Asianet Suvarna News Asianet Suvarna News

Karnataka Politics : ಕೆಆರ್‌ಪಿಪಿ ಪ್ರಣಾಳಿಕೆ ಬಿಡುಗಡೆ : ಏನೇನ್ ಸೌಲಭ್ಯ?

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ತಾಲೂಕಿನಲ್ಲಿ ಹೆಚ್ಚು ಸಂಘಟನೆಯಾಗುತ್ತಿದ್ದು ಏ.2ರಂದು ಬೆಳಿಗ್ಗೆ 7.30ಕ್ಕೆ ತಾಲೂಕಿನ ಅರಳೀಕುಂಟೆ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕೆಆರ್‌ಪಿಪಿಯ ಅಭಿವೃದ್ಧಿ ವಿಚಾರ ಕುರಿತು ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಾಲೂಕು ಕೆಆರ್‌ಪಿಪಿ ಅಭ್ಯರ್ಥಿ ನೆರಳೇಕುಂಟೆ ನಾಗೇಂದ್ರ ಕುಮಾರ್‌ ತಿಳಿಸಿದ್ದಾರೆ.

Karnataka Politics KRPP manifesto will release on April 2   snr
Author
First Published Apr 2, 2023, 5:18 AM IST

ಪಾವಗಡ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ತಾಲೂಕಿನಲ್ಲಿ ಹೆಚ್ಚು ಸಂಘಟನೆಯಾಗುತ್ತಿದ್ದು ಏ.2ರಂದು ಬೆಳಿಗ್ಗೆ 7.30ಕ್ಕೆ ತಾಲೂಕಿನ ಅರಳೀಕುಂಟೆ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕೆಆರ್‌ಪಿಪಿಯ ಅಭಿವೃದ್ಧಿ ವಿಚಾರ ಕುರಿತು ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಾಲೂಕು ಕೆಆರ್‌ಪಿಪಿ ಅಭ್ಯರ್ಥಿ ನೆರಳೇಕುಂಟೆ ನಾಗೇಂದ್ರ ಕುಮಾರ್‌ ತಿಳಿಸಿದ್ದಾರೆ.

ಈ ಕುರಿತು ಶನಿವಾರ ಸುದ್ದಿಗಾರರ ಜತೆ ಮಾತನಾಡಿ, ಜನ ಬೆಂಬಲ ಹಾಗೂ ಮತದಾರರ ತೀರ್ಪಿನ ಮೇರೆಗೆ ಮೇ 15ರ ಚುನಾವಣೆಯ ಫಲಿಶಾಂತ ಕೆಆರ್‌ಪಿಪಿ ಪರ ಜಯ ಮೊಳಗಲಿದ್ದು, ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಜನಪರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಕೆಲಸ ಮಾಡಲಿದ್ದೇವೆ. ಹೀಗಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ತಾಲೂಕಿನಲ್ಲಿ ಅನುಷ್ಠಾನಕ್ಕೆ ತರುವ ಜನಪರವಾದ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಪ್ರಣಾಳಿಕೆಯ ಕರಪತ್ರ ಬಿಡುಗಡೆಗೊಳಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಕಾರ್ಯಕರ್ತರಿಗೆ ಅವರು ಮನವಿ ಮಾಡಿದ್ದಾರೆ.

ಹಿಂದಿನ ಪ್ರಣಾಳಿಕೆ

ಬೆಂಗಳೂರು (ಮಾ.27): ಕಳೆದ 3 ತಿಂಗಳ ಹಿಂದೆ ಸ್ಥಾಪಿಸಲಾದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಸಂಸ್ಥಾಪಕ ಅಧ್ಯಕ್ಷ ಜನಾರ್ಧನ ರೆಡ್ಡಿ ಇಂದು ಬೆಂಗಳೂರಿನಲ್ಲಿ ಪಕ್ಷದ ಅಧಿಕೃತ 'ಫುಟ್ಬಾಲ್‌' ಚಿಹ್ನೆ ಹಾಗೂ 'ಪ್ರಣಾಳಿಕೆ'ಯನ್ನು ಬಿಡುಗಡೆ ಮಾಡಿದರು.

ಈ ಕುರಿತು ಬೆಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಪಕ್ಷದ ಚಿಹನೆಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಈ ವೇಳೆ ಮಾತನಾಡಿದ ಅವರು, 2022ರ ಡಿಸೆಂಬರ್ 25 ರಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಘೋಷಣೆ ಮಾಡಲಾಗಿತ್ತು. ಪಕ್ಷಕ್ಕೆ ಎಲ್ಲಾ ಕಡೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ರಾತ್ರಿ 2 ಗಂಟೆಯಾದರೂ ನಮಗೆ ಗ್ರಾಮೀಣ ಪ್ರದೇಶಗಳಲ್ಲಿ ಜನ ಕಾಯುತ್ತಿದ್ದಾರೆ. 12 ಅಭ್ಯರ್ಥಿಗಳ ಪಟ್ಟಿ ಈಗಾಗಲೇ ಘೋಷಣೆ ಆಗಿದೆ. ಕೆಲವೇ ದಿನಗಳಲ್ಲಿ ಇನ್ನೂ 19 ಕ್ಷೇತ್ರದ ಅಭ್ಯರ್ಥಿ ಘೋಷಣೆ ಆಗಲಿದೆ. ಇಂದು ಪಕ್ಷದ ಚಿಹ್ನೆ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

 

ನನ್ನ ಬಳಿ 2 ಹೆಲಿಕಾಪ್ಟರ್ ಇವೆ, 13 ವರ್ಷದ ಬಳಿಕ ಕಾಪ್ಟರ್ ಶಪಥದ ರೋಚಕ ಕತೆ ಬಿಚ್ಚಿಟ್ಟ ಜನಾರ್ಧನ ರೆಡ್ಡಿ!

