ಬಾರದ ಮುಂಗಾರು, ಮುಧೋಳದಲ್ಲಿ ಜಲಮೂಲಗಳು ಖಾಲಿ ಖಾಲಿ
ಈ ವರ್ಷ ಸಕಾಲಕ್ಕೆ ಮಳೆಯಾಗದೇ ಇರುವ ಕಾರಣಕ್ಕೆ ಮುಧೋಳ ನಗರದಲ್ಲಿ ನೀರಿನ ಸಮಸ್ಯೆ ಉಲ್ಭಣವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಹೀಗಾಗಿ ಜನರು ಎಚ್ಚರಿಕೆಯಿಂದ ನೀರನ್ನು ಬಳಕೆ ಮಾಡುವುದು ಅನಿವಾರ್ಯವಾಗಿದೆ.
ವಿಶ್ವನಾಥ ಮುನವಳ್ಳಿ
ಮುಧೋಳ (ಜೂ.1) ಈ ವರ್ಷ ಸಕಾಲಕ್ಕೆ ಮಳೆಯಾಗದೇ ಇರುವ ಕಾರಣಕ್ಕೆ ಮುಧೋಳ ನಗರದಲ್ಲಿ ನೀರಿನ ಸಮಸ್ಯೆ ಉಲ್ಭಣವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಹೀಗಾಗಿ ಜನರು ಎಚ್ಚರಿಕೆಯಿಂದ ನೀರನ್ನು ಬಳಕೆ ಮಾಡುವುದು ಅನಿವಾರ್ಯವಾಗಿದೆ.
ಸುಮಾರು 60 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರದಲ್ಲಿ ಇರುವುದು 31 ವಾರ್ಡ್‌ಗಳಿವೆ. 60 ಸಾವಿರ ಜನಸಂಖ್ಯೆ ಇರುವ ಜಲಮೂಲ ಮರಾಠಾ ಸಂಸ್ಥಾನದ ರಾಜಾ ಮಾಲೋಜಿರಾವ್ ಘೋರ್ಪಡೆ ಮಹಾರಾಜರು ನಗರದಲ್ಲಿ ನಿರ್ಮಿಸಿದ್ದು ಮಹಾರಾಣಿ ಕೆರೆ ಮಾತ್ರ. ಆದರೆ, ಇದೀಗ ಮಳೆಯಾಗದೇ ಇರುವ ಕಾರಣಕ್ಕೆ ಕೆರೆಯಲ್ಲಿ ನೀರಿನ ಮಟ್ಟದಿನದಿಂದ ದಿನಕ್ಕೆ ಕುಸಿಯುತ್ತಿದೆ. ಹೀಗಾಗಿ 10-12 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಜನರು ತೀವ್ರ ಕಂಗಾಲಾಗಿದ್ದಾರೆ. ಇನ್ನೊಂದಿಷ್ಟುದಿನಗಳ ಕಾಲ ಮಳೆಯಾಗದೇ ಇದ್ದರೆ ಜನರು ನೀರಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗಲಿದೆ. ಹೀಗಾಗಿ ಜನರು ಎಚ್ಚರಿಕೆಯಿಂದ ನೀರು ಬಳಕೆ ಮಾಡಬೇಕಾಗಿದೆ.
ಬಾಗಲಕೋಟೆ: ಬಾರದ ಮುಂಗಾರು ಕೃಷ್ಣಾ, ಮಲಪ್ರಭಾ & ಘಟಪ್ರಭಾ ನದಿಗಳ ಒಡಲು ಖಾಲಿ ಖಾಲಿ!
