Asianet Suvarna News Asianet Suvarna News

Karnataka Politics : 30ಕ್ಕೂ ಹೆಚ್ಚು ಮುಖಂಡರು ಜೆಡಿಎಸ್‌ಗೆ ಸೇರ್ಪಡೆ

ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರದಲ್ಲಿ ಇಲ್ಲದಿದ್ದರೂ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಕ್ಷೇತ್ರದಲ್ಲಿ ಅತ್ಮಸಾಕ್ಷಿ ಒಪ್ಪುವಂತೆ ಕೆಲಸ ಮಾಡಿದ್ದೇನೆ ಎಂದು ಶಾಸಕ ಎಂ. ಅಶ್ವಿನ್‌ಕುಮಾರ್‌ ಹೇಳಿದರು.

Karnataka Politics : More than 30 leaders join JDS snr
Author
First Published Jan 3, 2023, 6:09 AM IST

 ಟಿ. ನರಸೀಪುರ (ಜ.03):  ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರದಲ್ಲಿ ಇಲ್ಲದಿದ್ದರೂ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಕ್ಷೇತ್ರದಲ್ಲಿ ಅತ್ಮಸಾಕ್ಷಿ ಒಪ್ಪುವಂತೆ ಕೆಲಸ ಮಾಡಿದ್ದೇನೆ ಎಂದು ಶಾಸಕ ಎಂ. ಅಶ್ವಿನ್‌ಕುಮಾರ್‌ ಹೇಳಿದರು.

ತಾಲೂಕಿನ ಹೊರಳಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರ್ಪಡೆಗೊಂಡ 30ಕ್ಕೂ ಹೆಚ್ಚು ಕುರುಬ ಜನಾಂಗದ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.

ಕ್ಷೇತ್ರಕ್ಕೆ ನಾನ್ಯಾರು ಎಂದು ಗೊತ್ತಿಲ್ಲದ ವೇಳೆ ಹೊಸ ಮುಖಬೇಕೆಂದು ಜಿಪಂ ಸದಸ್ಯನಾಗಿದ್ದ ನನಗೆ ಅವಕಾಶ ಕಲ್ಪಿಸಿಕೊಟ್ಟರಿ, ನನ್ನ ಮೇಲೆ ವಿಶ್ವಾಸವಿಟ್ಟು ಶಾಸಕನಾಗಿ ಆಯ್ಕೆ ಮಾಡಿದ ನಿಮ್ಮ ಗೌರವಕ್ಕೆ ಚ್ಯುತಿ ಬರದಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಾ ಬಂದಿದ್ದೇನೆ. ಆ ಮೂಲಕ ಕ್ಷೇತ್ರದ ಗೌರವ ಕಾಪಾಡಿಕೊಂಡಿದ್ದು, ಕೋವಿಡ್‌, ಪ್ರವಾಹ ಸಂದರ್ಭದಲ್ಲಿ ನಮ್ಮ ಸರ್ಕಾರ ಇಲ್ಲದಿದ್ದರೂ ಅತಿ ಹೆಚ್ಚಿನ ಅನುದಾನದೊಂದಿಗೆ ಕ್ಷೇತ್ರದಲ್ಲಿ ಸಾಕಷ್ಟುಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ ಎಂದರು.

ಕ್ಷೇತ್ರದಲ್ಲಿ ಜೆಡಿಎಸ್‌ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿದ್ದು, ಮನಸ್ತಾಪ ಮಾಡಿಕೊಳ್ಳಬೇಡಿ, ಅಕಸ್ಮಾತ್‌ ಇದಲ್ಲಿ ನನ್ನ ಗಮನಕ್ಕೆ ತನ್ನಿ, ನಾವೇ ಮನಸ್ತಾಪ ಬಗೆಹರಿಸಿಕೊಳ್ಳುತ್ತೇವೆಂದು ಎಂದು ಗೊಂದಲ ಮಾಡಿಕೊಳ್ಳಬೇಡಿ ಎಂದು ತಿಳಿಸಿದರು.

