Bengaluru: ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಅಧಿಕಾರಿಗಳು

ವಿದ್ಯುತ್ ಕೇಬಲ್ ಅಳವಡಿಸುವುದಕ್ಕೆ ಅನುಮತಿ ನೀಡಲು ಲಂಚ ಪಡೆಯುತ್ತಿದ್ದ ಇಬ್ಬರು ಬಿಬಿಎಂಪಿ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

Karnataka Lokayukta trapped bribe receiving BBMP Officials sat

ಬೆಂಗಳೂರು (ಜ.19): ವಿದ್ಯುತ್ ಕೇಬಲ್ ಅಳವಡಿಸುವ ಕಂಪನಿಯಿಂದ 25 ಸಾವಿರ ರೂ. ಲಂಚವನ್ನು ಪಡೆಯುತ್ತಿದ್ದ ಇಬ್ಬರು ಬಿಬಿಎಂಪಿ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಬಿಬಿಎಂಪಿ ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ವಿಜಯನಗರದ ಪ್ರಶಾಂತ ನಗರ ವಾರ್ಡ್‌ನ ಬಿಬಿಎಂಪಿ ಅಸಿಸ್ಟೆಂಟ್ ಇಂಜಿನಿಯರ್ ಪ್ರವೀಣ್ ಬಿರಾದಾರ ಹಾಗೂ ಇದೇ ವಾರ್ಡ್‌ನ ವರ್ಕ್‌ ಇನ್ಸ್‌ಪೆಕ್ಟರ್ ಸುರೇಶ್ ಲಂಚ ಪಡೆಯುತ್ತಿರುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾಲೆ. ಎಲೆಕ್ಟ್ರಿಕ್ ಕೇಬಲ್ ಅಳವಡಿಸುವ ಸಲುವಾಗಿ 25 ಸಾವಿರ ರೂ. ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಲಾಕ್ ಆಗಿದ್ದಾರೆ. ಇನ್ನು ಆರೋಪಿಗಳು ಖಾಸಗಿ ಸಂಸ್ಥೆಯೊಂದರಿಂದ ಒಟ್ಟು 35 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಕರ್ನಾಟಕ- ಅಯೋಧ್ಯೆ ಪಾದಯಾತ್ರೆ: ರಾಮ ಮಂದಿರಕ್ಕೆ 1,800 ಕಿ.ಮೀ. ನಡೆದುಕೊಂಡು ಹೋದ ಗದಗಿನ ಗಾಂಧಿ

ಇನ್ನು ದೂರುದಾರ ಖಾಸಗಿ ಫೀಲ್ಡ್ ಇಂಜಿನಿಯರ್ ರಘುನಂದನ್ ಅವರಿಗೆ 35 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಉಚಿತವಾಗಿ ಮಾಡಿಕೊಡಬೇಕಾದ ಕೆಲಸಕ್ಕೆ ಸರ್ಕಾರಿ ಶುಲ್ಕ ಬಿಟ್ಟು ಬೇರೇನೂ ಪಾವತಿಸಿಕೊಳ್ಳುವಂತಿಲ್ಲ. ಆದರೆ, ಈ ಇಬ್ಬರು ಅಧಿಕಾರಿಗಳು ನಿಮಗೆ ಅನುಮತಿ ಬೇಕಾದಲ್ಲಿ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಲೋಕಾಯುಕ್ತ ಇಲಾಖೆಗೆ ರಘುನಂದನ್ ದೂರು ನೀಡಿದ್ದರು. ಲೋಕಾಯುಕ್ತ ಡಿಎಸ್‌ಪಿ ಬಸವರಾಜ್ ಮದ್ಗುಮ್, ಇನ್ಸ್ ಪೆಕ್ಟರ್ ಕೇಶವಮೂರ್ತಿ, ಆನಂದ್.ಹೆಚ್.ಎಂ ಹಾಗೂ ಮಂಜುನಾಥ್ ಹೂಗಾರ್ ತಂಡದಿಂದ ಟ್ರ್ಯಾಪ್ ಕಾರ್ಯಚರಣೆ ಮಾಡಲಾಗಿದೆ. ಇಬ್ಬರನ್ನೂ ಹಣ ಪಡೆಯುವ ವೇಳೆಯೇ ರೆಡ್‌ ಹ್ಯಾಂಡ್‌ ಆಗಿ ಹಿಡಿದು ವಶಕ್ಕೆ ಪಡೆದಿದ್ದಾರೆ. ಇಬ್ಬರೂ ಆರೋಪಿಗಳ ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು ಮತ್ತಷ್ಟು ಪ್ರಕರಣಗಳನ್ನು ನಡೆಸಿರುವ ಬಗ್ಗೆ ವಿಚಾರಣೆ ಮಾಡುತ್ತಿದ್ದಾರೆ. 

