ಆ್ಯಂಬುಲೆನ್ಸ್‌ನಲ್ಲಿ ಬಂದ ಓರ್ವ ರೋಗಿ ಕೇರಳಕ್ಕೆ ವಾಪಸ್‌..!

ಕೇರಳದಿಂದ ಆಗಮಿಸುವ ಆ್ಯಂಬುಲೆನ್ಸ್‌ಗಳಿಗೆ ತಲಪಾಡಿ ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ. ಶುಕ್ರವಾರ ನಿಯಮ ಮೀರಿ ಆಗಮಿಸಿದ ಇಬ್ಬರು ರೋಗಿಗಳ ಪೈಕಿ ಒಬ್ಬರನ್ನು ವಾಪಸ್‌ ಕಳುಹಿಸಲಾಗಿದೆ.

 

Karnataka Police sent back a patient for breaking rules in border

ಮಂಗಳೂರು(ಏ.11): ಕೇರಳದಿಂದ ಆಗಮಿಸುವ ಆ್ಯಂಬುಲೆನ್ಸ್‌ಗಳಿಗೆ ತಲಪಾಡಿ ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ. ಶುಕ್ರವಾರ ನಿಯಮ ಮೀರಿ ಆಗಮಿಸಿದ ಇಬ್ಬರು ರೋಗಿಗಳ ಪೈಕಿ ಒಬ್ಬರನ್ನು ವಾಪಸ್‌ ಕಳುಹಿಸಲಾಗಿದೆ. ಇದು ಕನ್ನಡಪ್ರಭದ ಸಹ ಸಂಸ್ಥೆ ಸುವರ್ಣ ನ್ಯೂಸ್‌ ತಂಡ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಸ್ಪಷ್ಟಗೊಂಡಿದೆ.

ತಲಪಾಡಿ ಗಡಿಯಲ್ಲಿ ಕೇರಳ ಆ್ಯಂಬುಲೆನ್ಸ್‌ ನ ಬಿಗು ತಪಾಸಣೆ ನಡೆಸಲಾಗುತ್ತಿದೆ. ಅಗತ್ಯ ದಾಖಲೆ, ವೈದ್ಯಕೀಯ ಪ್ರಮಾಣ ಪತ್ರ ಇದ್ದರೆ ಮಾತ್ರ 108 ಆ್ಯಂಬುಲೆನ್ಸ್‌ಗೆ ಪ್ರವೇಶ ನೀಡುತ್ತಿದ್ದಾರೆ.

ಅಪಾರ್ಟ್‌ಮೆಂಟ್‌ ಬೆಡ್ ಮೇಲೆ ಆಂಕರ್ ಕಂ ನಟಿಯ ಮೃತದೇಹ!

ಇಬ್ಬರು ರೋಗಿಗಳ ಸಹಿತ ಕೇರಳದಿಂದ ಆಗಮಿಸಿದ ಸರ್ಕಾರಿ ಅಂಬ್ಯುಲೆನ್ಸ್‌ನ್ನು ಕರ್ನಾಟಕ ವೈದ್ಯಕೀಯ ತಂಡ ಮತ್ತು ಪೊಲೀಸರು ಗಡಿಯಲ್ಲಿ ತಪಾಸಣೆ ನಡೆಸಿದ್ದರು. ಆಗ ಒಂದೇ ಆ್ಯಂಬ್ಯುಲೆನ್ಸ್‌ ನಲ್ಲಿ ಕೇರಳದ ಇಬ್ಬರು ರೋಗಿಗಳನ್ನು ಕರೆತರಲಾಗಿತ್ತು. ತುರ್ತು ಚಿಕಿತ್ಸೆ ಹಿನ್ನೆಲೆಯಲ್ಲಿ ಓರ್ವ ರೋಗಿಗೆ ಮಾತ್ರ ಕರ್ನಾಟಕ ಪ್ರವೇಶಕ್ಕೆ ಅವಕಾಶ ನೀಡಲಾಯಿತು. ಮೂಳೆ ಮುರಿತಕ್ಕೊಳಗಾದ ಕಾಸರಗೋಡು ಮಹಿಳೆಗೆ ಪ್ರವೇಶ ನಿರಾಕರಣೆ ಮಾಡಿದ್ದು, ಆಕೆಯನ್ನು ಚೆಕ್‌ ಪೋಸ್ಟ್‌ ನಲ್ಲಿ ಇಳಿಸಿ ಮತ್ತೊಬ್ಬ ರೋಗಿಗÜಷ್ಟೇ ತೆರಳಲು ಅವಕಾಶ ನೀಡಲಾಯಿತು.

 

ಆ್ಯಂಬುಲೆನ್ಸ್‌ ಸಂಖ್ಯೆ ಇಳಿಕೆ: ಇದುವರೆಗೆ ಮೂರು ದಿನಗಳಲ್ಲಿ ಕೇವಲ ಐದು ಆ್ಯಂಬುಲೆನ್ಸ್‌ಗಳು ಮಾತ್ರ ಗಡಿ ಪ್ರವೇಶಿಸಿವೆ. ಮೊದಲ ದಿನ ಮೂರು, ಗುರುವಾರ ಒಂದು ಹಾಗೂ ಶುಕ್ರವಾರ ಮಧ್ಯಾಹ್ನ ವರೆಗೆ ಒಂದು ಆ್ಯಂಬುಲೆನ್ಸ್‌ ಮಾತ್ರ ಬಂದಿದೆ.

ಕೇರಳಕ್ಕೆ ಹೋಗುವ-ಬರುವ ವಾಹನಗಳ ತಪಾಸಣೆಯಲ್ಲಿ 30ಕ್ಕೂ ಅ​ಧಿಕ ಕೇರಳ ಪೊಲೀಸರು ಆ್ಯಂಬುಲೆನ್ಸ್‌ ತಪಾಸಣೆ ನಡೆಸುತ್ತಿದ್ದಾರೆ. ದಿನದ 24 ಗಂಟೆಯೂ ಕೇರಳ ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ. ಕರ್ನಾಟಕದಿಂದ ಅಗತ್ಯ ವಸ್ತು ಬಿಟ್ಟು ಬೇರೆ ವಾಹನಗಳು ಹೋಗುತ್ತಿಲ್ಲ.

ನೇಣು ಬಿಗಿದುಕೊಂಡ ರೈತನ ಶವದೆದುರು ಶಿರಾ ಎಂಎಲ್ ಎ ಸೆಲ್ಫಿ

ಪಾದಚಾರಿಗಳ ಮೇಲೆ ನಿಗಾ:

ಕೇರಳ ಆ್ಯಂಬುಲೆನ್ಸ್‌ನಲ್ಲಿ ಗಡಿ ಭಾಗಕ್ಕೆ ಬಂದು, ಅಲ್ಲಿಂದ ನಡೆದುಕೊಂಡು ಗಡಿ ದಾಟಿ ಮತ್ತೆ ಆ್ಯಂಬುಲೆನ್ಸ್‌ ಏರುತ್ತಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಈಗ ಜಿಲ್ಲಾ ಪೊಲೀಸರು ಪಾದಚಾರಿಗಳನ್ನು ಕೂಡ ತಪಾಸಣೆ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ವಾಹನ ಅಥವಾ ನಡೆದುಕೊಂಡು ಕರ್ನಾಟಕ ಪ್ರವೇಶಿಸಲು ಕೇರಳಿಗರಿಗೆ ಪೊಲೀಸರು ಅವಕಾಶ ಕಲ್ಪಿಸುತ್ತಿಲ್ಲ.

Latest Videos
Follow Us:
Download App:
  • android
  • ios