ಸಂಪರ್ಕ ರಸ್ತೆಗಳ ನಿರ್ಮಾಣಕ್ಕೆ ಕೇಂದ್ರದ ಆದ್ಯತೆ: ಸಂಸದ ರಾಜಾ ಅಮರೇಶ್ವರ ನಾಯಕ

ರೇಷ್ಮೆ ಇಲಾಖೆ ನಿವೃತ್ತ ನೌಕರ ಪುಟ್ಟಸ್ವಾಮಪ್ಪ, ಗ್ರಾಪಂ ಸದಸ್ಯ ಭಾಗ್ಯ, ಮಹದೇವಯ್ಯ, ಹಾಲು ಉತ್ಪಾದಕರ ಸಹಕಾರ ಸಂಘ ನಿರ್ದೇಶಕ ಜಯರಾಮು, ಶಿವಮಲ್ಲಯ್ಯ, ಗುಗ್ಗಮಲ್ಲಯ್ಯ, ಮಧು, ಪುಟ್ಟಸ್ವಾಮಿ, ರಾಜಣ್ಣ, ನಾರಾಯಣ ,  ರಮೇಶ್‌, ಮಹದೇಸ್ವಾಮಿ, ಮಂಜೇಶ…, ಶಿವಲಿಂಗಯ್ಯ, ನಂಜೇಗೌಡ, ದಶಕಂಠ, ಮಹಾದೇವು, ಪ್ರಶಾಂತ್‌, ಶಶಿಧರ್‌, ರಮೇಶ್‌, ಪ್ರಸನ್ನ ಅವರು ಕಾಂಗ್ರೆಸ್‌ ತೊರೆದು ಶಾಸಕ ಎಂ. ಅಶ್ವಿನ್‌ಕುಮಾರ್‌ ಸಮ್ಮುಖದಲ್ಲಿ ಜೆಡಿಎಸ್‌ ಸೇರ್ಪಡೆಗೊಂಡರು.

ಜಿಪಂ ಮಾಜಿ ಅಧ್ಯಕ್ಷ ಎಸ್‌.ಎನ್‌. ಸಿದ್ದಾರ್ಥ, ಎ ಪಿ ಎಂ ಸಿ ಮಾಜಿ ಉಪಾಧ್ಯಕ್ಷ ಮಹದೇವಯ್ಯ, ಕುರುಬ ಸಮುದಾಯದ ಹಿರಿಯ ಮುಖಂಡ ಶಿವಮೂರ್ತಿ, ಗ್ರಾಪಂ ಮಾಜಿ ಅಧ್ಯಕ್ಷ ಕುಮಾರ್‌, ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಗುರುರಾಜ…, ಕ್ಷೇತ್ರ ಜೆಡಿಎಸ್‌ ಅಧ್ಯಕ್ಷರು, ಸಿ.ಬಿ. ಹುಂಡಿ ಚಿನ್ನಸ್ವಾಮಿ, ಡ್ರಾಮಾ ಮಾಸ್ಟರ್‌ ನಿಂಗರಾಜು, ಪಶು ಸಂಗೋಪನಾ ಇಲಾಖೆಯ ನಂಜಯ್ಯ, ಮಹದೇವಯ್ಯ, ಗ್ರಾಪಂ ಸದಸ್ಯ ಶಿವು, ಭಾಗ್ಯ, ಕಸಬಾ ಪಿಎಎಸ್‌ ಮಾಜಿ ಅಧ್ಯಕ್ಷ ಮಾದಯ್ಯ, ಉಪ್ಪಾರ ಮಹಾಭಾ ಅಧ್ಯಕ್ಷ ರಾಮಶೆಟ್ಟಿಇದ್ದರು.

