ಕೂರ್ಗ್ ರೆಜಿಮೆಂಟ್ , ಕೆ.ಎಂ.ಶ್ರೀನಿವಾಸ್ ಗೌಡ ಹಾಗೂ ಜಿ.ಕೆ. ಶ್ರೀಕಂಠ ಮೂರ್ತಿ ಅವರ The Bride In The Rainy Mountains, ನಡಹಳ್ಳಿ ವಸಂತ್ ಅವರ ಕೃತಿಯಾದ ಸಮರಸದ ದಾಂಪತ್ಯ ಹಾಗೂ ಶ್ರೀನಿವಾಸ್ ಸಿರನೂರಕರ್ ಅವರ ಪುರಂದರದಾಸರ ಬಂಡಾಯ ಪ್ರಜ್ಞೆ ಕೃತಿಗೆ ದತ್ತಿ ಬಹುಮಾನ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

Raichur: ಕತ್ತೆ ಕಿರುಬನ ಕೊಂದ ಕೇಸ್‌: ಒಬ್ಬನ ಬಂಧನ

ಸಾಹಿತಿಗಳಿಗೆ ಪ್ರಶಸ್ತಿ ವಿತರಿಸಿದ ಬಳಿಕ ವೇದಿಕೆ ಉದ್ದೇಶಿಸಿ ಮಾತನಾಡಿದ ಹಿರಿಯ ಸಾಹಿತಿ ಎಚ್. ಎಸ್. ಶಿವಪ್ರಕಾಶ್. ಕನ್ನಡದಲ್ಲಿ ಪ್ರತಿಭೆಗಳು ವೈವಿಧ್ಯಮಯವಾಗಿವೆ. ಕನ್ನಡದ ನಾನಾ ಕಡೆಯಲ್ಲಿ ‌ಸಾಹಿತ್ಯವನ್ನು ಪರಿಗಣಿಸಿ ಅವರಿಗೆ ಗೌರವಿಸಲಾಗಿದೆ. ಬೇರೆ ಬೇರೆ ದೇಶದಲ್ಲಿ ಜೈಲು, ಆಸ್ಪತ್ರೆ ಮತ್ತು ಶಾಲಾ - ಕಾಲೇಜಿನಲ್ಲಿ ಸಾಹಿತ್ಯ ಕಾರ್ಯಕ್ರಮ ನಡೆಯುತ್ತವೆ. ಎಲ್ಲರ ಮನಸ್ಸಿನ ಸ್ವಾಸ್ಥ್ಯ ವನ್ನು ಕಾಪಾಡಲು ಸಾಹಿತ್ಯ ಬೇಕು. ಸಮಗ್ರ ಜನರನ್ನು ಒಳಗೊಂಡ ಸಾಹಿತ್ಯ ಕೇವಲ ಭಾರತದಲ್ಲಿ ಮಾತ್ರ ನೋಡಲು ಸಿಗುತ್ತೆ. ಕಾಲಕಾಲಕ್ಕೆ ತಕ್ಕಂತೆ ಸಾಹಿತ್ಯ ಕೂಡ ಬದಲಾಗಿದೆ ಎಂದು ತಿಳಿಸಿದರು. ಇನ್ನೂ ವೇದಿಕೆ ಮೇಲೆ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮತ್ತು ಆರ್‌ಡಿ ಎ ಅಧ್ಯಕ್ಷ ತಿಮ್ಮಪ್ಪ ನಾಡಗೌಡ ಸೇರಿದಂತೆ ಹತ್ತಾರು ಜಿಲ್ಲೆಯ ನೂರಾರು ಸಾಹಿತಿಗಳು ಭಾಗವಹಿಸಿದ್ದರು.

Follow Us:
Download App:
  • android
  • ios