ಕರ್ನಾಟಕದಲ್ಲಿ ಲವ್ ಜಿಹಾದ್ ಹಾಗೂ ಮತಾಂತರದ ಟ್ರೈನಿಂಗ್ ಸೆಂಟರ್ ಇದೆ; ಮಾಜಿ ಸಿಎಂ ಜಗದೀಶ್ ಶೆಟ್ಟರ್

ನಮ್ಮ ರಾಜ್ಯದಲ್ಲಿ ಲವ್ ಜಿಹಾದ್ ಮತ್ತು ಮತಾಂತರದ ತರಬೇತಿ ಕೇಂದ್ರವಿದೆ. ಇದರಿಂದಲೇ ನೇಹಾ ಹಿರೇಮಠ್ ಕೊಲೆ ಮಾಡಲಾಗಿದೆ.  ಈ ಬಗ್ಗೆ ಸಿಐಡಿ ತನಿಖೆಯಾಗಬೇಕು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

Karnataka have Love Jihad and Conversion Training Center  said Former CM Jagadish Shettar sat

ಹುಬ್ಬಳ್ಳಿ (ಏ.20): ಸರ್ಕಾರದ ವ್ಯವಸ್ಥೆ ಸರಿ ಇಲ್ಲದಿದ್ದಾಗ ಈ ರೀತಿಯ ಮನಸ್ಥಿತಿ ಬರಲು ಸಾಧ್ಯ. ಮೊದಲು ಉತ್ತರ ಪ್ರದೇಶ ಗೂಂಡಾ ರಾಜ್ಯ ಎನಿಸಿಕೊಂಡಿತ್ತು. ಈಗ ಅಲ್ಲಿ ಯೋಗಿಯವರ ಆಡಳಿತವಿರುವ ಹಿನ್ನೆಲೆಯಲ್ಲಿ ಶಾಂತಿ ವಾತಾವರಣ ಮೂಡಿದೆ. ಆದರೆ, ಈಗ ನಮ್ಮ ರಾಜ್ಯದಲ್ಲಿ ಇಂತಹ ಕೃತ್ಯಗಳು ನಡೆಯುತ್ತಿವೆ. ಲವ್ ಜಿಹಾದ್ ಹಾಗೂ ಮತಾಂತರದ ಟ್ರೈನಿಂಗ್ ಸೆಂಟರ್ ಇಲ್ಲಿರಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆರೋಪ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಕೊಲೆಯಾದ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ್ ಅವರ ಮನೆಗೆ ಭೇಟಿ ನೀಡಿ ಅವರ ಪೋಷಕರಿಗೆ ಸಾಂತ್ವನ ಹೇಳಿದ ಬಳಿಕ ಜಗದೀಶ್ ಶೆಟ್ಟರ್ ಮಾಧ್ಯಮಗಳೊಂದಿಗೆ ಮಾತನಾಡಿದರು. ಇದೊಂದು ರಾಕ್ಷಸಿ ಕೃತ್ಯವಾಗಿದೆ. ಸರ್ಕಾರದ ವ್ಯವಸ್ಥೆ ಸರಿ ಇಲ್ಲದಿದ್ದಾಗ ಈ ರೀತಿಯ ಮನಸ್ಥಿತಿ ಬರಲು ಸಾಧ್ಯ. ಈ ಹಿಂದೆ ಉತ್ತರ ಪ್ರದೇಶ ಗೂಂಡಾ ರಾಜ್ಯ ಎನಿಸಿಕೊಂಡಿತ್ತು. ಈಗ ಅದೇ ಉತ್ತರ ಪ್ರದೇಶದಲ್ಲಿ ಶಾಂತಿ ವಾತಾವರಣ ಇದೆ. ಇದಕ್ಕೆ ಯೋಗಿ ಆಡಳಿತ ಕಾರಣ. ಆದರೆ, ರಾಜ್ಯದಲ್ಲಿ ನಡೆದ ಘಟನೆಗೆ ಅಲ್ಪಸಂಖ್ಯಾತರ ತುಷ್ಟಿಕರಣ ಇದಕ್ಕೆ ಕಾರಣ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿ ನೇಹಾ ಕೊಂದವನನ್ನು ಗಲ್ಲಿಗೇರಿಸಿ ಎಂದ ಸಚಿವ ಪಾಟೀಲ್: ಬೇಡ ಜನರಿಗೊಪ್ಪಿಸಿ ಎಂದ ನಟಿ ರಚಿತಾ ರಾಮ್