ನೀರಿನ ಏಕೈಕ ಮೂಲ:
ಮಹಾರಾಣಿ ಕೆರೆ 25 ಅಡಿ ಎತ್ತರ, 28 ಎಕರೆಯಷ್ಟುವಿಸ್ತೀರ್ಣ ಹೊಂದಿರುವ ಈ ಕೆರೆಯು 0.012 ಟಿಎಂಸಿ ಅಷ್ಟುನೀರು ಸಂಗ್ರಹಿಸುವ ಸಾಮರ್ಥ್ಯವಿದೆ. ಮುಧೋಳ ನಗರದ ಜನತೆಗೆ ಕುಡಿಯುವ ನೀರು ಪೂರೈಸುವ ಏಕೈಕ ಕೆರೆ ಇದಾಗಿದ್ದು 2005-06ನೇ ಸಾಲಿನಲ್ಲಿ ಜಿಲ್ಲಾ ಪಂಚಾಯತಿ ವತಿಯಿಂದ ಕೆರೆಯ ಹೂಳು ತೆಗೆಯಲಾಗಿತ್ತು. ನಂತರ ಹೂಳು ತೆಗೆಯದೇ ಇರುವುದರಿಂದ ನೀರು ಸಂಗ್ರಹ ಸಾಮರ್ಥ್ಯ ಕುಸಿದಿದೆ.
ನೀರು ಪೂರೈಕೆ ಯೋಜನೆಗೆ ಅನುದಾನ:
ಈಗ ಗುಳಬಾಳ ಹತ್ತಿರ ಕೃಷ್ಣಾ ನದಿ ಬ್ಯಾರೇಜ್‌ನಿಂದ ಮುಧೋಳಕ್ಕೆ ನೀರು ಸರಬರಾಜು ವ್ಯವಸ್ಥೆ ಮತ್ತು ಸುಧಾರಣೆ ಮಾಡಲು .11,256 ಲಕ್ಷ ಅನುದಾನ ಬಿಡುಗಡೆಯಾಗಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಅಮೃತ್ ಯೋಜನೆಯಡಿ .2624 ಲಕ್ಷ, ನಗರೋತ್ಥಾನ ಯೋಜನೆಯಡಿ .2125ಲಕ್ಷ ಅನುದಾನ ಬಿಡುಗಡೆಯಾಗಲಿದೆ. ಈ ಎಲ್ಲ ಯೋಜನೆಗಳು ಟೆಂಡರ್ ಪ್ರಕ್ರಿಯೆಯಲ್ಲಿ ಇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಈ ಯೋಜನೆಗಳು ಪೂರ್ಣಗೊಳ್ಳಬೇಕೆಂದು ಕನಿಷ್ಠ 2-3 ವರ್ಷವಾದರೂ ಬೇಕಾಗುತ್ತದೆ.
ಭರ್ತಿಯಾದರೆ ಮೂರು ತಿಂಗಳು ನೀರು.
ಮುಧೋಳದ ವೆಂಕಟೇಶ (ಮಹಾರಾಣಿ) ಕೆರೆಗೆ ಜಾಲಿಬೇರ್ ಗ್ರಾಮ ಬಳಿ ಹರಿದಿರುವ ಘಟಪ್ರಭ ನದಿಯ ನೀರನ್ನು 215 ಹೆಚ್‌ಪಿ ಮೋಟರ್‌ದಿಂದ ಜಾಕವೆಲ್ ಮೂಲಕ ಕೆರೆಗೆ ಲಿಪ್‌್ಟಮಾಡಿಕೊಳ್ಳಲಾಗುತ್ತದೆ. ಅಲ್ಲದೇ ಹಿಡಕಲ್ ಜಲಾಶಯ ಎಡದಂಡೆ ಕಾಲುವೆಗೆ ಹರಿದು ಬಿಡುವ ನೀರನ್ನು ಕೆರೆಗೆ ತುಂಬಿಸಲಾಗುತ್ತದೆ. ಒಂದು ಸಲ ಕೆರೆಯನ್ನು ಭರ್ತಿ ಮಾಡಿಕೊಂಡರೆ ಮೂರು ತಿಂಗಳುವರೆಗೆ ನೀರನ್ನು ಬಿಡಲು ಸಾಧÜ್ಯ.ಹೀಗೆ ಪ್ರತಿವರ್ಷ ನಾಲ್ಕು ಭಾರೀ ಕೆರೆ ತುಂಬಿಸಲಾಗುತ್ತದೆ.
