Asianet Suvarna News Asianet Suvarna News

ಯಡಿಯೂರಪ್ಪ ಇಳಿದರೆ ಶ್ರೀರಾಮುಲುಗೆ ಸಿಎಂ ಸ್ಥಾನ ಕೊಡಬೇಕು

  • ಸಚಿವ ಶ್ರೀ ರಾಮುಲು ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಆಗ್ರಹ
  • ಕರ್ನಾಟಕ  ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಆಗ್ರಹ
Karnataka Hitha Rakshana Vedike Demands  CM post for sriramulu snr
Author
Bengaluru, First Published Jul 23, 2021, 10:52 AM IST
  • Facebook
  • Twitter
  • Whatsapp

ಮೈಸೂರು (ಜು.23): ಬಿ ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಿಸಿದರೆ ಆ ಸ್ಥಾನವನ್ನು ಸಚಿವ ಶ್ರೀ ರಾಮುಲು ಅವರಿಗೆ ನೀಡಬೇಕು ಎಂದು ಕರ್ನಾಟಕ  ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ. 

ಶ್ರೀ ರಾಮುಲು ಅವರು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದಾರೆ. ಪಕ್ಷಕ್ಕಾಗಿ ಸಾಕಷ್ಟು ಶ್ರಮಿಸಿರುವ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿರಲಿಲ್ಲ. ಈಗ ಎಲ್ಲಾ ವರ್ಗದ  ನಾಯಕರಾಗಿರುವ ರಾಮುಲು ಅವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕು.

'ಸಿಎಂ ನಿವಾಸಕ್ಕೆ ಬಂದಿದ್ದ ಸ್ವಾಮೀಜಿ ಶ್ರೀರಾಮುಲು ಸಿಎಂ ಆಗ್ಲಿ ಅಂದ್ರು'

ಬಿಜೆಪಿ ಅಧಿಕಾರಕ್ಕೆ ಬಂದರೆ ಪರಿಶಿಷ್ಟ ಪಂಗಡಕ್ಕೆ ಶೇ.7.5ರಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿತ್ತು. ಆದರೆ ಆ ಆಶ್ವಾಸನೆಯನ್ನು ಈಡೇರಿಸಿಲ್ಲ.  60 ಲಕ್ಷಕ್ಕಿಂತಲೂ  ಹೆಚ್ಚು ಜನಸಂಖ್ಯೆ  ಹೊಂದಿರುವ ನಾಯಕ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಿಲ್ಲ. 

ಈಗ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸ್ಥಾನದಿಂದ ಪದಚ್ಯುತಿಗೊಳಿಸುವ ಯತ್ನ ನಡೆದಿದ್ದು, ಒಂದು ವೇಳೆ ಹಾಗೇನಾದರೂ ಆದರೆ ಬಿ. ಶ್ರೀ ರಾಮುಲು ಅವರನ್ನು ಮುಖ್ಯಮಂತ್ರಿ ಮಾಡಬೇಕು. 

ಒಂದು ವೇಳೆ ಬೇಡಿಕೆ ಈಡೇರದೇ ಹೋದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ವೇದಿಕೆ ಅಧ್ಯಕ್ಷ ದ್ಯಾವಪ್ಪ ನಾಯಕ ಎಚ್ಚರಿಸಿದರು.

Follow Us:
Download App:
  • android
  • ios