ಕಾದ ಬಾಣಲೆಯಂತಾದ ರಾಯಚೂರು! ಬಿಸಲಿನ ತಾಪದಿಂದ ಘನ ತ್ಯಾಜ್ಯ ಘಟಕಕ್ಕೆ ಬೆಂಕಿ!

ಬಿರು ಬಿಸಲಿನಿಂದ ರಾಯಚೂರು ಜಿಲ್ಲೆ ಅಕ್ಷರಶಃ ಕಾದ ಬಾಣಲೆಯಂತಾಗಿದ್ದು,  ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಮಧ್ಯಾಹ್ನ ಹನ್ನೆರಡು ಗಂಟೆ ಹೊತ್ತಿಗೇ 40 ಡಿಗ್ರಿ ಸೆಲ್ಸಿಯೆಸ್‌ಗೆ ಏರಿಕೆಯಾಗುವ ಉಷ್ಣಾಂಶ, ಬಿಸಿಗಾಳಿ ಇನ್ನೊಂದೆಡೆ ಇದರಿಂದ ಬೆಂಕಿ ಅವಘಢಗಳು ಸಂಭವಿಸುತ್ತಿವೆ.

Karnataka Heat stroke Fire at solid waste plant in yaklasapur at raichur rav

ರಾಯಚೂರು (ಏ.8): ಬಿರು ಬಿಸಲಿನಿಂದ ರಾಯಚೂರು ಜಿಲ್ಲೆ ಅಕ್ಷರಶಃ ಕಾದ ಬಾಣಲೆಯಂತಾಗಿದ್ದು,  ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಮಧ್ಯಾಹ್ನ ಹನ್ನೆರಡು ಗಂಟೆ ಹೊತ್ತಿಗೇ 40 ಡಿಗ್ರಿ ಸೆಲ್ಸಿಯೆಸ್‌ಗೆ ಏರಿಕೆಯಾಗುವ ಉಷ್ಣಾಂಶ, ಬಿಸಿಗಾಳಿ ಇನ್ನೊಂದೆಡೆ ಇದರಿಂದ ಬೆಂಕಿ ಅವಘಢಗಳು ಸಂಭವಿಸುತ್ತಿವೆ.

ರಾಯಚೂರು ನಗರದ ಯಕ್ಲಾಸಪುರ ಬಳಿಯ ಘನ ತ್ಯಾಜ್ಯ ವಿಲೇವಾರಿ ಘಟಕ ಬಿಸಿಲಿನ ತಾಪಮಾನದಿಂದ ಕಿಡಿ ಹೊತ್ತಿದ್ದು ದಟ್ಟ ಹೊಗೆಯೊಂದಿಗೆ ಹೊತ್ತಿ ಉರಿಯುತ್ತಿದೆ. ಕಳೆದೆರಡು ದಿನಗಳಿಂದ ಉರಿಯುತ್ತಿರುವ ಬೆಂಕಿ. ಕಸದ ರಾಶಿಯಲ್ಲಿ ಕಾಣಿಸಿಕೊಂಡಿರುವ ಬೆಂಕಿ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ದಟ್ಟ ಹೊಗೆಯಿಂದ ಸುತ್ತಮುತ್ತಲ ಜನವಸತಿ ಪ್ರದೇಶದಲ್ಲಿ ಉಸಿರಾಟದ ಸಮಸ್ಯೆ ಇನ್ನಷ್ಟು ಉಲ್ಭಣಗೊಂಡಿದೆ.

ಹಲವು ರಾಜ್ಯಗಳಲ್ಲಿ ಭಾರಿ ಸೆಖೆ ಬಿಸಿಗಾಳಿ: ಮಳೆಯಾಗುವ ಸಾಧ್ಯತೆ: ಹವಾಮಾನ ಇಲಾಖೆ ಮಾಹಿತಿ

ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಪ್ರತಿ ಬೇಸಿಗೆಯಲ್ಲೂ ಬೆಂಕಿ ಹೊತ್ತಿಕೊಳ್ಳುತ್ತಿದೆ. ಇದರಿಂದ ಪಕ್ಕದ ಬಡಾವಣೆಗೆ ವ್ಯಾಪಿಸಿದ್ದರಿಂದ ಸುತ್ತಮುತ್ತಿಲಿನ ಜನರು ಆತಂಕದಲ್ಲಿ ದಿನದೂಡುವಂತೆ ಮಾಡಿದೆ.