ಕೆಲವು ಬಡಾವಣೆಗಳಿಗೆ ಕೊಳವೆ ಬಾವಿ ನೀರು:
ಹತ್ತು ವರ್ಷಗಳಲ್ಲಿ ಮುಧೋಳ ಜನಸಂಖ್ಯೆ ಇಮ್ಮಡಿಗೊಂಡಿದೆ. ಜಯನಗರ, ಬಸವಲಿಂಗ ನಗರ, ಸಾಯಿನಗರ, ಐಶ್ವರ್ಯ ಕಾಲೋನಿ, ಸಿದ್ರಾಮೇಶ್ವರ ಕಾಲೋನಿ, ಎಸ್‌ಬಿಐ ಕಾಲೋಣಿ, ವಿಶ್ವೇಶ್ವರ ನಗರ, ಭಕ್ಷಿ ಕಾಲೋಣಿ ಸೇರಿದಂತೆ ಸಾಕಷ್ಟುನೂತನ ಬಡಾವಣೆಗಳಿಗೆ ವೆಂಕಟೇಶ ಕೆರೆಯ ನೀರು ಪೂರೈಕೆಯಾಗುತ್ತಿಲ್ಲ. ಈ ಬಡಾವಣೆಗಳ ನಿವಾಸಿಗಳಿಗೆ ಅಲ್ಲಲ್ಲಿ ಅಳವಡಿಸಿದ ಕೊಳವೆ ಭಾವಿಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತದೆ. ಕೆರೆಯ ನೀರನ್ನು ಪೂರೈಸಬೇಕಾದರೆ ನೂತನ ಪೈಪ್‌ಲೈನ್ ಅಳವಡಿಸಬೇಕು. ಶಾಶ್ವತ ಕುಡಿಯುವ ನೀರು ಸಬರಾಜುಗಾಗಿ ಸಲ್ಲಿಸಿರುವ ಮನವಿಗೆ ಮಂಜೂರಾತಿ ದೊರೆಯಬೇಕು. ಆಗಲೇ ನೂತನ ಬಡವಾಣೆಗೆ ಕೆರೆಯ ನೀರು ಸರಬರಾಜು ಮಾಡಲು ಸಾಧÜ್ಯ.
15 ದಿನಕ್ಕೊಮ್ಮೆ ನೀರು ಪೂರೈಕೆ
ಮುಧೋಳ ನಗರಸಭೆ ವ್ಯಾಪ್ತಿಗೆ ಒಟ್ಟು 31 ವಾರ್ಡ್‌ಗಳಿದ್ದು, ಕಳೆದ ಮೂರನಾಲ್ಕು ವರ್ಷಗಳಿಂದ ಹದಿನೈದು ದಿನಕ್ಕೊಮ್ಮೆ ನೀರು ಬಿಡುತ್ತಿರುವುದರಿಂದ ನಗರದ ಜನತೆಯು ನೀರಿಗಾಗಿ ಪರದಾಡುವಂತಾಗಿದೆ. ಕಾರಣ ಶಾಶ್ವತ ನೀರು ಪೂರೈಕೆ ಯೋಜನೆಯನ್ನು ರೂಪಿಸಿ ಪ್ರತಿನಿತ್ಯ ನೀರು ಬಿಡಬೇಕೆಂದು ನಾಗರಿಕರ ಒತ್ತಾಯವಾಗಿದೆ, ಜನರ ಬೇಡಿಕೆಗೆ ಸ್ಪಂದಿಸಿದ ಮಾಜಿ ಸಚಿವ ಗೋವಿಂದ ಕಾರಜೋಳ ಅವರ ಪ್ರಯತ್ನದಿಂದ ಗುಳಬಾಳ ಬ್ಯಾರೇಜ್ ನಿಂದ ನೀರು ಸರಬರಾಜು ಮಾಡುವ ಯೋಜನೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಚಾಲನೆ ಕೊಡಿಸಿದ್ದಾರೆ ಆದರೆ ಯೋಜನೆ ಇನ್ನೂ ಪ್ರಾರಂಭವಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ, ಈ ಯೋಜನೆ ಪ್ರಾರಂಭವಾಗಿ ಮುಕ್ತಾಯವಾಗಬೇಕಾದರೆ ಕನಿಷ್ಠ ಎರಡುವರೆ ವರ್ಷವಾದರೂ ಬೇಕಾಗುತ್ತದೆ, ಶಾಶ್ವತ ನೀರು ಪೂರೈಕೆ ಯೋಜನೆ ಅನುಷ್ಠಾನಗೊಳ್ಳಲು ಕಾಲಾವಕಾಶಬೇಕಾಗುವುದು, ಅಲ್ಲಿಯವರೆಗೆ ನಾಗರಿಕರು ನೀರಿಗಾಗಿ ಪರದಡುವುದು ತಪ್ಪಿದ್ದಲ್ಲ, ಈಗಿರುವ ಜನಪ್ರನಿಧಿಗಳು ಮತ್ತು ಅಧಿಕಾರಿಗಳು ಹೆಚ್ಚಿನ ಮುತುವರ್ಜಿವಹಿಸಿ ಈ ಯೋಜನೆ ಬೇಗನೆ ಆರಂಭಿಸಿ ಜನರ ದಾಹ ನಿವಾರಿಸಬೇಕು.