ಹುಟ್ಟುಹಬ್ಬದಂದೇ ಕಣ್ಣೀರಿಟ್ಟ ನಾಯಕಿ

ಭದ್ರಾವತಿ  : ವಿಧಾನಸಭಾ ಕ್ಷೇತ್ರದ ಜೆಡಿ​ಎಸ್‌ ಅಭ್ಯರ್ಥಿ ಶಾರದ ಅಪ್ಪಾಜಿಗೌಡ ಹುಟ್ಟುಹಬ್ಬ ಪಕ್ಷದ ಜಿಲ್ಲಾ ಯುವ ಘಟಕ, ವಿವಿಧ ಸಂಘಟನೆಗಳಿಂದ, ಅಭಿಮಾನಿಗಳಿಂದ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಭಾನುವಾರ ಅದ್ಧೂರಿಯಾಗಿ ನಡೆಯಿತು. ಬೆಳಗ್ಗೆ ಅಪ್ಪಾಜಿಗೌ​ಡರ ನಿವಾಸದಲ್ಲಿ ಪಕ್ಷದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಧುಕುಮಾರ್‌ ನೇ​ತೃತ್ವದಲ್ಲಿ ಹುಟ್ಟುಹಬ್ಬ ಆಚರಿಸಲಾಯಿತು. ಸಾವಿರಾರು ಮಂದಿಗೆ ಲಾಡು ವಿತರಿಸಲಾಯಿತು. ಅನಂತರ ಕೆಎಸ್‌ಆರ್‌ಟಿಸಿ ಮುಖ್ಯ ಬಸ್‌ ನಿಲ್ದಾಣ ಮುಂಭಾಗ ಆಟೋ ಚಾಲಕರು ಹಮ್ಮಿಕೊಂಡಿದ್ದ ಹುಟ್ಟುಹಬ್ಬದಲ್ಲಿ ಪಾಲ್ಗೊಂಡ ಶಾರದ ಅಪ್ಪಾಜಿ ಕೇಕ್‌ ಕತ್ತರಿಸಿ ಸಂಭ್ರಮ ಹಂಚಿಕೊಂಡರು. ಇಲ್ಲೂ ಲಾಡು ವಿತರಿಸಲಾಯಿತು.

ಬಿಜೆಪಿ ಬಗ್ಗೆ ಮಾತನಾಡುವದಕ್ಕಿಂತ ಡಿಕೆಶಿ ತಮ್ಮ ಪಕ್ಷ ಸರಿಮಾಡಿಕೊಳ್ಳಲಿ: ಸಚಿವ ನಾಗೇಶ್

ಕಣ್ಣೀರಿಟ್ಟ ಶಾರದ ಅಪ್ಪಾಜಿಗೌಡ: ಶಾರದ ಅಪ್ಪಾಜಿಗೌಡ ಮಾತ​ನಾ​ಡಿ, ಮಾಜಿ ಶಾಸಕ ಎಂ.ಜೆ. ಅಪ್ಪಾಜಿಗೌಡ ಅವರ ಮೇಲೆ ಕ್ಷೇತ್ರದ ಜನರು ಹೊಂದಿರುವ ಅಭಿಮಾನ, ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಪ್ಪಾಜಿ ಅವರು ಕೈಗೊಂಡಿರುವ ಜನಪರ ಕಾರ್ಯಗಳು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿವೆ. ಅವರೊಂದಿಗೆ ಇದ್ದು, ಎಲ್ಲ ರೀತಿಯಲ್ಲೂ ಬೆಳವಣಿಗೆಯೊಂದಿದ ಬಹಳಷ್ಟುಮಂದಿ ಇಂದು ಅವರಿಗೆ ದ್ರೋಹ ಬಗೆಯುವ ಕೆಲಸದಲ್ಲಿ ತೊಡಗಿದ್ದಾರೆ. ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆಂದು ಹೇಳುವ ಮೂಲಕ ಶಾರದ ಅಪ್ಪಾಜಿ ಕಣ್ಣೀರಿಟ್ಟರು. ಕ್ಷೇತ್ರದ ಮತದಾರರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಯಾವುದೇ ರೀತಿಯ ಅಪಪ್ರಚಾರಗಳಿಗೆ ಕಿವಿಗೊಡಬಾರದು. ಮುಂಬರುವ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದರು.

Follow Us:
Download App:
  • android
  • ios