ಬೆಳಗಾವಿಯ ಅರಳಿಕಟ್ಟಿಯಲ್ಲಿ ಗೃಹಲಕ್ಷ್ಮಿ ಹಣಕ್ಕಾಗಿ ಮೊಮ್ಮಗ ಭೀಮಪ್ಪ, ಅಜ್ಜಿ ಹಮ್ಮವ್ವಾರನ್ನು ಕುತ್ತಿಗೆ ಬಿಗಿದು ಕೊಂದು ಶವವನ್ನು ಡ್ಯಾಂ ಹಿನ್ನೀರಿಗೆ ಎಸೆದಿದ್ದಾನೆ. ಪ್ರಕರಣ ಸಂಬಂಧ ಮೊಮ್ಮಗ ಹಾಗೂ ಕೊಲೆ ಮುಚ್ಚಿಹಾಕಲು ಯತ್ನಿಸಿದ ಮೃತಳ ಪುತ್ರ ರಾಮಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ(ನ.20): ಗೃಹಲಕ್ಷ್ಮಿ(Gruhalakshmi) ಹಣದಿಂದ ಎಷ್ಟೋ ಮಹಿಳೆಯರು ಜೀವನ ಕಂಡೂಕೊಂಡಿದ್ದಾರೆ, ಕೆಲವರು ಗೃಹಲಕ್ಷ್ಮಿ ಹಣದಿಂದ ಫ್ರಿಡ್ಜ್ ಖರೀದಿಸಿದ್ದಾರೆ, ಕೂಡಿಟ್ಟು ಜಾನುವಾರು, ಟಿವಿ, ಏನೇನೋ ಖರೀದಿಸಿರುವುದು ನೋಡಿದ್ದೀರಿ ಆದರೆ ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಹಣದಿಂದಾಗ ಅಜ್ಜಿಯೊಬ್ಬರು ಜೀವವನ್ನೇ ಕಳೆದುಕೊಂಡಿರೋ ಆಘಾತಕಾರಿ ಘಟನೆ ನಡೆದಿದೆ.
ಹೌದು ಗೃಹಲಕ್ಷ್ಮಿ ಹಣಕ್ಕಾಗಿ ಮೊಮ್ಮಗ ಅಜ್ಜಿಯನ್ನೇ ಕೊ ಲೆ ಮಾಡಿರುವ ಅಮಾನವೀಯ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮ(Aralikatti village)ದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹಮ್ಮವ್ವಾ ಸನದಿ (78) ಮೃತ ಅಜ್ಜಿ. ಘಟನೆಗೆ ಸಂಬಂಧಿಸಿದಂತೆ ಮೊಮ್ಮಗ ಭೀಮಪ್ಪ ಸನದಿ (20) ಹಾಗೂ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ ಮೃತಳ ಪುತ್ರ ರಾಮಪ್ಪನನ್ನು ಬಂಧಿಸಲಾಗಿದೆ.
ಗೃಹಲಕ್ಷ್ಮಿ ಹಣಕ್ಕಾಗಿ ಪೀಡಿಸುತ್ತಿದ್ದ ಮೊಮ್ಮಗ!
ನ.15ರಂದು ಜಿನರಾಳ ಗ್ರಾಮದ ಬಳಿಯ ಘಟಪ್ರಭಾ ನದಿ ಡ್ಯಾಂ ಹಿನ್ನೀರಿನಲ್ಲಿ 2 ಗೋಣಿ ಚೀಲಗಳಲ್ಲಿ ಕಲ್ಲುಗಳನ್ನು ಕಟ್ಟಿ ಎಸೆದಿದ್ದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿತ್ತು. ಮೃತಳ ಪುತ್ರಿ ನೀಡಿದ ದೂರಿನ ಮೇರೆಗೆ ಯಮಕನಮರಡಿ ಪೊಲೀಸರು ತನಿಖೆ ಆರಂಭಿಸಿದ್ದರು. ಹಮ್ಮವ್ವಾಳಿಗೆ ಗೃಹಲಕ್ಷ್ಮಿ ಹಣ ಬರುತ್ತಿತ್ತು. ಆ ಹಣಕ್ಕಾಗಿ ಭೀಮಪ್ಪ 3.5 ವರ್ಷದಿಂದ ಪೀಡಿಸುತ್ತಿದ್ದ. ಅಜ್ಜಿ ಹಣ ನೀಡದ್ದಕ್ಕೆ ಹಗ್ಗದಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಶವವನ್ನು ಡ್ಯಾಂಗೆ ಎಸೆದಿದ್ದ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಹಮ್ಮವ್ವಾ ಅವರು ನ.10ರಂದು ಸಂತೆಗೆ ಹೋಗಿ ಬರುವುದಾಗಿ ತೆರಳಿದ್ದರು. ಆದರೆ, ಮರಳಿ ಬಾರದ ಹಿನ್ನೆಲೆಯಲ್ಲಿ ಕುಟುಂಬದವರು ಹುಡುಕಾಟ ನಡೆಸಿದ್ದರು.
ಅಜ್ಜಿ ಬಳಿಯಿದ್ದ 2300 ರು. ಹಾಗೂ ಚಿನ್ನದ ಸರಗಳನ್ನು ಕಿತ್ತುಕೊಂಡು, ಚೀಲದಲ್ಲಿ ಶವ ತುಂಬಿಕೊಂಡು ಬೈಕ್ನಲ್ಲಿ ಸಾಗಿಸಿ ಗೋಣಿ ಚೀಲಗಳಿಗೆ ಎರಡು ದೊಡ್ಡ ಕಲ್ಲುಗಳನ್ನು ಕಟ್ಟಿ ನೀರಿಗೆ ಎಸೆದಿದ್ದಾನೆ.