ಮಳೆ ಕೊರತೆ ಉಡುಪಿಗೆ ಇನ್ನು ಐದು ದಿನಗಳಿಗೊಮ್ಮೆ ನೀರು ಪೂರೈಕೆ!
ಮುಧೋಳ ನಗರದ ಜನತೆಗೆ ಶಾಶ್ವತ ಕುಡಿಯುವ ನೀರು ಪೂರೈಸುವ ಯೋಜನೆಯು ಕೂಡಲೇ ಪ್ರಾರಂಭಿಸಲು ಸೂಕ್ತಕ್ರಮ ಜರುಗಿಸುತ್ತೇನೆ. ನಗರದ ಜನತೆಯು ನೀರಿಗಾಗಿ ಪರದಾಡಬಾರದು. ಅದಕ್ಕಾಗಿ ಈ ಯೋಜನೆ ಶೀಘ್ರದಲ್ಲಿ ಆರಂಭಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
-ಆರ್.ಬಿ.ತಿಮ್ಮಾಪೂರ, ಸಚಿವರು ಕರ್ನಾಟಕ ಸರ್ಕಾರ
ನೀರು ವಿತರಣಾ ಜಾಲ ರಿಮಾಡ್ಲಲಿಂಗ್ ಆಗಬೇಕು. ಆಗಲೇ ಮುಧೋಳದ ಎಲ್ಲ ಬಡಾವಣೆಗಳಿಗೆ ಕೆರೆಯ ನೀರು ಪೂರೈಸಲು ಸಾಧÜ್ಯ. ಜನಪ್ರತಿನಿಧಿಗಳು ಈ ಯೋಜನೆಗೆ ಇನ್ನೂ ಹೆಚ್ಚಿನ ಅನುದಾನ ತರಬೇಕೆಂದು ತಾವು ಸಾರ್ವಜನಿಕರ ಪರವಾಗಿ ವಿನಂತಿಸುತ್ತೇನೆ.
- ರಾಜು ಚವ್ಹಾಣ ಕಿರಿಯ ಅಭಿಯಂತರರು, ನಗರಸಭೆ ಮುಧೋಳ
ನಗರಸಭೆಗೆ ಬರುವ ಆದಾಯದಲ್ಲಿ ಶೇ.50ಕ್ಕಿಂತ ಹೆಚ್ಚು ವೆಚ್ಚನ್ನು ಕುಡಿಯುವ ನೀರು ಸರಬರಾಜು ಮಾಡುವುದಕ್ಕಾಗಿ ಖÜರ್ಚು ಮಾಡಲಾಗುತ್ತಿದೆ. ನೀರಿನ ಕರದಿಂದ ಬರುವ ಹಣ ಯಾವುದಕ್ಕೂ ಸಾಕಾಗುವುದಿಲ್ಲ. ಅದಕ್ಕಾಗಿ ಕುಡಿಯುವ ನೀರು ಯೋಜನೆಗೆ ಸರ್ಕಾರ ವಿಷೇಷ ಅನುದಾನ ಬಿಡುಗಡೆ ಮಾಡಬೇಕು.
-ಶಿವಪ್ಪ ಅಂಬಿಗೇರ ಪೌರಾಯುಕ್ತರು,ನಗರಸಭೆ ಮುಧೋಳ