ಎಲ್ಲರನ್ನೂ ಫುಟ್‌ಬಾಲ್‌ನಂತೆ ಆಡಿಸುತ್ತೇನೆ:  ನಾನು ಹಿಂದೆ ಬಳ್ಳಾರಿ ಜಿಲ್ಲೆಯಲ್ಲಿ ರಾಜಕಾರಣ ‌ಮಾಡಿದ ಅನುಭವ ಇದೆ. ಅದೇ ಅನುಭವದ ಮೇಲೆ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡ್ತಾ ಇದ್ದೇನೆ. ನಮ್ಮ ಪಕ್ಷಕ್ಕೆ ನಿರೀಕ್ಷೆ ಮೀರಿ ಬೆಂಬಲ ಸಿಗ್ತಾ ಇದೆ. ಜನರ ಪ್ರೀತಿ ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ. ರಾಜಕೀಯದಲ್ಲಿ ಸ್ನೇಹಿತರು, ಶತ್ರುಗಳು ಎಲ್ಲರೂ ಸೇರಿಕೊಂಡು ನನ್ನನ್ನ ಫುಟ್ ಬಾಲ್ ತರ ಆಡಿದ್ದಾರೆ. ಈಗ ನನಗೆ ಫುಟ್‌ಬಾಲ್‌ ಸಿಕ್ಕಿದ್ದು, ಎಲ್ಲರನ್ನು ಸೇರಿಸಿ ಫುಟ್ ಬಾಲ್ ಆಡಬಹುದು ಎಂದು ಈ ಚಿಹ್ನೆಯನ್ನ ಆಯ್ಕೆ ಮಾಡಿಕೊಂಡಿದ್ದೇನೆ. ಬಿಜೆಪಿ ಜೊತೆ ಮಾತುಕತೆ ವಿಚಾರಕ್ಕೆ ಸಂಬಂಧಿಸಿ ಯಾರಿಗೆ ಯಾವ ರೀತಿ ಕನಸು ಬೀಳುತ್ತದೆಯೋ ಗೊತ್ತಿಲ್ಲ. ನಾನು ಯಾರ ಜೊತೆಗೆ ಮಾತನಾಡಿಲ್ಲ. ಆ ಸಮಯ ಈಗ ಮೀರಿ ಹೋಗಿದೆ. ಹಿರಿಯರಿಗೆಲ್ಲ ಅಂದೇ ಮಾತನಾಡಿ ಆಗಿದೆ. ಯಾವುದೇ ರೀತಿಯ ಮಾತುಕತೆ ಈಗ ನಡೆದಿಲ್ಲ ಎಂದು ಮಾಹಿತಿ ನೀಡಿದರು.

ಸರ್ವರಿಗೂ ಸಮ ಬಾಳು - ಸರ್ವರಿಗೂ ಸಮ ಪಾಲು ಘೋಷಣೆಯಡಿ ಪ್ರಣಾಳಿಕೆ ಬಿಡುಗಡೆ:

  • ಪ್ರತಿ ಮನೆಗೆ 250 ಯೂನಿಟ್ ವಿದ್ಯುತ್ ಉಚಿತ
  • ಎಸ್‌ಟಿ, ಎಸ್‌ಸಿ ಉಚಿತ ನಿವೇಶನ
  • 5 ಎಕರೆಗಿಂತ ಕಡಿಮೆ ಇದ್ರೆ ರೈತರಿಗೆ ಬಂಡವಾಳದ 15 ಸಾವಿರ ರೂ ನರೆವು
  • ರೈತರಿಗೆ ಬಡ್ಡಿ ರಹಿತ ಸಾಲ ನೀಡುವುದು
  • ಹೆಣ್ಣು ಮಕ್ಕಳ ಹೆಸರಿನಲ್ಲಿ ಮನೆ ಇಲ್ಲದೆ ಇರುವವರಿಗೆ 2 ಬಿಹೆಚ್‌ಕೆ ಮನೆ
  • ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಮಾನ ವೇತನ
  • ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ
  • ಮಹಿಳೆಯರ ಭದ್ರತೆಗಾಗಿ ಹೊಸ ಮಹಿಳೆಯರ ತಂಡ ಸ್ಥಾಪನೆ
  • ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ 1000 ವೇತನ ಹೆಚ್ಚಳ
  • ಆರ್ಥಿಕ ದೌರ್ಬಲ್ಯ ಮಕ್ಕಳಿಗೆ ಉಚಿತ ಶಿಕ್ಷಣ

ಗಣಿಧಣಿಗೆ ಹೊಸ ಟೆನ್ಷನ್: 'ಸ್ನೇಹ ಹಸ್ತ' ಚಿಹ್ನೆ ನೀಡಲು ಚು.ಆಯೋಗ ನಕಾರ

Follow Us:
Download App:
  • android
  • ios