ಸ್ಥಳೀಯ ಸಂಸ್ಥೆಗಳ ಫಲಿತಾಂಶ ಹೊರ ಬಿದ್ದಿದ್ದು ಹಾವೇರಿಯಲ್ಲಿ ಕಾಂಗ್ರೆಸ್ ಕೈ ಮೇಲಾಗಿದ್ದರೂ ಹಲವೆಡೆ ಅತಂತ್ರ ಸ್ಥಿತಿ ಕಂಡುಬಂದಿದೆ. ಉದಾಸಿ ಕುಟುಂಬದ ಪ್ರಭಾವಕ್ಕೆ ಕೊಂಚ ಹಿನ್ನಡೆಯೇ ಆಗಿದೆ.

ಹಾವೇರಿ[ಸೆ.3]  ಜಿಲ್ಲೆಯಲ್ಲಿ ಕಾಂಗ್ರೆಸ್ - ಬಿಜೆಪಿ ಒಳಜಗಳ ಅವುಗಳಿಗೆ ಮುಳುವಾಗಿದ್ದು ಅತಂತ್ರ ಸ್ಥಿತಿ ತಂದಿಟ್ಟಿವೆ. ಹಾವೇರಿ ನಗರಸಭೆಯಲ್ಲಿ ಬಿಜೆಪಿ ಒಳಜಗಳದಿಂದ ಕಾಂಗ್ರೆಸ್ ಹೆಚ್ಚು ಗೆದ್ದರೂ ಅತಂತ್ರ ಸ್ಥಿತಿ ಇದೆ.

ರಾಣೆಬೆನ್ನೂರಲ್ಲಿ ಕೋಳಿವಾಡ ಮತ್ತು ಸಚಿವ ಶಂಕರ್​ ಜಟಾಪಟಿಯಿಂದ ಅತಂತ್ರಕ್ಕೆ ಕಾರಣವಾಗಿದೆ. ಹಾವೇರಿ ನಗರಸಭೆಯಲ್ಲಿ ಪಕ್ಷೇತರರ ನೆರವಿನಿಂದ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ. ರಾಣೆಬೆನ್ನೂರಲ್ಲಿ ಕಾಂಗ್ರೆಸ್ ಮತ್ತು ಶಂಕರ್ ಅವರ ಕೆಪಿಜೆಪಿ ಒಂದಾದರಷ್ಟೇ ಬಿಜೆಪಿ ಅಧಿಕಾರದಿಂದ ದೂರ ಉಳಿಯಲು ಸಾಧ್ಯ. ಕೋಳಿವಾಡ ಹಠ ಮುಂದುವರೆದರೆ ಕೆಪಿಜೆಪಿ ಬಿಜೆಪಿ ದೋಸ್ತಿಯಾದ್ರೂ ಆಶ್ಚರ್ಯವಿಲ್ಲ.

ಹಿರೇಕೆರೂರಲ್ಲಿ ಪಕ್ಷೇತರರೇ ಕಿಂಗ್ ಮೇಕರ್​, ಅವರು ಒಲಿದವರಿಗೆ ಅಧಿಕಾರ ಸಿಗಲಿದೆ. ಹಾನಗಲ್​​ನಲ್ಲಿ ಬಿಜೆಪಿಯ ಸಿಎಂ ಉದಾಸಿಗೆ ಮುಖಭಂಗವಾಗಿದ್ದು ಕಾಂಗ್ರೆಸ್​​ಗೆ ಅಧಿಕಾರ ಸಿಕ್ಕಿದೆ. ಸಿಎಂ ಉದಾಸಿ ವಿರುದ್ಧ ವಿಧಾನಸಭೆಯಲ್ಲಿ ಸೋತಿದ್ದ ಶ್ರೀನಿವಾಸ ಮಾನೆ ಈಗ ಸರಿಯಾದ ತಿರುಗೇಟು ಕೊಟ್ಟಿದ್ದಾರೆ. ಸವಣೂರಿನಲ್ಲಿ ಬಿಜೆಪಿ ಬಸವರಾಜ್ ಬೊಮ್ಮಾಯಿ ತಂತ್ರ ಫಲಿಸದೆ ಕಾಂಗ್ರೆಸ್​ ಗೆಲವು ಕಂಡಿದೆ

ಸ್ಥಳೀಯ ಸಂಸ್ಥೆಒಟ್ಟು ವಾರ್ಡ್ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷೇತರರು
ಹಾವೇರಿ ನಗರಸಭೆ3109150007
ರಾಣೆಬೆನ್ನೂರು ನಗರಸಭೆ3515090011
ಹಾನಗಲ್ ಪುರಸಭೆ2304190000
ಸವಣೂರು ಪುರಸಭೆ2708150202
ಹಿರೇಕೆರೂರು ಪ.ಪಂ.2007080104
ಒಟ್ಟು13643660324