ಯಾದಗಿರಿ (ಸೆ.01): ನನ್ನ ಮಗನೇ ಡ್ರಗ್‌ ಮಾಫಿಯಾದಲ್ಲಿದ್ದರೆ ಸುಮ್ನೆ ಬಿಡೋಲ್ಲ. ಡ್ರಗ್‌ ಮಾಫಿಯಾದಲ್ಲಿ ಯಾರೇ ಇದ್ದರೂ ಸರ್ಕಾರ ಅವರನ್ನು ಬಿಡುವುದಿಲ್ಲ. ಯಾವುದೇ ಕಾರಣಕ್ಕೂ ಪ್ರಕರಣ ಮುಚ್ಚಿ ಹಾಕುವುದಿಲ್ಲ ಎಂದು ಮಂಗಳವಾರ ನಗರದಲ್ಲಿ ಮಾಧ್ಯಮಗಳಿಗೆ ಸಚಿವ ಪ್ರಭು ಚವ್ಹಾನ್‌ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಸಮ್ಮಿಶ್ರ ಸರ್ಕಾರದ ಪತನಕ್ಕೆ ಡ್ರಗ್‌ ಮಾಫಿಯಾ ಹಣ ಕಾರಣ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ಅಚ್ಚರಿ ಮೂಡಿಸುತ್ತದೆ. ಕುಮಾರಸ್ವಾಮಿಯವರಿಗೆ ಈಗ ಕೆಲಸವಿಲ್ಲ. ಹೀಗಾಗಿ ಬರೀ ಇಂತಹ ಸುಳ್ಳು ಮಾತನಾಡುತ್ತಾರೆ ಎಂದು ಟಾಂಗ್‌ ನೀಡಿದ ಪ್ರಭು ಚವ್ಹಾಣ್‌, ಭಾರತ ದೇಶದಲ್ಲಿ ಸಂವಿಧಾನವೇ ಮೊದಲು. ಸಂವಿಧಾನದ ಎದುರು ಯಾರೂ ದೊಡ್ಡವರಲ್ಲ ಎಂದರು.

9 ನಟಿಯರು, 6 ನಟರಿಗಿದೆ ಡ್ರಗ್ಸ್ ಲಿಂಕ್? ಸ್ಯಾಂಡಲ್‌ವುಡ್ ಕತೆ ಬಹಿರಂಗ!...

ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾ ಕುರಿತು ಪ್ರತಿ ದಿನ ಸ್ಫೋಟಕ ಮಾಹಿತಿ ಬಹಿರಂಗವಾಗುತ್ತಿದೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿಸಿಬಿ ಮುಂದೆ 15 ನಟ ನಟಿಯರ ಹೆಸರು ಬಹಿರಂಗ ಪಡಿಸಿದ್ದಾರೆ. ಈ ಕುರಿತು ಸ್ಯಾಂಡಲ್‌ ಸ್ಟಾರ್ ಸೆಲೆಬ್ರೆಟಿಗಳು   ಹೇಳುವುದೇನು? 9 ನಟಿಯರು ಹಾಗೂ 6 ನಟರಿಗೆ ಡ್ರಗ್ಸ್ ಮಾಫಿಯಾ ಲಿಂಕ್ ಕುರಿತು ಹೆಚ್ಚಿನ ಮಾಹಿತಿ ನೀಡಿದ್ದಾರೆ.