ನಿನ್ನೆಯಷ್ಟೇ ಬಿಸಲಿಗೆ ಮೃತಪಟ್ಟ ವೃದ್ಧ:

ನಿನ್ನೆ ಭಾನುವಾರ ಯಕ್ಲಾಸಪುರ ಗ್ರಾಮದ 70 ವರ್ಷದ ವೃದ್ಧ ರಸ್ತೆಯಲ್ಲಿ ನಡೆದುಹೋಗುತ್ತಿರುವಾಗಲೇ  ಬಿಸಲಿಗೆ ಸುಸ್ತಾಗಿ ತಲೆತಿರುಗಿ ಬಿದ್ದು ಮೃತಪಟ್ಟಿದ್ದ ವೃದ್ಧ. ಇದೀಗ ತ್ಯಾಜ್ಯ ಘಟಕಕ್ಕೆ ಬಿದ್ದಿರುವ ಬೆಂಕಿ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ವಿಪರೀತ ಉಷ್ಣಾಂಶ ಹೆಚ್ಚಳವಾಗಿರುವುದು ವೃದ್ಧರು, ಮಕ್ಕಳು ಎಚ್ಚರಿಕೆಯಿಂದ ಇರಬೇಕಿದೆ.

ಬಿಸಿಲಿನ ತಾಪಕ್ಕೆ ಬಿಎಂಟಿಸಿ ಎಲೆಕ್ಟ್ರಿಕಲ್ ಬಸ್ ನಲ್ಲಿ ಬೆಂಕಿ!

ಯಾದಗಿರಿ: ನಡುರಸ್ತೆಯಲ್ಲೇ ಧಗಧಗನೇ ಉರಿದ ವಾಹನ!

ಬಿಸಿಲಿನ ತಾಪಕ್ಕೆ ಬೆಂಕಿ ತಗುಲಿ ನಡುರಸ್ತೆಯಲ್ಲೇ ಟಾಟಾ ಏಸ್ ವಾಹನ ಹೊತ್ತಿ ಉರಿದ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಖಾನಾಪುರ ಗ್ರಾಮದಲ್ಲಿ ನಡೆದಿದೆ.

Karnataka Heat stroke Fire at solid waste plant in yaklasapur at raichur rav

ಊಟದ ಪ್ಲಾಸ್ಟಿಕ್ ತಟ್ಟೆ ಸಾಗಿಸಲಾಗುತ್ತಿತ್ತು ವಾಹನ, ಹೈದರಾಬಾದ್‌ನಿಂದ ಲಿಂಗಸಗೂರು ಕಡೆಗೆ ಹೊರಟಿತ್ತು. ಈ ವೇಳೆ ದಾರಿ ಮಧ್ಯೆ ಭತ್ತ ಕಟಾವು ಮಾಡಿದ ಗದ್ದೆಗೆ ಬೆಂಕಿ ಹಚ್ಚಿದ್ದ ರೈತರು. ಗದ್ದೆಗೆ ಹಚ್ಚಿದ್ದ ಬೆಂಕಿ ವಾಹನಕ್ಕೆ ತಾಗಿರುವ ಶಂಕೆ ವ್ಯಕ್ತವಾಗಿದೆ. ನೋಡನೋಡುತ್ತಲೇ ವಾಹನಕ್ಕೆ ಆವರಿಸಿಕೊಂಡ ಬೆಂಕಿ. ಕೂಡಲೇ ಧಾವಿಸಿ ಬಂದ ಸ್ಥಳೀಯರು ಬೆಂಕಿ ನಂದಿಸಿದ್ದಾರೆ. ಬೆಂಕಿ ಅನಾಹುತದಿಂದ ಅಂದಾಜು ಮೂರು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಹಾನಿಯಾಗಿವೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Latest Videos
Follow Us:
Download App:
  • android
  • ios