ಚಾರ್ಮಾಡಿ ಘಾಟ್ ರಸ್ತೆಗೆ 343 ಕೋಟಿ ರೂ. ಕೊಟ್ಟ ಕೇಂದ್ರ ಸರ್ಕಾರ
ನವದೆಹಲಿ (ಜ.19):
ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ಒಂದಾಗಿರುವ ಮಂಗಳೂರು-ಮೂಡಿಗೆರೆ- ತುಮಕೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ರಸ್ತೆಯಲ್ಲಿನ 10.8 ಕಿಲೋಮೀಟರ್ 2 ಲೇನ್ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ 343.74 ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಅವರು ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಕರ್ನಾಟಕದಲ್ಲಿ NH-73ರ ಮಂಗಳೂರು-ಮುದಿಗೆರೆ-ತುಮಕೂರು ವಿಭಾಗದ ವಿಸ್ತರಣೆಗೆ 343.74 ಕೋಟಿ ರೂ. ಮಂಜೂರು ಮಾಡಲಾಗಿದೆ.

ಕೆಎಸ್‌ಆರ್‌ಟಿಸಿ ಉದ್ಯೋಗ: ಎಂಟು ವರ್ಷಗಳಲ್ಲಿ 13,888 ನೌಕರರ ನಿವೃತ್ತಿ, ಕೇವಲ 262 ನೇಮಕಾತಿ

ಚಾರ್ಮಾಡಿ ಘಾಟ್‌ ರಸ್ತೆಯನ್ನು ಸುಸಜ್ಜಿತ 2-ಲೇನ್ ರಸ್ತೆಯನ್ನಾಗಿ ಪರಿವರ್ತಿಸಲಾಗಿದೆ. ಈಗ 10.8 ಕಿಮೀ ವ್ಯಾಪಿಸಿರುವ ಈ ಯೋಜನೆಯು ಇಂಜಿನಿಯರಿಂಗ್ ಖರೀದಿ ಮತ್ತು ನಿರ್ಮಾಣ (ಇಪಿಸಿ) ಮೋಡ್ ಅಡಿಯಲ್ಲಿ ಕಾರ್ಯಗತಗೊಳಿಸಲು ನಿರ್ಧರಿಸಲಾಗಿದೆ. ಸವಾಲಿನ ಗುಡ್ಡಗಾಡು ಮತ್ತು ಪರ್ವತ ಭೂ ದೃಶ್ಯಗಳನ್ನು ಹೊಂದಿರುವ ಚಾರ್ಮಾಡಿ ಘಾಟ್‌ನಲ್ಲಿ ಸಾರಿಗೆ ಸಂಚಾರವನ್ನು ಹಾಗೂ ಈ ಪ್ರದೇಶದ ಸಂಪರ್ಕವನ್ನು ಹೆಚ್ಚಳ ಮಾಡಲು ಈ ಅನುದಾನ ಸಮಪರ್ಕಕವಾಗಿ ಬಳಕೆ ಆಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.

Latest Videos
Follow Us:
Download App:
  • android
  • ios