ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ, ಜಿಮ್ ಟ್ರೈನರ್ ಮುಫೀಸ್ ಮೀಯನ್ನವರ್ ಎಂಬಾತ ಹಿಂದೂ ಯುವತಿಯನ್ನು ಪ್ರೀತಿಯ ಜಾಲದಲ್ಲಿ ಸಿಲುಕಿಸಿ, ಅತ್ಯಾ*ಚಾರ ಎಸಗಿ, ಹಳೆಯ ವಿಡಿಯೋಗಳಿಂದ ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತೆ ವಿಡಿಯೋ ಮೂಲಕ ನ್ಯಾಯಕ್ಕಾಗಿ ಮೊರೆಯಿಟ್ಟಿದ್ದಾರೆ.

ಹುಬ್ಬಳ್ಳಿ (ಏ.06): ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೊಂದು ಆಘಾತಕಾರಿ 'ಲವ್ ಜಿಹಾದ್' ಮತ್ತು ಲೈಂಗಿಕ ದೌರ್ಜನ್ಯದ ಪ್ರಕರಣ ಬೆಳಕಿಗೆ ಬಂದಿದೆ. ಜಿಮ್ ಟ್ರೈನರ್ ಮುಫೀಸ್ ಮೀಯನ್ನವರ್ ಎಂಬಾತ ಹಿಂದೂ ಯುವತಿಯನ್ನು ಪ್ರೀತಿಯ ಜಾಲದಲ್ಲಿ ಸಿಲುಕಿಸಿ, ಎಸಗಿ, ಈಗ ಹಳೆಯ ವಿಡಿಯೋಗಳನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಳೆಯ ವಿಡಿಯೋ ಬಿಡುಗಡೆ: ಸಂತ್ರಸ್ತೆಯ ಕಣ್ಣೀರು

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಸಹನಾ ಸ್ವತಃ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ತಮ್ಮ ಮೇಲಾಗುತ್ತಿರುವ ದೌರ್ಜನ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 'ನಾನು ಮುಫೀಸ್ ಜೊತೆ ಸಂಪರ್ಕದಲ್ಲಿದ್ದಾಗ ಆತ ಒತ್ತಾಯಪೂರ್ವಕವಾಗಿ ನನ್ನಿಂದ ವಿಡಿಯೋ ಮಾಡಿಸಿದ್ದನು. ಈಗ ಆ ವಿಡಿಯೋವನ್ನು ಕಾಂಗ್ರೆಸ್‌ನ ಕೆಲವು ಯುವ ಮುಖಂಡರು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಮುಫೀಸ್ ನನ್ನನ್ನು ರಿಜಿಸ್ಟರ್ ಮದುವೆಯಾಗಲು ಒತ್ತಾಯಿಸುತ್ತಿದ್ದ' ಎಂದು ಅಳಲು ತೋಡಿಕೊಂಡಿದ್ದಾರೆ.

ಸಂಘಟನೆಗಳ ಮಧ್ಯಪ್ರವೇಶ ಮತ್ತು ಜಾಗೃತಿ

ಸಂತ್ರಸ್ತೆಯ ಹೇಳಿಕೆಯ ಪ್ರಕಾರ, ಈ ಹಿಂದೆ ಹಿಂದೂ ಸಂಘಟನೆಯ ಕಾರ್ಯಕರ್ತರು ಆಕೆಯ ಮನೆಗೆ ಭೇಟಿ ನೀಡಿ ಮುಫೀಸ್‌ನ ಹಿನ್ನೆಲೆ ಮತ್ತು ಆತನ ನೈಜ ಉದ್ದೇಶದ ಬಗ್ಗೆ ಎಚ್ಚರಿಸಿದ್ದರು. ಈ ಸಮಯದಲ್ಲಿ ಮುಫೀಸ್ ಸಂತ್ರಸ್ತೆಯ ಮೇಲೆ ಒತ್ತಡ ಹೇರಿ, ಆಕೆಯ ಕುಟುಂಬದ ವಿರುದ್ಧವೇ ವಿಡಿಯೋ ಹೇಳಿಕೆ ನೀಡುವಂತೆ ಮಾಡಿದ್ದ ಎನ್ನಲಾಗಿದೆ. ಈಗ ಅದೇ ಹಳೆಯ ವಿಡಿಯೋಗಳನ್ನು ಆತನ ಪರವಾಗಿರುವ ರಾಜಕೀಯ ಮುಖಂಡರು ಹಂಚಿಕೊಳ್ಳುತ್ತಿದ್ದಾರೆ ಎಂಬುದು ಸಂತ್ರಸ್ತೆಯ ಗಂಭೀರ ದೂರು ಆಗಿದೆ.

