ಹೆದ್ದಾರೀಲಿ ರಾಜಕೀಯ ಪುಡಾರಿಗಳ ಪುಂಡಾಟ: ಟೋಲ್ ಕಟ್ಟದೇ ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯ ವರ್ತನೆ

ಎಲ್ಲಾ ಘಟನೆಗಳ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ ಟೋಲ್ ಸಿಬ್ಬಂದಿ ತಡವಾಗಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
 

Rude behavior with female staff without paying toll at Srirangapatna in Mandya grg

ಶ್ರೀರಂಗಪಟ್ಟಣ(ನ.23):  ಟೋಲ್ ಕಟ್ಟದೆ ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಗಣಂಗೂರು ಗ್ರಾಮದ ಬಳಿಯ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್‌ನಲ್ಲಿ ನಡೆದಿದೆ. 

ಬೆಂಗಳೂರು ಮೂಲದ ಮಹಮ್ ಆಸಿಮ್ ಇಟ್ಬಾಲ್ ಎಂಬ ವ್ಯಕ್ತಿ ಮೈಸೂರು ಕಡೆಗೆ ತನ್ನ ಕಾರಿ(KA 06 M -8164) ನಲ್ಲಿ ಹೊರಟಿದ್ದರು. ಗಣಂಗೂರು ಬಳಿ ಟೋಲ್ ಕಟ್ಟುವ ವಿಚಾರದಲ್ಲಿ ಟೋಲ್ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆದಿದೆ. 

ನಂತರ ಟೋಲ್ ಸಿಬ್ಬಂದಿ ಸಿಂಚನ ಹಾಗೂ ಕಾರಿನಲ್ಲಿದ್ದ ಸುಮೈದ ಎಂಬ ಮಹಿಳೆಯೊಂದಿಗೆ ವಾಗ್ವಾದ ನಡೆದಿದೆ. ಈ ವೇಳೆ ನಾನೊಬ್ಬ ಕಾಂಗ್ರೆಸ್ ಮುಖಂಡ ನನ್ನ ಬಳಿ ಹಣ ಕೇಳುತ್ತೀಯ ಎಂದು ಕಾರಿನಲ್ಲಿದ್ದ ಮಹಮ್ ಆಸಿಮ್ ಇಟ್ಬಾಲ್ ಎಂಬ ವ್ಯಕ್ತಿ ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಆದರೂ ಟೋಲ್ ಮಹಿಳಾ ಸಿಬ್ಬಂದಿ ಸಿಂಚನ ಹಣ ಕಟ್ಟಿ ಮುಂದೆ ಹೋಗುವಂತೆ ಹೇಳಿದ್ದಾರೆ. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಸುಮೈದಾ ಹಾಗೂ ಆ ವ್ಯಕ್ತಿ ಮಹಿಳಾ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ಅಲ್ಲದೇ ಮಹಿಳೆ ಟೋಲ್‌ನ ಮಹಿಳಾ ಸಿಬ್ಬಂದಿಯ ಜುಟ್ಟು ಹಿಡಿದು ಎಳೆದಾಡಿದ್ದಾಳೆ ಎನ್ನಲಾಗಿದೆ. 

ಕಾರು ಚಾಲಕ ಸೇರಿದಂತೆ ಕಾರಿನೊಳಗಿದ್ದ ಇತರರು ಅದಕ್ಕೆ ನಕಾರ ವ್ಯಕ್ತಪಡಿಸಿದ್ದು, ಈ ಎಲ್ಲಾ ಘಟನೆಗಳ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ ಟೋಲ್ ಸಿಬ್ಬಂದಿ ತಡವಾಗಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಈ ಕೆಲಸ ಮಾಡಿದ್ರೆ, ಟೋಲ್‌ ಪ್ಲಾಜಾದಲ್ಲಿ ಹಣ ಕಟ್ಟದೆ ಎಷ್ಟು ಬಾರಿ ಬೇಕಾದ್ರೂ ತಿರುಗಾಡಬಹುದು!

ರಾಷ್ಟ್ರೀಯ ಹೆದ್ದಾರಿಗಳು ಮತ್ತು ಕೆಲವು ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾಗಳನ್ನು ಸ್ಥಾಪಿಸಿ ಕೇಂದ್ರ ಸರ್ಕಾರ ತೆರಿಗೆ ಸಂಗ್ರಹಿಸುತ್ತದೆ. ಈ ರಸ್ತೆಗಳಲ್ಲಿ ಪ್ರಯಾಣಿಸುವ ವಾಹನಗಳು ಟೋಲ್ ತೆರಿಗೆ ಪಾವತಿಸಬೇಕು. ಈ ಟೋಲ್ ತೆರಿಗೆಗಳು ವಾಹನದ ಪ್ರಕಾರ ಬದಲಾಗುತ್ತವೆ.

ಟೋಲ್ ಪ್ಲಾಜಾಗಳಿಂದ ಪ್ರತಿ ತಿಂಗಳು ಸಾವಿರಾರು ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗುತ್ತದೆ. ಈ ಬೃಹತ್ ಮೊತ್ತದ ಆಧಾರದ ಮೇಲೆ ಕೇಂದ್ರ ಸರ್ಕಾರ ಹಲವಾರು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ನಿಮ್ಮ ಮನೆಯ ಹತ್ತಿರ ಟೋಲ್ ಪ್ಲಾಜಾ ಇದೆಯೇ? ಪ್ರತಿ ಕೆಲಸಕ್ಕೂ ಟೋಲ್ ಪ್ಲಾಜಾ ದಾಟಬೇಕಾಗುತ್ತದೆಯೇ? ಹೀಗೆ ಹೋದಾಗಲೆಲ್ಲಾ ನಿಮ್ಮ ವಾಹನದಿಂದ ಟೋಲ್ ಶುಲ್ಕ ಕಡಿತವಾಗುತ್ತಿದೆಯೇ?

ಟೋಲ್ ಪ್ಲಾಜಾದಿಂದ ನೀವು ಉಚಿತವಾಗಿ ಪ್ರಯಾಣಿಸಬೇಕೆಂದರೆ, ಮೊದಲು ನಿಮ್ಮ ಮನೆಗೆ 20 ಕಿ.ಮೀ. ದೂರದಲ್ಲಿರುವ ಟೋಲ್ ಪ್ಲಾಜಾಗೆ ಭೇಟಿ ನೀಡಿ ನಿಮ್ಮ ಸ್ಥಳೀಯ ವಿಳಾಸದ ಪುರಾವೆಯನ್ನು ತೋರಿಸಬೇಕು. ಸ್ಥಳೀಯ ಟ್ಯಾಗ್ ಅಥವಾ ಲೋಕಲ್‌ ಟ್ಯಾಗ್‌  ಪಡೆಯಲು ನೀವು ಪ್ರತಿ ತಿಂಗಳು ಸುಮಾರು 250 ರಿಂದ 400 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಟೋಲ್ ಪ್ಲಾಜಾವನ್ನು ಅವಲಂಬಿಸಿ ಈ ಮೊತ್ತ ಬದಲಾಗುತ್ತದೆ.

Latest Videos
Follow Us:
Download App:
  • android
  • ios