ರಾಜ್ಯದಲ್ಲಿ ಲವ್ ಜಿಹಾದ್ ಟ್ರೈನಿಂಗ್ ಸೆಂಟರ್ ಇರಬೇಕು. ಈ ಬಗ್ಗೆ ಸಿಒಡಿ ಇತ್ಯಾದಿ ತನಿಖೆ ಮಾಡಬೇಕು. ಇವರು ಯಾವ ರೀತಿ ತನಿಖೆ ಮಾಡುತ್ತಿದ್ದರೋ ಗೊತ್ತಾಗ್ತಿಲ್ಲ. ಈ ಕೊಲೆ ಘಟನೆಯ ಹಿಂದೆ ಇನ್ನೂ 5 ಜನ ಇದಾರೆ ಅಂತ ಅವರ ತಂದೆ ಹೇಳ್ತಿದ್ದಾರೆ. ಅದರ ಬಗ್ಗೆ ಯಾವುದೇ ರೀತಿಯ ಕ್ರಮವಲ್ಲ. ಈಗ ಕೆಲವರು ನೇಹಾಳ ಕ್ಯಾರೆಕ್ಟರ್ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆ. ತನಿಖೆ ನಡೆವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ವೈಯಕ್ತಿಕ ಘಟನೆ ಅಂತ ಹೇಳಿಕೆ ಕೊಟ್ಟಿದ್ದಾರೆ. ಅದರ ದುಷ್ಪರಿಣಾಮ ನೋಡಿ ರಿಯಾಕ್ಟ್ ಮಾಡಬೇಕು. ಯಾರನ್ನೋ ಬಚಾವ್ ಮಾಡಲು ಈ ರೀತಿಯ ಹೇಳಿಕೆ ನೀಡಬಾರದು. ಈ ಘಟನೆಯ ಹಿಂದಿರೋ ಎಲ್ಲರ ಬಂಧನವಾಗಬೇಕು ಎಂದು ಆಗ್ರಹಿಸಿದರು.

ಹೆಣ್ಣುಮಕ್ಕಳ ಮೇಲಿನ ದಾಳಿ, ಬಾಂಬ್ ಸ್ಫೋಟ ಸಾಮಾನ್ಯ ಘಟನೆಯಲ್ಲ, ನೇಹಾ ಹತ್ಯೆ ಉಲ್ಲೇಖಿಸಿ ಕಾಂಗ್ರೆಸ್ ಕುಟುಕಿದ ಮೋದಿ!

ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬಸ್ಥರಿಗೆ ಸಾಂತ್ವನ ಹೇಳುವಷ್ಟು ಟೈಮ್ ಇಲ್ಲವೇ? ಅವರಿಗೆ ವ್ಯವಧಾನವೇ ಇಲ್ಲ ಅಂದ್ರೆ ಹೇಗೆ? ಇವ್ರು ತುಷ್ಟಿಕಾರಣ ರಾಜಕಾರಣಕ್ಕೆ ಜೋತು ಬಿದ್ದಿದ್ದಾರೆ. ಇದರಲ್ಲಿ ರಾಜಕಾರಣ ಮಾಡೋ ಪ್ರಶ್ನೆಯೇ ಇಲ್ಲ. ನಿಷ್ಪಕ್ಷಪಾತ ತನಿಖೆ ಆಗಬೇಕು. ರಾಜ್ಯದಲ್ಲಿ ಇಂತಹ ದುಷ್ಕರ್ಮಿಗಳನ್ನು ಹೆಡೆಮುರಿಕಟ್ಟಲು ಎನ್ ಕೌಟರ್ ಕಾನೂನು ಜಾರಿಗೆ ತರಬೇಕು. ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ಕೊಡಬೇಕು. ಆರೋಪಿಗೆ ತಕ್ಷಣ ಏನಾದ್ರೂಂದು ಕಠಿಣ ಶಿಕ್ಷೆ ಆಗಬೇಕು. ಎನ್ಕೌಂಟರ್ ಮೂಲಕ ಎಚ್ಚರಿಕೆ ಗಂಟೆ ಬಾರಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.

Latest Videos
Follow Us:
Download App:
  • android
  • ios