ರಣರಾಗಿಣಿ ಮಹಿಳಾ ಘಟಕದ ಭೇಟಿ ಮತ್ತು ಆಕ್ರೋಶ

ಪ್ರಕರಣದ ಗಂಭೀರತೆ ಅರಿತ 'ರಣರಾಗಿಣಿ ಮಹಿಳಾ ಘಟಕ'ದ ಪದಾಧಿಕಾರಿಗಳು ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ. ಘಟಕದ ಅಧ್ಯಕ್ಷೆ ಭವ್ಯಗೌಡ ಮಾಧ್ಯಮಗಳೊಂದಿಗೆ ಮಾತನಾಡಿ, 'ಇದು ಇಡೀ ಸ್ತ್ರೀ ಕುಲಕ್ಕೆ ಆದ ಅವಮಾನ. ಆರೋಪಿ ಮುಫೀಸ್ ಹೆಣ್ಣುಮಕ್ಕಳನ್ನು ಭೋಗದ ವಸ್ತುವಿನಂತೆ ಕಾಣುತ್ತಿದ್ದಾನೆ. ಈತನ ಹಿಂದೆ ದೊಡ್ಡ ಜಾಲವೇ ಇದೆ' ಎಂದು ಆರೋಪಿಸಿದರು. 'ಶಾಹಿನ್ ಗ್ಯಾಂಗ್ ರಾಜ್ಯದಲ್ಲಿ ಬೇರು ಬಿಟ್ಟಿದೆ. ಹಿಂದೂ ಹೆಣ್ಣುಮಕ್ಕಳನ್ನು ಮುಸ್ಲಿಂ ಯುವಕರೊಂದಿಗೆ ಸ್ನೇಹ ಬೆಳೆಸುವಂತೆ ಪ್ರೇರೇಪಿಸಲು ಮುಸ್ಲಿಂ ಯುವತಿಯರಿಗೆ ಹಣ ನೀಡಲಾಗುತ್ತಿದೆ. ಈ ಪ್ರಕರಣದಲ್ಲಿ ಆರೋಪಿ ಸಮೀರ್ ಅಕ್ಕನ ಪಾತ್ರವೂ ದೊಡ್ಡದಿದೆ, ಆಕೆಯನ್ನು ಮೊದಲು ಬಂಧಿಸಬೇಕು' ಎಂದು ರಣರಾಗಿಣಿ ಮಹಿಳಾ ಸಂಘಟನೆ ಅಧ್ಯಕ್ಷೆ ಭವ್ಯಗೌಡ ತಿಳಿಸಿದರು.

ಯುವತಿ ಹಾಗೂ ಮಹಿಳಾ ಸಂಘಟನೆ ಪ್ರಮುಖ ಬೇಡಿಕೆಗಳು

  • ಬಂಧನ: ಆರೋಪಿ ಮುಫೀಸ್ ಮತ್ತು ಈ ಕೃತ್ಯಕ್ಕೆ ಸಹಕರಿಸಿದ ಆತನ ಅಕ್ಕನನ್ನು ತಕ್ಷಣವೇ ಬಂಧಿಸಬೇಕು.
  • ಫಾಸ್ಟ್ ಟ್ರ್ಯಾಕ್ ಕೋರ್ಟ್: ಪ್ರಕರಣವನ್ನು ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ವಿಚಾರಣೆ ನಡೆಸಿ ಶೀಘ್ರವಾಗಿ ಶಿಕ್ಷೆ ವಿಧಿಸಬೇಕು.
  • ಬೆದರಿಕೆ ಕರೆಗಳು: ದೂರು ನೀಡಿದ ನಂತರವೂ ಸಂತ್ರಸ್ತೆಗೆ ಬೆದರಿಕೆ ಕರೆಗಳು ಬರುತ್ತಿದ್ದು, ಪೊಲೀಸ್ ಇಲಾಖೆ ಸೂಕ್ತ ರಕ್ಷಣೆ ನೀಡಬೇಕು.

ಸದ್ಯ ಸಂತ್ರಸ್ತೆ ಮುಫೀಸ್ ವಿರುದ್ಧ ಅತ್ಯಾ*ಚಾರ ಮತ್ತು ವಂಚನೆಯ ದೂರು ದಾಖಲಿಸಿದ್ದು, ಹುಬ್ಬಳ್ಳಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ರಾಜ್ಯಾದ್ಯಂತ ವಕೀಲರ ಸಮೂಹ ಸಂತ್ರಸ್ತೆಯ ಕುಟುಂಬಕ್ಕೆ ಕಾನೂನು ನೆರವು ನೀಡಲು ಮುಂದೆ ಬಂದಿದೆ.